ಮಾಜಿ ಗೆಳತಿಯೊಂದಿಗಿನ ಆದಾಯ ಹಂಚಿಕೆ, ಬೈಕ್‌ ಗಿಫ್ಟ್ ಬಗ್ಗೆ ಮಾತನಾಡಿದ ವರುಣ್ ಆರಾಧ್ಯ

By Gowthami K  |  First Published Sep 15, 2024, 8:11 PM IST

ಯೂಟ್ಯೂಬರ್ ವರುಣ್ ಆರಾಧ್ಯ  ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದು, ಬ್ರೇಕಪ್‌ಗೆ ಎರಡೂ ಕಡೆಯಿಂದಲೂ ತಪ್ಪುಗಳಾಗಿವೆ ಎಂದು ಹೇಳಿದ್ದಾರೆ.


ಯೂಟ್ಯೂಬರ್  ವರುಣ್ ಆರಾಧ್ಯ ಅವರು ಕೆಲ ದಿನಗಳಿಂದ ಸುದ್ದಿಯಲ್ಲಿದ್ದರು. ತಮ್ಮ ಮಾಜಿ ಗರ್ಲ್‌ ಫ್ರೆಂಡ್ ವರ್ಷ ಕಾವೇರಿಗೆ ಜೀವ ಬೆದರಿಕೆ  , ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಎಲ್ಲೆಡೆ ಸುದ್ದಿ ಹರಿದಾಡುತ್ತಿತ್ತು.  ಇದೀಗ ಖಾಸಗಿ ಯೂಟ್ಯೂಬ್  ಒಂದರಲ್ಲಿ ಸಂದರ್ಶನ ನೀಡಿರುವ ವರುಣ್ ಆರಾಧ್ಯ , ವರ್ಷಾ ಕಾವೇರಿ ಜೊತೆಗೆ ಬ್ರೇಕಪ್ ಮಾಡಿಕೊಳ್ಳಲು ಕಾರಣ ಏನೆಂದು ಮಾತನಾಡಿದ್ದಾರೆ.

ಇಬ್ಬರೂ ಇಷ್ಟಪಟ್ಟಾಗ ಲವ್ ಆಗುತ್ತದೆ. ಎಲ್ಲವೂ ಚೆನ್ನಾಗಿರುತ್ತೆ, ಅದೇ ರೀತಿ ಬ್ರೇಕ್ ಅಪ್ ಆಗೋದು ಕೂಡ ಹಾಗೆಯೇ ಎರಡೂ ಕಡೆಯಿಂದ ತಪ್ಪಾಗಿ ಸಂಬಂಧ ಹಾಳಾಗುತ್ತೆ. ನೂರಕ್ಕೆ ನೂರು ನಮ್ಮಿಬ್ಬರ ಕಡೆಯಿಂದಲೂ ತಪ್ಪಾಗಿದೆ. ಹಾಗಾಗಿ ಬ್ರೇಕ್ ಅಪ್ ಆಗಿದೆ. ನಮ್ಮಿಬ್ಬರದು ಬ್ರೆಕಪ್ ಆಗಿ 1 ವರ್ಷವಾಗಿದೆ ಉತ್ತಮ ರೀತಿಯಲ್ಲಿಯೇ ಬೇರೆಯಾದೆವು ಎಂದಿದ್ದಾರೆ.

Tap to resize

Latest Videos

undefined

ಅಂಬಿ ಮನೆಗೆ ಹೊಸ ಅತಿಥಿ ಆಗಮನ ಕನ್ಫರ್ಮ್, ಲೀಕ್ ಆಯ್ತು ಅವಿವಾ ಬಿದ್ದಪ್ಪ ಸೀಮಂತದ ಒಂದು ಫೋಟೋ!

ಅವರು ಬೈಕ್ ಕೊಡಿಸಿದ್ದನ್ನು ನನ್ನ ಜೀವನ ನಿರ್ವಹಣೆಗೆ ನಾನು ಮಾರಿದೆ.  ಅದು ನನ್ನ ಹೆಸರಲ್ಲಿತ್ತು. ಅಮೌಂಟ್‌ ತೆಗೆದುಕೊಂಡು ಮನೆ ಖರ್ಚಿಗೆ ಮಾಡಿಕೊಂಡೆ. ಅಪ್ಪ ಇಲ್ಲ ನಾನೊಬ್ಬನೇ ಮಗ ಮನೆ ನೋಡಿಕೊಳ್ಳಬೇಕು. ನನ್ನ ಅಕ್ಕನ ಮದುವೆಯನ್ನು ಅವರ ದುಡ್ಡಲ್ಲಿ ಮಾಡಿದ್ದೇವೆ ಎಂದು ಜನ ಮಾತನಾಡಿಕೊಳ್ಳುತ್ತಾರೆ. ನಮ್ಮಪ್ಪ ಹಾಕಿದ ಚೀಟಿ ಮತ್ತು ಅಮ್ಮನ ಮಾಂಗಲ್ಯ ಸರ ಮಾರಿ, ನಾನು ಸ್ವಲ್ಪ ಸಾಲ ಮಾಡಿ ಅಕ್ಕನ ಮದುವೆ ಮಾಡಿದೆವು. ಅದಕ್ಕಾಗಿ ನನಗೆ ಯಾರೂ 1 ರೂ ಕೊಟ್ಟಿಲ್ಲ ಎಂದು ವರುಣ್ ಹೇಳಿದ್ದಾರೆ. 

