ಬಿಗ್​ಬಾಸ್​ ಮನೆ ಸೆಕ್ಸ್​ ವಿಡಿಯೋ ವೈರಲ್​ ಬೆನ್ನಲ್ಲೇ ಅರ್ಮಾನ್​ ಪತ್ನಿ ಕೇಸ್ ದಾಖಲು? ನಿಮ್ಮ ಹೆಸ್ರೂ ಇದ್ಯಾ ನೋಡಿ!

Published : Jul 28, 2024, 01:01 PM IST
ಬಿಗ್​ಬಾಸ್​ ಮನೆ ಸೆಕ್ಸ್​ ವಿಡಿಯೋ ವೈರಲ್​ ಬೆನ್ನಲ್ಲೇ ಅರ್ಮಾನ್​ ಪತ್ನಿ ಕೇಸ್ ದಾಖಲು? ನಿಮ್ಮ ಹೆಸ್ರೂ ಇದ್ಯಾ ನೋಡಿ!

ಸಾರಾಂಶ

ಯೂಟ್ಯೂಬರ್​ ಅರ್ಮಾನ್​ ಮಲಿಕ್​ ಅವರ ಸೆಕ್ಸ್​ ವಿಡಿಯೋ ಎನ್ನಲಾದ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಪತ್ನಿ ಪಾಯಲ್​ ಮಲಿಕ್​ ನೆಟ್ಟಿಗರ ವಿರುದ್ಧ ಕೇಸ್​ ಹಾಕಲು ರೆಡಿಯಾಗಿದ್ದಾರೆ. ಅವರು ಹೇಳಿದ್ದೇನು?  

ಇಬ್ಬರೂ ಪತ್ನಿಯರನ್ನು ಒಟ್ಟಿಗೇ ಗರ್ಭಿಣಿ ಮಾಡುವ ಮೂಲಕವೂ ಫೇಮಸ್​ ಆದವರು ವಿವಾದಿತ ಯೂಟ್ಯೂಬರ್​ ಅರ್ಮಾನ್​ ಮಲಿಕ್​.  ಪಾಯಲ್​ ಮಲಿಕ್​ ಮತ್ತು ಕೃತಿಕಾ ಮಲಿಕ್​ ಇವರ ಪತ್ನಿಯರು.  ಖ್ಯಾತ ಗಾಯಕ ಅರ್ಮಾನ್​ ಮಲಿಕ್​ ಅವರ ಹೆಸರನ್ನೇ ಇಟ್ಟುಕೊಂಡು ಸಾಕಷ್ಟು ಹಲ್​ಚಲ್​ ಕೂಡ ಸೃಷ್ಟಿಸಿದ್ದಾರೆ ಈ ಅರ್ಮಾನ್​. ಇದೇ ಕಾರಣಕ್ಕೆ ಗಾಯಕ ಅರ್ಮಾನ್​ ಒಮ್ಮೆ ಸಕತ್​ ಗರಂ ಆಗಿ ಬಾಯಿಗೆ ಬಂದ ಹಾಗೆ ಬೈದದ್ದೂ ಉಂಟು. ಈ ಮೂವರು ಸೇರಿ ಕಾಂಟ್ರವರ್ಸಿ ಮಾಡುತ್ತಲೇ ಯೂಟ್ಯೂಬ್​ನಲ್ಲಿ ಮಿಲಿಯನ್​ಗಟ್ಟಲೆ ವ್ಯೂಸ್​ ಪಡೆಯುತ್ತಿದ್ದಾರೆ. ಇದೇ ಕಾರಣಕ್ಕೆ ಮೂವರೂ ಬಿಗ್​ಬಾಸ್​ ಓಟಿಟಿ-1ನಲ್ಲಿ ಸ್ಥಾನವನ್ನೂ ಪಡೆದುಕೊಂಡಿದ್ದಾರೆ. ಆದರೆ ಪಾಯಲ್​ ಇದಾಗಲೇ ಎಲಿಮಿನೇಟ್​ ಆಗಿ ಹೊರಕ್ಕೆ ಬಂದಿದ್ದು, ಕೃತಿಕಾ ಮತ್ತು ಅರ್ಮಾನ್​ ಬಿಗ್​ಬಾಸ್​​ ಮನೆಯಲ್ಲಿ ಇದ್ದಾರೆ.  ಆದರೆ ಇತ್ತೀಚೆಗೆ ಇವರಿಬ್ಬರೂ ಬಿಗ್​ಬಾಸ್​ ಮನೆಯಲ್ಲಿ ಲೈಂಗಿಕ ಕ್ರಿಯೆಯೆಲ್ಲಿ ತೊಡಗಿದ್ದಾರೆ ಎನ್ನಲಾದ ವಿಡಿಯೋ ಒಂದು ವೈರಲ್​ ಆಗಿತ್ತು. ಅದೀಗ ಸೋಷಿಯಲ್​ ಮೀಡಿಯಾದಲ್ಲಿ ಬಹಳ ಸದ್ದು ಮಾಡುತ್ತಿದೆ. 

