ಮಕ್ಕಳ ಮೇಲೆ ಕೈ ಇಟ್ಟು ಹೇಳಲಿ; ಆರೂರು ಜಗದೀಶ್ ಆರೋಪಗಳಿಗೆ ಅನಿರುದ್ಧ್ ರಿಯಾಕ್ಷನ್

By Shruiti G KrishnaFirst Published Aug 20, 2022, 1:51 PM IST
Highlights

 ನಟ ಅನಿರುದ್ಧ್ ಪತ್ರಿಕಾಗೋಷ್ಠಿ ಮಾಡಿ ತನ್ನ ವಿರುದ್ಧ ಕೇಳಿಬಂದಿದ್ದ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಿರ್ಮಾಪಕ ಆರೂರು ಜಗದೀಶ್ ಮಾಡಿರುವ ಆರೋಪಗಳಿಗೆ ಅನಿರುದ್ಧ್ ಪ್ರತಿಕ್ರಿಯೆ ನೀಡಿದ್ದಾರೆ. 

ಜೀ ಕನ್ನಡ ವಾಹಿನಿಯಲ್ಲಿ ಪ್ರಾಸವಾಗುತ್ತಿದ್ದ ಜೊತೆ ಜೊತೆಯಲಿ ಧಾರಾವಾಹಿ ತಂಡದ ಜೊತೆ ನಟ ಅನಿರುದ್ಧ್ ಕಿರಿಕ್ ಮಾಡಿಕೊಂಡ  ಹಿನ್ನಲ್ಲೆ ಅನಿರುದ್ಧ್ ಅವರನ್ನು ಕಿರುತೆರೆಯಿಂದನೇ ಕಿಕ್ ಔಟ್ ಮಾಡಲಾಗಿದೆ. ಅನಿರುದ್ಧ್ ಅವರನ್ನು ಎರಡು ವರ್ಷಗಳ ಕಾಲ ಧಾರಾವಾಹಿಯಿಂದ ದೂರ ಇಡಲು ನಿರ್ಮಾಪಕರ ಸಂಘ ನಿರ್ಧಾರ ಮಾಡಿದೆ. ಇದರ ಬೆನ್ನಲ್ಲೇ ಇದೀಗ ನಟ ಅನಿರುದ್ಧ್ ಪತ್ರಿಕಾಗೋಷ್ಠಿ ನಡೆಸಿ ತನ್ನ ವಿರುದ್ಧ ಕೇಳಿಬಂದ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಿರ್ಮಾಪಕ ಆರೂರು ಜಗದೀಶ್, ಅನಿರುದ್ಧ ವಿರುದ್ಧ ಆರೋಪಗಳ ಸುರಿಮಳೆಯೇ ಹರಿಸಿದ್ದರು. 

'ನನಗೆ ಯಶಸ್ಸು ಸಿಕ್ಕಿದ್ದು ವೀಕ್ಷಕರಿಂದ. ದುರಹಂಕಾರ ಅಂತ ಹೇಳುತ್ತಾರೆ, ನನಗೆಲ್ಲಿದೆ ದುರಹಂಕಾರ, ನನ್ನಲ್ಲಿ ದುರಹಂಕಾರ ಇದ್ದಿದ್ದರೆ, ಅಭಿನಯದಲ್ಲೂ ಕಾಣಿಸುತ್ತಿತ್ತು. ಅವರ ಕಣ್ಣುಗಳೇ ಗೊತ್ತಾಗುತ್ತದೆ. ನನ್ನ ಅಭಿನಯದ ಯಾವುದೇ ಸಂಭಾವಣೆಯನ್ನು ಆದರೂ ತೆಗೆದು ನೋಡಿ, ಅದರಲ್ಲಿ ಗೊತ್ತಾಗುತ್ತದೆ ಎಂದು ಹೇಳಿದರು. ಈ ಪಾತ್ರಕ್ಕಾಗಿ ನಾನು 12 ಕೆಜಿ ತೂಕ ಇಳಿಸಿಕೊಂಡಿದ್ದಾನಿ. ಇದಕ್ಕೆ ತುಂಬಾ ಕಷ್ಟ ಪಟ್ಟಿದ್ದೇನೆ. ಯಾವುದಕ್ಕಾಗಿ ಇದೆಲ್ಲ ಮಾಡಿದ್ದು. ಅಷ್ಟು ಸುಲಭ ಅಲ್ಲ ಇದು.  ಇದನ್ನ ನಾನು ಮಾಡಿದ್ದು ಪಾತ್ರಕ್ಕಾಗಿ ಅಷ್ಟೆ ಎಂದು ಹೇಳಿದರು. 