ಗಿಫ್ಟ್ ಕೊಡೋದು ಬೇರೆ, ಹೆಲ್ಪ್ ಮಾಡೋದು ಬೇರೆ, ನಾವಿಬ್ಬರೂ ಜೊತೆಯಲ್ಲಿದ್ದಾಗ ಗಿಫ್ಟ್ ಕೊಟ್ಟುಕೊಂಡಿದ್ದೇವೆ. ಅವರು ಬೈಕ್ ಕೊಟ್ರೆ ನಾನು ಬಂಗಾರ ಕೊಟ್ಟಿದ್ದೇನೆ ಈ ಥರ ತುಂಬಾ ನಮ್ಮಿಬ್ಬರ ಮಧ್ಯೆ ನಡೆದಿದೆ. ಈ 1 ವರ್ಷದ ಬ್ರೇಕ್ ಅಪ್‌ ನಲ್ಲಿ ನನ್ನ ಕಡೆಯಿಂದ ಒಂದೇ ಒಂದು ಕಾಲ್ ಮೆಸೇಜ್ ಹೋಗಿಲ್ಲ.

ನನ್ನ ಮೇಲೆ ಎಫ್‌ಐಆರ್ ಆಗಿಲ್ಲ,  ಏನೇನೋ ಸುದ್ದಿಯಾಯ್ತು. ಎಫ್‌ಐಆರ್ ಆಗಿದ್ದರೆ ನಾನು ಬೇಲ್ ಮೇಲ್ ಇರುತ್ತಿದೆ. ಕಂಪ್ಲೆಂಟ್‌ ಕಾಫಿಯಲ್ಲಿ ಬೆದರಿಕೆ ಅಂತೆಲ್ಲ ಅವರು ದಾಖಲು ಮಾಡಿರುವುದಕ್ಕೆ ಪೊಲೀಸ್ ಕರೆದು ವಿಚಾರಣೆ ನಡೆಸಿದ್ದು ನಿಜ. ಒಂದು ವರ್ಷದಿಂದ ಅವರಿಗೆ ನಾನೇನೂ ಮಾಡಿಲ್ಲ. ನನಗೂ ಕುಟುಂಬ ಇದೆ. ಜವಾಬ್ದಾರಿ ಇದೆ.  ಅವರು ಅಶ್ಲೀಲ ಫೋಟೋ ಇದೆ ಅಂತೆಲ್ಲ ದೂರಿನಲ್ಲಿ  ಹೇಳಿದ್ದಾರೆ ಅಂತದ್ದು ಯಾವುದೇ ಫೋಟೋಗಳು ನನ್ನಲ್ಲಿ ಇಲ್ಲ. ಡೇಟಿಂಗ್‌ ನಲ್ಲಿದ್ದಾಗ ತೆಗೆದುಕೊಂಡ ಪೊಟೋಗಳಿತ್ತು ವಿಚಾರಣೆ ವೇಳೆ ಚೆಕ್ ಮಾಡಿ ಎಲ್ಲವೂ ಡಿಲೀಟ್‌ ಮಾಡಿದ್ದಾರೆ. ಭವಿಷ್ಯದಲ್ಲಿ ಅವರಿಗೂ ಯಾವುದೇ ತೊಂದರೆ ಆಗಬಾರದು. ಅವರು 3 ವರ್ಷ ನಮ್ಮ ಮನೆಯಲ್ಲೇ ಇದ್ರು, ಎಲ್ಲರಿಗೂ ಇದು ಗೊತ್ತು. ಹೀಗಾಗಿ  ಅದನ್ನು ಬಿಟ್ಟು ನಾನ್ಯಾಕೆ ಒಂದು ಹುಡುಗಿಯ ಜೀವನ ಹಾಳು ಮಾಡಲಿ ಎಂದಿದ್ದಾರೆ. ಇಬ್ಬರ ಕಡೆಯಿಂದಲೂ ಸಮಸ್ಯೆ ಆಗದಂತೆ ಮುಚ್ಚಳಿಕೆ ಬರೆದು ಠಾಣೆಯಿಂದ ಕಳಿಸಿಕೊಟ್ಟರು ಎಂದಿದ್ದಾರೆ.

ವರ್ಷಾ ಕಾವೇರಿ ಜೊತೆಗಿನ ಬ್ರೇಕಪ್‌ಗೆ ಕಾರಣ ಬಿಚ್ಚಿಟ್ಟ ವರುಣ್‌ ಆರಾಧ್ಯ!