  ಈ ವೈರಲ್​ ವಿಡಿಯೋದಲ್ಲಿ, ಬಿಗ್​ಬಾಸ್​ ಮನೆಯ ಲೈಟ್​ ಆಫ್​ ಆಗುತ್ತಿದ್ದಂತೆಯೇ ಮಂಚದ ಮೇಲೆ ಪತ್ನಿ ಜೊತೆ ಅರ್ಮಾನ್​ ರೊಮಾನ್ಸ್​ನಲ್ಲಿ ತೊಡಗಿದ್ದಾರೆ. ಇದು ಬಿಗ್​ಬಾಸ್​ನ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಇದಾಗಲೇ ಬಿಗ್​ಬಾಸ್​ ವಿರುದ್ಧ ಅಶ್ಲೀಲತೆಯ ವಿರುದ್ಧ ಕೇಸೂ ದಾಖಲಾಗಿದ್ದು, ಇದು ಅಸಲಿ ವಿಡಿಯೋ ಅಲ್ಲ, ಎಡಿಟೆಡ್​ ವಿಡಿಯೋ ಎಂದು ಜೀ ಸಿನಿಮಾ ಸ್ಪಷ್ಟನೆ ಕೂಡ ಕೊಟ್ಟಿದೆ. ಆದರೆ,  ಟಿಆರ್​ಪಿಗೋಸ್ಕರ ಬಿಗ್​ಬಾಸ್​ನಲ್ಲಿ ಇವೆಲ್ಲಾ ಮಾಮೂಲು, ಉದ್ದೇಶಪೂರ್ವಕವಾಗಿಯೇ ಇಂಥ ಕೃತ್ಯ ಮಾಡಿಸಿ, ಅದನ್ನು ವೈರಲ್​ ಮಾಡಲಾಗುತ್ತದೆ ಎನ್ನುವ ಗಂಭೀರ ಆರೋಪವೂ ಇದೆ. ಈ  ವಿಡಿಯೋದಲ್ಲಿ ದಂಪತಿ ಬೆಡ್​ಷೀಟ್​ ಹೊದ್ದುಕೊಂಡು ರೊಮಾನ್ಸ್​ನಲ್ಲಿ ತೊಡಗಿರುವುದು ಅವರ ಚಟುವಟಿಕೆಯಲ್ಲಿಯೇ ತಿಳಿಯುತ್ತಿದೆ.  

ಬಿಗ್​ಬಾಸ್​ ಮಂಚದ ಮೇಲೆ ಸ್ಪರ್ಧಿಗಳ ಖುಲ್ಲಂ ಖುಲ್ಲಾ ರೊಮಾನ್ಸ್​! ವೈರಲ್​ ಆಯ್ತು ವಿಡಿಯೋ...

