ಕಿರುತೆರೆ ನಟಿ ಅಂಕಿತಾ ಲೋಖಂಡೆ ಮತ್ತೆ ಸುದ್ದಿಗೆ ಬಂದಿದ್ದಾರೆ. ಅವರ ಬೆಡ್ ರೂಮ್ ವಿಡಿಯೋ ಒಂದು ವೈರಲ್ ಆಗಿದೆ. ಅದ್ರಲ್ಲಿ ನಟಿ ತಡರಾತ್ರಿ ತನ್ನ ಪತಿಗೆ ಮಾಡ್ತಿರುವ ಸೇವೆ ನೋಡಿ ಫ್ಯಾನ್ಸ್ ದಂಗಾಗಿದ್ದಾರೆ.
ಕಿರುತೆರೆ ನಟಿ ಅಂಕಿತಾ ಲೋಖಂಡೆ (Television actress Ankita Lokhande) ಬರೀ ತಮ್ಮ ಸೌಂದರ್ಯದಿಂದ ಮಾತ್ರವಲ್ಲ, ನಟನೆ ಹಾಗೂ ವ್ಯಕ್ತಿತ್ವದಿಂದ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಸೋಶಿಯಲ್ ಮೀಡಿಯಾ (social media)ದಲ್ಲಿ ಸಕ್ರಿಯವಾಗಿರುವ ಅಂಕಿತಾ, ಪತಿ ವಿಕ್ಕಿ ಜೈನ್ (Vicky Jain) ಜೊತೆ ರೊಮ್ಯಾನ್ಸ್ ಮಾಡ್ತಿರುವ, ಕೆಲವೊಮ್ಮೆ ಡ್ಯಾನ್ಸ್ ಮಾಡ್ತಿರುವ ವಿಡಿಯೋಗಳನ್ನು ಪೋಸ್ಟ್ ಮಾಡ್ತಿರುತ್ತಾರೆ. ಆದ್ರೀಗ ಅಂಕಿತಾ ಲೋಖಂಡೆ ಬೆಡ್ ರೂಮ್ (bedroom) ವಿಡಿಯೋ ಒಂದು ವೈರಲ್ ಆಗಿದೆ. ರಾತ್ರಿ ಅಂಕಿತಾ, ಪತಿ ಜೊತೆ ಮಾಡುವ ಕೆಲಸ ನೋಡಿ ಫ್ಯಾನ್ಸ್ ದಂಗಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ ಕೂಡ ಬಂದಿದೆ.
ಬೆಡ್ ರೂಮಿನಲ್ಲಿ ಅಂಕಿತಾ ಮಾಡಿದ್ದೇನು? : ಅಂಕಿತಾ ಆಕ್ಟಿಂಗ್ ಜೊತೆ ಸಂಸ್ಕಾರಿ ಸೊಸೆ ಎಂಬ ಪಟ್ಟಗಳಿಸಿದ್ದಾರೆ. ವೈರಲ್ ವಿಡಿಯೋ ನೋಡಿದ್ರೆ ಅದ್ರಂತೆ ಅಂಕಿತಾ ನಡೆದುಕೊಳ್ತಿರೋದು ಸ್ಪಷ್ಟವಾಗ್ತಿದೆ. ಅಂಕಿತಾ ರಾತ್ರಿ ತನ್ನ ಗಂಡ ವಿಕ್ಕಿ ಕಾಲುಗಳನ್ನು ಮಸಾಜ್ ಮಾಡ್ತಾರೆ. ವಿಕ್ಕಿ ಜೈನ್ ಕಾಲು ಮಸಾಜ್ ಮಾಡುವುದು ಮಾತ್ರವಲ್ಲ ವಿಕ್ಕಿ ಪಾದಗಳಿಗೆ ಅಂಕಿತಾ ಮಸಾಜ್ ಮಾಡ್ತಾರೆ. ಪ್ರತಿ ದಿನ ರಾತ್ರಿ ಅಂಕಿತಾ ಈ ಕೆಲಸವನ್ನು ಮಾಡ್ತಾರೆ.
ಶ್ರೀರಸ್ತು ಶುಭಮಸ್ತು ಸಂಧ್ಯಾ ಜೊತೆ ನಿಜಕ್ಕೂ ವಿಲನ್ ಶಾರ್ವರಿನಾ? ಪ್ರೀತಿಯೇ ನನ್ನುಸಿರು ಹಾಡಿಗೆ ಭರ್ಜರಿ ರೀಲ್ಸ್
ಬೆಡ್ ಮೇಲೆ ವಿಕ್ಕಿ ಜೈನ್ ಕುಳಿತುಕೊಂಡಿದ್ದಾರೆ. ಕೆಳಗೆ ಕುಳಿತಿರುವ ಅಂಕಿತಾ, ವಿಕ್ಕಿ ಕಾಲಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡ್ತಿದ್ದಾರೆ. ಈ ವಿಡಿಯೋ ನೋಡಿದ ಫ್ಯಾನ್ಸ್, ಇಂದಿನ ನಟಿಯರು ಈ ಕೆಲಸ ಮಾಡ್ತಾರೆ ಎಂಬುದನ್ನು ನಂಬಲು ಸಾಧ್ಯವಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು, ಕೇವಲ ವಿಡಿಯೋ ಮಾಡಲು ಅಂಕಿತಾ, ವಿಕ್ಕಿ ಕಾಲುಗಳಿಗೆ ಮಸಾಜ್ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರು ಇದು ನಟನೆಯಲ್ಲ, ಓವರ್ ಆಕ್ಟಿಂಗ್ ಎಂದು ಬರೆದಿದ್ದಾರೆ. ಅಂಕಿತಾ ಲೋಖಂಡೆ ಹಾಗೂ ವಿಕ್ಕಿ ಜೈನ್ ಈ ವಿಡಿಯೋವನ್ನು ಜನರು ನಂಬಲು ಸಿದ್ಧರಿಲ್ಲ. ಪ್ರಸಿದ್ಧ ನಟಿ ತನ್ನ ಗಂಡನ ಕಾಲುಗಳನ್ನು ಮಸಾಜ್ ಮಾಡಲು ಸಾಧ್ಯವಿಲ್ಲ ಎಂಬುದು ಬಳಕೆದಾರರ ಅಭಿಪ್ರಾಯವಾಗಿದೆ.
