
ಕೆಲವು ತಿಂಗಳಿನಿಂದ ಬಣ್ಣದ ಲೋಕದಿಂದ ದೂರ ಉಳಿದಿರುವ ನಟ ಜಗನ್ನಾಥ್ ಇದೀಗ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದಾರೆ. ಲಾಕ್‌ಡೌನ್‌ನಲ್ಲಿ ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವ ಜಗನ್ನಾಥ್ ಸಿಕ್ಕಾಪಟ್ಟೆ ಸಣ್ಣ ಆಗಿದ್ದಾರೆ. ಬಾಡಿ ಫಿಟ್ ಆಗುತ್ತಿದ್ದಂತೆ ಡ್ಯಾನ್ಸ್ ವಿಡಿಯೋ ಮೂಲಕ ಫಾಲೋವರ್ಸ್‌ನ ಮನೋರಂಜಿಸುತ್ತಿದ್ದಾರೆ.
ಇವರೇ ನೋಡಿ ಬಿಗ್‌ಬಾಸ್ ಜಗನ್ ಸಂಗಾತಿ!
'ಕೇರ್ ಟು ಡ್ಯಾನ್ಸ್ ವಿತ್ ಮಿ' ಎಂದು ಬರೆದುಕೊಂಡು, ವಿಡಿಯೋ ಹಂಚಿಕೊಂಡಿದ್ದಾರೆ. ಬಣ್ಣದ ಲೋಕಕ್ಕೆ ಕಾಲಿಡುವ ಮುನ್ನ ಜಗನ್ನಾಥ್ ಹೇಗೆ ಕಾಣಿಸುತ್ತಿದ್ದರು, ಈಗಲೂ ಹಾಗೆ ಕಾಣಿಸುತ್ತಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. 'ಸೀತಾ ವಲ್ಲಭ' ಧಾರಾವಾಹಿ ನಂತರ ಜಗನ್ನಾಥ್ ಯಾವ ಪ್ರಾಜೆಕ್ಟ್‌ಗೂ ಸಹಿ ಮಾಡಿಲ್ಲ. ಕೆಲವು ತಿಂಗಳ ಹಿಂದೆ ತಮ್ಮದೇ ನಿರ್ಮಾಣ ಸಂಸ್ಥೆ ಆರಂಭಿಸಿದ್ದು, 'ರಕ್ಷಾ ಬಂಧನ' ಎಂದು ಶೋ ಕೂಡ ನಿರ್ಮಾಣ ಮಾಡಿದ್ದರು. ಆದರೆ ಕಡಿಮೆ ಟಿಆರ್‌ಪಿ ಬರುತ್ತಿದ್ದ ಕಾರಣ ಅರ್ಧಕ್ಕೇ ನಿಲ್ಲುವ ಪರಿಸ್ಥಿತಿ ಎದುರಾಗಿತ್ತು.
ಜಗನ್‌ರಷ್ಟೇ ಅವರ ಪತ್ನಿ ರಕ್ಷಿತಾ ಕೂಡ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರು. ಇಬ್ಬರ ಅಂಡರ್ ವಾಟರ್ ಫೋಟೋ ಶೂಟ್ ವೈರಲ್ ಆಗಿತ್ತು. 2019 ಜನವರಿ 28ರಂದು ಜಗನ್ನಾಥ್ ಮತ್ತು ರಕ್ಷಿತಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ರಕ್ಷಿತಾ ದುಬೈನಲ್ಲಿ ವ್ಯಾಸಂಗ ಮಾಡಿ, ಫ್ಯಾಷನ್ ಡಿಸೈನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.