ಇದೀಗ ಬಿಗ್​ಬಾಸ್​ ಮನೆಯಿಂದ ಹೊರಕ್ಕೆ ಬಂದಿರುವ ಅರ್ಮಾನ್​ ಪತ್ನಿ ಪಾಯಲ್​ಗೆ ಜೀವ ಬೆದರಿಕೆ ಬರುತ್ತಿದೆಯಂತೆ. ಈ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಪಾಯಲ್​ ಅವರಿಗೆ ಹಲವಾರು ರೀತಿಯ ಬೆದರಿಕೆ ಬರುತ್ತಿದೆಯಂತೆ. ಯಾಕೆ ಬೆದರಿಕೆ ಎಂದು ಪಾಯಲ್​ ಸ್ಪಷ್ಟಪಡಿಸದಿದ್ದರೂ, ಬೆದರಿಕೆ ಹಾಗೂ ಕೆಟ್ಟ ಕಮೆಂಟ್​ ಹಾಕುವವರ ಹೆಸರು ಲಿಸ್ಟ್​ ಮಾಡಿಯಾಗಿದ್ದು, ಅವರೆಲ್ಲರ ವಿರುದ್ಧ ಕೇಸು ದಾಖಲು ಮಾಡುತ್ತಿರುವುದಾಗಿ ವಿಡಿಯೋ ಮೂಲಕ ನೆಟ್ಟಿಗರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಇದಾಗಲೇ ಬೆದರಿಕೆ ಮತ್ತು ಕೆಟ್ಟ ಕಮೆಂಟ್​ ಹಾಕುವವರ ಹೆಸರನ್ನು ತಯಾರಿಸಿದ್ದೇನೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತಿದ್ದೇನೆ. ಇದು ಮುಂದುವರೆದರೆ ಅವರ ಹೆಸರನ್ನೂ ಸೇರಿಸಿ, ಎಲ್ಲರ ವಿರುದ್ಧ ಕೇಸ್​ ಹಾಕುತ್ತೇನೆ ಎಂದು ಪಾಯಲ್​ ಹೇಳಿದ್ದಾರೆ. ಆದರೆ ಇದನ್ನು ಒಬ್ಬರೂ ಸೀರಿಯಲ್​ ಆಗಿ ತೆಗೆದುಕೊಳ್ಳದೇ ತಮಾಷೆಯ ಕಮೆಂಟ್​ ಹಾಕುತ್ತಿದ್ದಾರೆ. ಎರಡು ಮದುವೆಯಾದ ನಿನ್ನ ಗಂಡನ ವಿರುದ್ಧ ನಾವು ಕೇಸ್​ ಹಾಕ್ತೇವೆ ಎಂದೆಲ್ಲಾ ರಿಪ್ಲೈ ಮಾಡುತ್ತಿದ್ದಾರೆ! ಮಾನನಷ್ಟ ಮೊಕದ್ದಮೆ ಯಾರು ಹಾಕುವುದು ಗೊತ್ತಾ ಎಂದೂ ಕೆಲವರು ಕಾಲೆಳೆಯುತ್ತಿದ್ದಾರೆ. 

