ತಾಳಿ ಬಿಗಿಯಾಗಿ ಕಟ್ಟಪ್ಪ, ಹೊಸ ಗ್ಲಾಸು ಅಷ್ಟೊಂದ್ ಬಿಗಿಯಾಗಿ ಕಟ್ಬೇಡ; ಏನಿದು ಲಕ್ಷ್ಮೀ ನಿವಾಸ ಕಥೆ!

Published : Nov 26, 2023, 06:00 PM ISTUpdated : Nov 26, 2023, 06:02 PM IST
ತಾಳಿ ಬಿಗಿಯಾಗಿ ಕಟ್ಟಪ್ಪ, ಹೊಸ ಗ್ಲಾಸು ಅಷ್ಟೊಂದ್ ಬಿಗಿಯಾಗಿ ಕಟ್ಬೇಡ; ಏನಿದು ಲಕ್ಷ್ಮೀ ನಿವಾಸ ಕಥೆ!

ಸಾರಾಂಶ

ಪ್ರೋಮೋ ನೋಡಲು ತುಂಬಾ ಕಲರ್‌ಫುಲ್ ಆಗಿದೆ. ಮದುವೆ ಸೀನ್ ಅದರಲ್ಲೂ ಆಗತಾನೇ ಕಟ್ಟಿ ಮುಗಿಸಿದ ಹೊಸ ಮನೆಯಲ್ಲಿ ಮದುವೆ ಅಬ್ಬರ-ಆಡಂಬರ. ಈ ದೃಶ್ಯವು ಸಖತ್ ರಂಗುರಂಗಾಗಿ ಮೂಡಿ ಬಂದಿದೆ. ಹಿರಿಯ ನಟಿ ಶ್ವೇತಾ ಹಾಗೂ ಉಳಿದ ಹಲವು ಕಲಾವಿದರ ಬಳಗ ಈ ಪ್ರೊಮೋದಲ್ಲಿ ಭಾರೀ ಗಮನ ಸೆಳೆಯುತ್ತಿವೆ. 

ಜೀ ಕನ್ನಡದಲ್ಲಿ ಹೊಸ ಧಾರಾವಾಹಿಯೊಂದು ಶುರುವಾಗಲಿದೆ. 'ಲಕ್ಷ್ಮೀ ನಿವಾಸ' ಹೆಸರಿನಲ್ಲಿ ಮೂಡಿಬರಲಿರುವ ಈ ಸೀರಿಯಲ್‌ ಪ್ರೊಮೋ ಜೀ ಕನ್ನಡ ವಾಹಿನಿಯ ಸೋಷಿಯಲ್‌ ಮೀಡಿಯಾ ಪೇಜ್‌ನಲ್ಲಿ ಬಿಡುಗಡೆಯಾಗುತ್ತಿವೆ. ಒಂದಾದ ಬಳಿಕ ಮತ್ತೊಂದು ಪ್ರೋಮೋ ಬಿಡುಗಡೆಯಾಗುತ್ತಿದ್ದು, ಶೀಘ್ರದಲ್ಲಿ ಸೀರಿಯಲ್ ಪ್ರಸಾರ ಆರಂಭವಾಗಲಿದೆ ಎನ್ನಲಾಗುತ್ತಿದೆ. ಈ ಪ್ರೋಮೋದಲ್ಲಿ ಕಾಣುತ್ತಿರುವ ಅಚ್ಚರಿ ಎಂದರೆ, ಹಲವು ದಶಕಗಳ ಹಿಂದೆ ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ನಟಿ ಶ್ವೇತಾ ಈ ಧಾರಾವಾಹಿಯ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗೆಜ್ಜೆನಾದ, ಚೈತ್ರದ ಪ್ರೇಮಾಂಜಲಿ ಸೇರಿದಂತೆ ಹತ್ತು-ಹಲವು ಚಿತ್ರಗಳಲ್ಲಿ ಕನ್ನಡ ಪ್ರೇಕ್ಷಕರನ್ನು ರಂಜಿಸಿದ್ದ ನಟಿ ಶ್ವೇತಾ!

'ಮನೆ ಕಟ್ಟಿ ನೋಡು, ಮದುವೆ ಮಾಡಿ‌ ನೋಡು ಅಂತ ಹಂಬಲಿಸೋ ಪ್ರತೀ ತುಂಬು ಕುಟುಂಬದ ಕಥೆ!' ಶೀಘ್ರದಲ್ಲಿ.., ಎಂಬ ಬರಹ ಪ್ರೋಮೋ ಟ್ಯಾಗ್ ಲೈನ್ ಆಗಿದೆ. ಅಂದರೆ ಈ ಸೀರಿಯಲ್‌ನಲ್ಲಿ ಮನೆ ಕಟ್ಟುವುದು, ಮದುವೆ ಮಾಡುವುದು ಹೈಲೈಟ್ ಆಗಲಿರುವುದಂತೂ ಪಕ್ಕಾ. ಇದೀಗ ಬಿಡುಗಡೆಯಾಗಿರುವ ಪ್ರೊಮೋದಲ್ಲಿ ಹೆಣ್ಮಕ್ಕಳ ಮದುವೆ ಮಾಡ್ಬೇಕು ಅನ್ನೋದು ಲಕ್ಷ್ಮೀ ಕನಸು, ಅದಕ್ಕೂ ಮೊದ್ಲು ಮನೆ ಕಟ್ಬೇಕು ಅನ್ನೋದು ಶ್ರೀನಿವಾಸನ ಕನಸು!, ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಅನ್ನೋದು ಎಲ್ಲಾ ಮಧ್ಯಮ ವರ್ಗದ ಜನರ ಕನಸು, ಈ ಕನಸಿನ ಕಥೆ ಹೇಳೋಕೆ ಬರ್ತಿದೆ, ಲಕ್ಷ್ಮೀ ನಿವಾಸ, ಶೀಘ್ರದಲ್ಲಿ..' ಎಂಬ ವಾಕ್ಯ ಗಮನಸೆಳೆಯುತ್ತಿದೆ. 

