ಗೀತಾ ಸೀರಿಯಲ್ ಮುಗಿತಿದೆ, ಇಲ್ಲ.. ಸೋಷಿಯಲ್ ಮೀಡಿಯಾ ಏನ್ ಹೇಳ್ತಿದೆ ನೋಡಿ..!

By Shriram Bhat  |  First Published Oct 14, 2023, 4:45 PM IST

There is lot of comments about Geetha serial to stop or not. Not stoping but changing the slot as the source is concerned. ಬಲ್ಲ ಮೂಲಗಳ ಪ್ರಕಾರ, ಗೀತಾ ಸೀರಿಯಲ್ ನಿಲ್ಲುತ್ತಿಲ್ಲ, ಬದಲಿಗೆ ಪ್ರಸಾರದ ವೇಳೆ ಬದಲಾಗಲಿದೆ, ಈ ಬಗ್ಗೆ ಕಲರ್ಸ್ ಕನ್ನಡ ಚಾನಲ್ ಪ್ರೊಮೋ ಮೂಲಕ ಮಾಹಿತಿ ನೀಡಲಿದೆ.


ಕಲರ್ಸ್‌ ಕನ್ನಡದಲ್ಲಿ ಮೂಡಿಬರುತ್ತಿರುವ 'ಗೀತಾ' ಸೀರಿಯಲ್ ಮುಗಿಯುವ ಹಂತದಲ್ಲಿದೆಯಾ? ಹೀಗೊಂದು ಪ್ರಶ್ನೆ ಮೂಡಿಬರುತ್ತಿದೆ, ಕಾರಣ, ಇತ್ತೀಚೆಗೆ ಗೀತಾ ಸೀರಿಯಲ್ ನೋಡುತ್ತಿದ್ದರೆ ಕಥೆ ಮುಗಿಯುವ ಹಂತ ತಲುಪಿದೆ ಎಂಬುದು ಹಲವು ವೀಕ್ಷಕರ ಅನಿಸಿಕೆ. ಇದಕ್ಕೆ ಸಾಕ್ಷಿ ಗೀತಾ ಸೀರಿಯಲ್ ಅಭಿಮಾನಿಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ಬರುತ್ತಿರುವ ಕಾಮೆಂಟ್ಸ್‌ಗಳು ಮತ್ತು ಅದಕ್ಕೆ ಸಂಬಂಧಿಸಿ ನಡೆಯುತ್ತಿರುವ ಚರ್ಚೆಗಳು ಎನ್ನಬಹುದು. 

ಹೌದು, ಗೀತಾ ಹಲವು ವರ್ಷಗಳಿಂದ ಟೆಲಿಕಾಸ್ಟ್ ಆಗುತ್ತಿರುವ ಸೀರಿಯಲ್. ಈ ಸೀರಿಯಲ್ ಹಲವು ವೀಕ್ಷಕರ ಫೇವರೆಟ್ ಕೂಡ ಹೌದು. ಆದರೆ, ಇತ್ತೀಚೆಗೆ ಕಥೆ ಸ್ಲೋ ಆಗತೊಡಗಿತ್ತು ಮತ್ತು ಕಥೆಯಲ್ಲಿ ಹಳೆಯ ಅಂಶಗಳೇ ರಿಪೀಟ್ ಆಗತೊಡಗಿವೆ ಎಂಬ ಮಾತು ಚಾಲ್ತಿಯಲ್ಲಿದೆ. ಆದರೆ, ಹಾಗೆಲ್ಲ ಊಹಿಸಲು ಸಾಧ್ಯವಿಲ್ಲ. ಏಕೆಂದರೆ, ಸೀರಿಯಲ್ ಕಥೆ ಇನ್ನೂ ಎಷ್ಟಿದೆಯೋ ಅವರಿಗೇ ಗೊತ್ತು. ಜತೆಗೆ, ಇರೋ ಕಥೆ ಎಳೆದು ಸಾಕಷ್ಟು ಉದ್ದ ಮಾಡಲೂಬಹುದು. ಹೀಗಾಗಿ ಸೀರಿಯಲ್ ಮುಕ್ತಾಯವನ್ನು ವೀಕ್ಷಕರು ಊಹಿಸಲು ಅಸಾಧ್ಯ ಎನ್ನಬಹುದು. ಆದರೂ ಈ ಬಗ್ಗೆ ಚರ್ಚೆ ಜೋರಾಗಿಯೇ ನಡೆಯುತ್ತಿದೆ. 