ಅಷ್ಟಕ್ಕೂ, ಬಿಗ್​ಬಾಸ್​ ಎಂದರೇನೇ ಅದೊಂದು ರೀತಿಯಲ್ಲಿ ವಿವಾದದ ತಾಣ ಎನ್ನುವ ಆರೋಪ ಬಹಳ ಹಿಂದಿನಿಂದಲೂ ಇದೆ. ಖುಲ್ಲಂಖುಲ್ಲಾ  ಆಗಿ ರೊಮಾನ್ಸ್​ ಮಾಡುವುದು ಇಲ್ಲಿ ಮಾಮೂಲು. ಇಂಥ ದೃಶ್ಯಗಳನ್ನೂ ಷೋನಲ್ಲಿ ಧಾರಾಳವಾಗಿ ತೋರಿಸುವ ಮೂಲಕ ಟಿಆರ್​ಪಿ ಹೆಚ್ಚಿಸಿಕೊಳ್ಳಲಾಗುತ್ತದೆ. ಇದೇ ಕಾರಣಕ್ಕೆ ಇಲ್ಲಿ ಬರುವ ಬಹುತೇಕ ಸ್ಪರ್ಧಿಗಳು ಕಾಂಟ್ರವರ್ಸಿ ಮೂಲಕ ಕುಖ್ಯಾತಿ ಪಡೆದವರೇ ಆಗಿರುತ್ತಾರೆ ಎಂಬ ಗಂಭೀರ ಆರೋಪಗಳು ಬರುತ್ತಲೇ ಇವೆ. ಈ ಕಾಂಟ್ರವರ್ಸಿ ಮಾಡಿಕೊಂಡವರ ನಡುವೆ ಯಾವುದೇ ವಿವಾದಗಳಿಗೆ ಹೋಗದ ಒಂದಿಷ್ಟು ಮಂದಿ ಪ್ರಸಿದ್ಧರನ್ನು ಕರೆಯಲಾಗುತ್ತದೆ. ಇದು ನಾಮ್​ ಕೇ ವಾಸ್ತೆ ಮಾತ್ರ. ಅವರು ಬಂದ ಮೊದಲು ಮೂರ್ನಾಲ್ಕು ವಾರಗಳಲ್ಲಿಯೇ ಎಲಿಮಿನೇಟ್​ ಆಗಿ ಹೊರಹಾಕಲಾಗುತ್ತದೆ. ಕಾಂಟ್ರವರ್ಸಿ ಹೆಚ್ಚಿದ್ದಷ್ಟೂ ಟಿಆರ್​ಪಿ ರೇಟೂ ಜಾಸ್ತಿ ಬರುತ್ತದೆ...  ಹೀಗೆ ಬಿಗ್​ಬಾಸ್​ ಕುರಿತು ಹಲವಾರು ಮಂದಿ ತಲೆಗೊಂದರಂತೆ ಮಾತನಾಡುವುದು ನಡೆದೇ ಇದೆ. ಅದಕ್ಕಾಗಿಯೇ ಫೈಟಿಂಗ್​, ಕಿಸ್ಸಿಂಗ್​, ರೊಮಾನ್ಸ್​ ಇಂಥ ಸನ್ನಿವೇಶಗಳು ಬಂದರೆ ಅದನ್ನು ಕಟ್​ ಮಾಡದೇ ವೀಕ್ಷಕರ ಮುಂದೆ ಇಡುವುದೇ ಸಾಕ್ಷಿ ಎನ್ನಲಾಗುತ್ತದೆ. ಅದಕ್ಕೆ ತಕ್ಕಂತೆ ವೀಕ್ಷಕರ ಮನಸ್ಥಿತಿಯೂ ಇರುವ ಕಾರಣ, ಎಲ್ಲಾ ಸೀರಿಯಲ್​, ರಿಯಾಲಿಟಿ ಷೋಗಳನ್ನು ಮೀರಿ ಬಿಗ್​ಬಾಸ್​ ಸದಾ ನಂಬರ್​ 1 ಸ್ಥಾನದಲ್ಲಿ ಇರುವುದು ಗುಟ್ಟಾಗಿ ಉಳಿದದ್ದೇನಲ್ಲ. 
 

ಇವತ್ತು ರಾತ್ರಿಯ ಮಜಾ... ಎನ್ನುತ್ತಲೇ ಸೋನಾಕ್ಷಿ ಸಿನ್ಹಾ ಕ್ಯಾಟ್​ ವಾಕ್​! ಸೈಜ್​ ತಲೆ ಕೆಡಿಸಿಕೊಂಡ ಫ್ಯಾನ್ಸ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?
Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