ಯಾವತ್ತೂ ನಗುನಗುತ್ತಿರು, ಅಮ್ಮನ ಮಾತೇ ನನಗೆ ವೇದವಾಕ್ಯ; ರಶ್ಮಿಕಾ ಮಾತಿಂದ ಕಣ್ಣೀರಾದ್ರು ಸಂದರ್ಶಕಿ!

ಪ್ರೋಮೋ ನೋಡಲು ತುಂಬಾ ಕಲರ್‌ಫುಲ್ ಆಗಿದೆ. ಮದುವೆ ಸೀನ್ ಅದರಲ್ಲೂ ಆಗತಾನೇ ಕಟ್ಟಿ ಮುಗಿಸಿದ ಹೊಸ ಮನೆಯಲ್ಲಿ ಮದುವೆ ಅಬ್ಬರ-ಆಡಂಬರ. ಈ ದೃಶ್ಯವು ಸಖತ್ ರಂಗುರಂಗಾಗಿ ಮೂಡಿ ಬಂದಿದೆ. ಹಿರಿಯ ನಟಿ ಶ್ವೇತಾ ಹಾಗೂ ಉಳಿದ ಹಲವು ಕಲಾವಿದರ ಬಳಗ ಈ ಪ್ರೊಮೋದಲ್ಲಿ ಭಾರೀ ಗಮನ ಸೆಳೆಯುತ್ತಿವೆ. ಮದುವೆ ಮತ್ತು ಹೊಸ ಮನೆ ಗೃಹ ಪ್ರವೇಶ ಈ ಎರಡೂ ಸಂಪ್ರದಾಯಗಳು ಇಲ್ಲಿ ಮೇಳೈಸುವ ಮೂಲಕ ಅದ್ದೂರಿತನ ಹಾಗೂ ಬಣ್ಣಬಣ್ಣಗಳ ವಿಶೇಷತೆ ಥಟ್ಟನೇ ಗೋಚರಿಸುತ್ತದೆ. ಪ್ರೋಮೋ ನೋಡಿದ ಕಿರುತೆರೆ ವೀಕ್ಷಕರು, ಅದರಲ್ಲೂ ಮಧ್ಯಮ ವರ್ಗದ ವೀಕ್ಷಕರು 'ಲಕ್ಷ್ಮೀ ನಿವಾಸ'ಕ್ಕೆ ಕಾಯುವಂತಾಗಿದೆ. 

ಎಷ್ಟು ಹೇಳಿದ್ರೂ ನೀವು ಏನೂ ಮಾಡ್ತಾ ಇಲ್ಲ ಎಂದರೆ ನಿಮಗೆ ಕಣ್ಣಿಲ್ಲ, ಕಿವಿ ಇಲ್ಲ; ಬೃಂದಾವನಕ್ಕೆ ಏನ್ ಕಾಮೆಂಟ್ಸ್‌ ಗುರೂ!

ಕನಸಿನ ಮೂಲಕ ಸೀರಿಯಲ್ ದೃಶ್ಯ ಮೂಡಿ ಬಂದಿದ್ದು, ಪ್ರೋಮೋ ವಿಭಿನ್ನವಾಗಿದೆ ಎನ್ನಬಹುದು. ಮಧ್ಯಮ ವರ್ಗದ ಗಂಡ-ಹೆಂಡತಿ ರಾತ್ರಿ ಮಲಗಿದಲ್ಲೇ ತಮ್ಮ ಕನಸುಗಳನ್ನು ಕನಸಿನ ಮೂಲಕವೇ ನನಸು ಮಾಡಿಕೊಂಡಿದ್ದು ಕಂಡು ಬರುತ್ತಿದೆ. ಎಚ್ಚರವಾದಾಗ, ಕರೆಂಟ್ ಕೂಡ ಹೋಗುತ್ತದೆ. ತಕ್ಷಣವೇ ಗಂಡಿನ ಬಳಿಯಿದ್ದ ಹೆಂಡತಿ 'ಕರೆಂಟ್ ಬಿಲ್ ಕಟ್ರೀ' ಎನ್ನುವಳು. ಅದಕ್ಕೂ ಮೊದಲು ಅವರು ಮನೆ ಕಟ್ಟಿದಂತೆ, ಹೊಸ ಮನೆಯಲ್ಲಿ ಮದುವೆ ಮಾಡಿದಂತೆ ಕನಸು ಕಂಡಿರುತ್ತಾರೆ. ಡೈಲಾಗ್‌ಗಳಲ್ಲಿ ಸಾಕಷ್ಟು ಆಟ ಆಡಿದ್ದು ಕೂಡ ಕಂಡು ಬರುತ್ತಿದ್ದು, ಸೀರಿಯಲ್ ಪ್ರಸಾರಕ್ಕೆ ಕಾಯುವಂತೆ ಮಾಡಿದೆ ಎನ್ನಬಹುದು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!