
ಪತ್ನಿ ನಿಶಾ ರಾವಲ್ ಸಲ್ಲಿಸಿದ ದೂರಿನ ಅನ್ವಯ ಅರೆಸ್ಟ್ ಆಗಿದ್ದ ಯೆ ರಿಷ್ಟಾ ಕ್ಯಾ ಕೆಹ್ಲತಾ ಹೈ ನಟ ಕರಣ್ ಮೆಹ್ರಾ ಅವರಿಗೆ ಜಾಮೀನು ನೀಡಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಸೋಮವಾರ ರಾತ್ರಿ ಗೋರೆಗಾಂವ್‌ನಲ್ಲಿ ನಟಿ ನಿಶಾ ದೂರು ದಾಖಲಿಸಿದ ನಂತರ ಕರಣ್‌ನನ್ನು ಬಂಧಿಸಲಾಗಿತ್ತು. ಅವರಿಬ್ಬರ ನಡುವಿನ ಗಲಾಟೆ ಪರಿಣಾಮ ದೂರು ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಕಿರಣ್ ಮೈಮೇಲೆ 3 ಕೆಲಕ್ಷದ ಚಿನ್ನ; ಗೊತ್ತಿಲ್ಲದ ಗಾಡಿ ಹತ್ತಿ ಭಯದಿಂದ ಒದ್ದಾಡಿದ ರಂಜನಿ!
ಕರಣ್ ಅವರನ್ನು ಜೂನ್ 1 ರ ಮಂಗಳವಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿವಾದದ ನಂತರ, ಕರಣ್ ನಿಶಾಳನ್ನು ಗೋಡೆಗೆ ತಳ್ಳಿದನೆಂದು ಆರೋಪಿಸಲಾಗಿದೆ. ನಿಶಾ ತಲೆಗೆ ಪೆಟ್ಟಾಗಿದೆ ಎಂದು ವರದಿಯಾಗಿದೆ, ನಂತರ ನಟಿ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಈ ಹಿಂದೆ ಕರಣ್ ಮತ್ತು ನಿಶಾ ಅವರ ದಾಂಪತ್ಯ ಜೀವನದಲ್ಲಿ ತೊಂದರೆ ಇದೆ ಎಂಬ ವದಂತಿಗಳು ಹಬ್ಬಿದ್ದವು. ಕರಣ್ ಮತ್ತು ನಿಶಾ ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ 2012 ರಲ್ಲಿ ಮದುವೆಯಾದರು. ಅವರಿಗೆ ನಾಲ್ಕು ವರ್ಷದ ಮಗ ಕವಿಶ್ ಇದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.