Latest Videos

undefined

ಗೀತಾ ಸೀರಿಯಲ್ ಅತ್ತೆ-ಸೊಸೆಗೆ ಸಂಬಂಧಿಸಿದ ಕಥೆಯಾದರೂ ಗೀತಾ ಗಂಡನಿಗೂ ಪಾತ್ರದಲ್ಲಿ ಪ್ರಾಮುಖ್ಯತೆ ಇದೆ. ಮೂರು ಪಾತ್ರಗಳ ಸುತ್ತ ಸುತ್ತುತ್ತಿರುವ ಕಥೆ ಎಂದು ಹೇಳಬಹುದಾದ ಈ ಸೀರಿಯಲ್ ವೀಕ್ಷಕರು ಅಂದುಕೊಂಡಂತೆ ಸ್ಟಾಪ್ ಆಗುತ್ತಿಲ್ಲ, ಬದಲಿಗೆ ಸ್ಲಾಟ್ ಚೆಂಜ್ ಆಗಬಹುದು. ಚಾನೆಲ್ ಕಡೆಯಿಂದ ಬಂದ ಸುದ್ದಿಮೂಲಗಳ ಮಾಹಿತಿ ಪ್ರಕಾರ, ಗೀತಾ ಸೀರಿಯಲ್ ಸ್ಲಾಟ್ (ಪ್ರಸಾರದ ವೇಳೆ) ಸದ್ಯದಲ್ಲೇ ಬದಲಾಗಲಿದೆ. ಈ ಬದಲಾವಣೆಯನ್ನು ಕಲರ್ಸ್ ಕನ್ನಡ ತಮ್ಮ ಗೀತಾ ಸೀರಿಯಲ್ ಪ್ರಸಾರದ ವೇಳೆ 'ಪ್ರೊಮೋ' ಮೂಲಕ ತಿಳಿಸಲಿದೆ. 

'ಯಾರಾದ್ರೂ ಬಂದು ನನ್ ತಲ್ ತಲೆಗೆ ಹೊಡ್ದುಬಿಡ್ರಪ್ಪ'..; ಪಾಪ, ತುಕಾಲಿ ಸಂತು ಗೋಳು ಕೇಳೋರ್ಯಾರು?!

ಒಟ್ಟಿನಲ್ಲಿ, ಕೆಲವೊಮ್ಮೆ ಕಥೆಯಲ್ಲಿ ಆದ ಬದಲಾವಣೆ ಅಥವಾ ತಿರುವುಗಳನ್ನು ನೋಡಿ ವೀಕ್ಷಕವರ್ಗವೇ ಸೀರಿಯಲ್ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ ಎಂದು ತೀರ್ಮಾನಕ್ಕೆ ಬಂದುಬಿಡುತ್ತಾರೆ. ಆದರೆ, ಕೆಲವೊಮ್ಮೆ ಇದು ಸರಿ ಆಗಲಿದೆಯಾದರೂ ಹಲವುಬಾರಿ ಇದು ಸರಿ ಇರುವುದಿಲ್ಲ. ಕಾರಣ ಹಲವು, ಸಮಯ ಬದಲಾವಣೆ ಸಾಧ್ಯತೆಯನ್ನೂ ಗಮನಿಸಿ ವೀಕ್ಷಕರು ನಿರ್ಧಾರಕ್ಕೆ ಬರಬೇಕಾಗುತ್ತದೆ ಎನ್ನಬಹುದು. ಏನೇ ಇರಲಿ, ಗೀತಾ ಸದ್ಯಕ್ಕೆ ನಿಲ್ಲುತ್ತಿಲ್ಲ, ಈ ಸೀರಿಯಲ್ ಅಭಿಮಾನಿಗಳು ಬೇಸರಿಸುವ ಅಗತ್ಯವಿಲ್ಲ. 

ಬಂದೇ ಬಿಡ್ತು ವೀಕೆಂಡ್ 'ಕಿಚ್ಚನ ಪಂಚಾಯಿತಿ'..; ಸ್ಪರ್ಧಿಗಳ ಎದೆಯಲ್ಲಿ 'ಢವ ಢವ' ಕೇಳಿಸ್ತಿದ್ಯಾ ?!

click me!