ನನ್ನ ದುಡ್ಡು ತುಂಬಾ ಹೋಗಿದೆ. ನಾವಿಬ್ಬರೂ ಯೂಟ್ಯೂಬ್‌ ನಿಂದ ಕೂಡಿಟ್ಟ ಸುಮಾರು 20 ಲಕ್ಷ ಹಣವಿತ್ತು. ಇಲ್ಲಿವರೆಗೆ ನನಗೆ 1 ರೂ ಸಿಕ್ಕಿಲ್ಲ. ಸಿಗುತ್ತೋ ಇಲ್ಲವೋ ಗೊತ್ತಿಲ್ಲ.  ನನಗೆ ಏನೇ ನೆಗೆಟಿವ್ ಬಂದರೂ ನಾನು ಪಾಸಿಟಿವ್ ತೆಗೆದುಕೊಳ್ಳುತ್ತೇನೆ ಇದು ನಮ್ಮಪ್ಪ ಹೇಳಿಕೊಟ್ಟಿರುವುದು. ನಿನ್ನಿಂದ ಇನ್ನೊಬ್ಬರು ಅಳಬಾರದು, ಅಯ್ಯೋ ಎನ್ನಬಾರದು ಎಂದು ಹೇಳಿಕೊಟ್ಟಿದ್ದಾರೆ. ನಾನು ಕ್ಲಾರಿಟಿ ಕೊಡಲು ಹೋದರೆ ಅವರ ಜೀವನ ಹಾಳಾಗುತ್ತದೆ. ಇಬ್ಬರೂ ಚೆನ್ನಾಗಿರಬೇಕು. ತಪ್ಪಂತು ಎರಡೂ ಕಡೆಯಿಂದ ಆಗಿದೆ. ಅದಕ್ಕೆ ನಾವು ಬ್ರೇಕ್ ಅಪ್ ಮಾಡಿಕೊಂಡಿದ್ದು, ಒಳ್ಳೆ ರೀತಿಯಲ್ಲಿ ಮಾತನಾಡಿಕೊಂಡೇ ಬ್ರೇಕಪ್ ಮಾಡಿಕೊಂಡೆವು. ಜನಗಳು ಅದನ್ನು ಯಾವ ರೀತಿಯಲ್ಲಿ ಅರ್ಥ ಮಾಡಿಕೊಂಡರೋ ಗೊತ್ತಿಲ್ಲ. ಏನೇನೋ ಮಾತನಾಡಿಕೊಂಡರು ಕೂಡ ನಾನು ಸೈಲೆಂಟ್‌ ಆಗಿದ್ದೇನೆ.

ಇಲ್ಲಿವರೆಗೆ ನನಗೆ ಬಿಗ್‌ ಬಾಸ್ ಗೆ ಒಂದೇ ಒಂದು ಕರೆ ಬಂದಿಲ್ಲ. ನಮ್ಮಿಬ್ಬರ ಬ್ರೇಕ್‌ ಅಪ್‌ ಬಿಗ್‌ಬಾಸ್ ಗಿಮಿಕ್ ಅಲ್ಲ. ಇದು ನಮ್ಮಿಬ್ಬರ ಲೈಪ್‌ ಗಿಮಿಕ್. ನಮ್ಮ ಜೀವನದಲ್ಲಿ ಏನು ನಡೆದಿದೆ ಅದು ಆಗುತ್ತಿದೆ.

ನಾವಿಬ್ಬರೂ ಕ್ರಿಯೇಟ್‌ ಮಾಡಿದ ಯೂಟ್ಯೂಬ್ ಚಾನಲ್‌ 1 ಮಿಲಿಯನ್ ಸಬ್‌ಸ್ಕ್ರೈಬರ್ ಹೊಂದಿತ್ತು.  ಅವರ ಕಾಂಟ್ರಿಬ್ಯೂಷನ್ ಇಲ್ಲ ಎಂದು ನಾನು ಹೇಳುತ್ತಿಲ್ಲ. ನಂದು ಸ್ವಲ್ಪ ಜಾಸ್ತಿ ಇದೆ. ನಾನೇ ಬೇಡ ಅಂದ ಮೇಲೆ ಆ ಯೂಟ್ಯೂಬ್ ಬಿಟ್ಟು ಅವರದ್ದೇ ಒಂದು ಕ್ರೀಯೆಟ್‌ ಮಾಡಿಕೊಳ್ಳಬಹುದಿತ್ತಲ್ಲ. ಅದನ್ನು ಬಿಟ್ಟು ನಾನು ಈಗ ನನ್ನದೇ ಮಾಡಿಕೊಂಡಿದ್ದೇನೆ. ಜನಗಳು ನನ್ನನ್ನು ಎಲ್ಲೂ ಬಿಟ್ಟುಕೊಡುತ್ತಿಲ್ಲ. ನನ್ನ ಜೀವನದಲ್ಲಿ ನಾನು ಇಷ್ಟು ದಿನದಲ್ಲಿ ಕಂಡುಕೊಂಡ ಒಂದೇ ಒಂದು ಸತ್ಯ ಏನೆಂದರೆ "keep it private until it's permanent" (ಶಾಶ್ವತವಾಗುವವರೆಗೂ ಗುಪ್ತವಾಗಿಟ್ಟುಕೊಳ್ಳಿ) ಎಂಬುದು.

click me!