ಸೀರಿಯಲ್ ಮೂಲಕ ಲಕ್ಷಾಂತರ ಅಭಿಮಾನಿಗಳ ನೆಚ್ಚಿನ ನಟಿ ಎನ್ನಿಸಿಕೊಂಡಿರುವ ಅಂಕಿತಾ ಲೋಖಂಡೆ, ಬಿಗ್ ಬಾಸ್ 17ರಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿ ಅಂಕಿತಾ ಇನ್ನೊಂದು ಮುಖ ವೀಕ್ಷಕರಿಗೆ ಗೊತ್ತಾಯ್ತು. ವಿಕ್ಕಿ ಹಾಗೂ ಅಂಕಿತಾ ಮಧ್ಯೆ ನಡೆಯುತ್ತಿದ್ದ ಜಗಳ ನೋಡಿ ಇಬ್ಬರೂ ಬೇರೆಯಾಗ್ತಾರೆ ಎಂದು ಫ್ಯಾನ್ಸ್ ಭಾವಿಸಿದ್ರು. ಆದ್ರೆ ಬಿಗ್ ಬಾಸ್ ಮುಗಿಯುತ್ತಿದ್ದಂತೆ ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಜೋಧ್‌ಪುರದ ಉಮೈದ್ ಭವನದಲ್ಲಿ ರಜಾ ದಿನ ಎಂಜಾಯ್ ಮಾಡಿದ್ದರು. ಆಗ ಅವರ ರೋಮ್ಯಾನ್ಸ್ ವಿಡಿಯೋಗಳು ವೈರಲ್ ಆಗಿದ್ದವು. ಇದನ್ನು ನೋಡಿದ ಫ್ಯಾನ್ಸ್, ಅಂಕಿತಾಳನ್ನು ತರಾಟೆಗೆ ತೆಗೆದುಕೊಂಡಿದ್ದರು.
ನನ್ ಹೆಂಡ್ತಿ ಉಗಿದಿರೋ ಎಲ್ಲಾ ಸಾಂಗೂ ಹಿಟ್ಟೇ: ಯೋಗರಾಜ ಭಟ್ಟರ ಯಶಸ್ವಿನ ಹಿಂದಿರೋ ಗುಟ್ಟು ಇದಂತೆ!
ಅಂಕಿತಾ ಮತ್ತು ವಿಕ್ಕಿ ಡಿಸೆಂಬರ್ 14, 2021 ರಂದು ಮುಂಬೈನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ನಂತ್ರ ಬಿಗ್ ಬಾಸ್ 17 ರಲ್ಲಿ ಸ್ಪರ್ಧಿಗಳಾಗಿ ಕಾಣಿಸಿಕೊಂಡಿದ್ದರು. ವಿಕ್ಕಿ ಜೈನ್ 130 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಅಂಕಿತಾ ಲೋಖಂಡೆ ಸುಮಾರು 30 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ವಿಕ್ಕಿ ಜೈನ್ ಒಬ್ಬ ಬ್ಯುಸಿನೆಸ್ ಮೆನ್. ಎಂಬಿಎ ಮುಗಿದ ನಂತ್ರ ಕುಟುಂಬದ ವ್ಯವಹಾರ ಮುಂದುವರೆಸಿದ್ದಾರೆ. ಮಹಾವೀರ್ ಇನ್‌ಸ್ಪೈರ್‌ನ ವ್ಯವಸ್ಥಾಪಕ ನಿರ್ದೇಶಕರಾಗಿರುವ ವಿಕ್ಕಿ, ಲಾಜಿಸ್ಟಿಕ್ಸ್, ರಿಯಲ್ ಎಸ್ಟೇಟ್, ವಜ್ರಗಳು, ವಿದ್ಯುತ್ ಉತ್ಪಾದನೆ, ಕಲ್ಲಿದ್ದಲು ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸಿದೆ. ಅಂಕಿತಾ, ಅನೇಕ ಸೀರಿಯಲ್ ಹಾಗೂ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ತಿರುತ್ತಾರೆ. ಅಂಕಿತಾ, ನಟ ಸುಶಾಂತ್ ಸಿಂಗ್ ರಜಪೂತ್ ಜೊತೆ ಸಂಬಂಧದಲ್ಲಿದ್ದಾಗ ಹೆಚ್ಚು ಚರ್ಚೆಯಲ್ಲಿದ್ದರು. ಸುಶಾಂತ್ ನಿಧನದ ನಂತ್ರ ಅನೇಕ ಬಾರಿ ಅಂಕಿತಾ, ಸುಶಾಂತ್ ಬಗ್ಗೆ ಮಾತನಾಡಿದ್ದಾರೆ.