ಜಗಳ ಬೀದಿಗೆ ತಿರುವ ಅವಶ್ಯಕತೆ ಇರಲಿಲ್ಲ

'ಹಿಂದಿನ ದಿನ ನನಗೆ ಸ್ಕ್ರಿಪ್ಟ್ ಪೇಪರ್ ಕಳುಹಿಸಿ, ನಾನು ಹೋಮ್ ವರ್ಕ್ ಮಾಡಿಬರುವ ವ್ಯಕ್ತಿ ನಾನು ಅಂತ ಮೊದಲೇ ಹೇಳಿದ್ದೆ. ಈ ಧಾರಾವಾಹಿ ಒಪ್ಪಿಕೊಳ್ಳುವಾಗಲ ಹೇಳಿದ್ದೆ.  ನನಗೂ ಜವಾಬ್ದಾರಿ ಇದೆ. ಕೆಲವು ಸಂಭಾವಣೆ ಬದಲಾಯಿಸಬೇಕಾಗುತ್ತದೆ. ಮನಸ್ತಾಪ, ಭಿನ್ನಾಪ್ರಾಯ ಆಗುವುದು ಸಾಮಾಸ್ಯ. ಅದೂ ಕಥೆಗಾಗಿ ಅಷ್ಟೆ. ಇದನ್ನ ಹೊರಗಡೆ ಹೇಳುವ ಅವಶ್ಯಕತೆ ಇಲ್ಲ. ಬೀದಿಗೆ ತರುವ ಅವಶ್ಯಕತೆ ಇರಲಿಲ್ಲ, ಅದು ನನ್ನ ಸಂಸ್ಕಾರ ಅಲ್ಲ ಎಂದು ಆರೂರು ವಿರುದ್ಧ ಅಸಮಾಧಾನ ಹೊರಹಾಕಿದರು. 

ಕ್ಯಾರವಾನ್ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅನಿರುದ್ದ, 'ನಾನು ರಂಗಭೂಮಿ ಕಲಾವಿದ, ಮಧ್ಯಮ ವರ್ಗ ವ್ಯಕ್ತಿ ಕ್ಯಾರವಾನ್ ಇಲ್ಲ ಅಂತ ನಾನು ಹೇಗೆ ಹೇಳಲಿ. ಮೊದಲ ದಿನ ಕ್ಯಾರವಾನ್ ಇತ್ತು 2ನೇ ದಿನ ಇರಲಿಲ್ಲ. ಅದನ್ನು ಕೇಳಿದ್ದಕ್ಕೆ ದುರಹಂಕಾರ ಹೇಗೆ ಆಗುತ್ತದೆ. ಇದು ಬೇಸಿಕ್, ನನಗೆ ಬಿಡಿ, ಆದರೆ ಹೆಂಗಸರು ಎಲ್ಲಿಗೆ ಹೋಗುತ್ತಾರೆ ಎಂದು ಅನಿರುದ್ಧ ಪ್ರಶ್ನೆ ಮಾಡಿದರು. 



'ಜೊತೆ ಜೊತೆಯಲಿ' ತಂಡದ ಜೊತೆ ಕಿರಿಕ್; ಕಿರುತೆರೆಯಿಂದ ನಟ ಅನಿರುದ್ಧ್ ಕಿಕ್ ಔಟ್

'ನಾನು ಮೊದಲೆ ಹೇಳಿದ್ದೆ ಸ್ಕ್ರಿಪ್ಟ್ ಒಂದು ದಿನ ಮೊದಲೇ ಬೇಕು ಅಂತ, ಆದರೂ ಸೆಟ್ ಗೆ ಬಂದಾಗ ಸ್ಕ್ರಿಪ್ಟ್ ಕೊಡುತ್ತಾರೆ. ಅದನ್ನ ಓದಲು ತುಂಬಾ ಸಮಯವಾಗುತ್ತದೆ. ಅನೇಕ ಬಾರಿ ಸರಿ ಇಲ್ಲ ಅಂತ ಹೇಳಿದ್ದೆ ಅದನ್ನು ಅವರು ಒಪ್ಪಿಕೊಂಡಿದ್ದಾರೆ. ಸ್ಕ್ರಿಪ್ಟ್ ವಿಚಾರಕ್ಕೆ ಅಷ್ಟೆ ಮನಸ್ತಾಪ ಆಗಿದ್ದು ಇದನ್ನು ಅವರು ಮಕ್ಕಳ ಮೇಲೆ ಕೈ ಇಟ್ಟು ಹೇಳಲಿ, ನಾನು ನನ್ನ ಮಕ್ಕಳ ಮೇಲೆ ಕೈ ಇಟ್ಟು ಹೇಳುತ್ತೇನೆ ಎಂದು ಚಾಲೆಂಜ್ ಹಾಕಿದರು. 

ಮಾನಹಾನಿಯಾಗಿದೆ 

ನಾನು ಹೋರಾಟ ಮಾಡಿದ್ದು ಸ್ಕ್ರಿಪ್ಟ್ ಗೋಸ್ಕರ ಅಷ್ಟೆ, ಕೊನೆಯ ನಿಮಿಷಕ್ಕೆ ಸ್ಕ್ರಿಪ್ಟ್ ಕೊಟ್ಟರೆ ನನಗೆ ಕೋಪ ಬರುತ್ತೆ. ನನ್ನ ಪಾತ್ರ ನೆಗೆಟಿವ್ ಆಗಬಾರದು ಎಂದು ಮೊದಲೇ ಹೇಳಿದ್ದೆ ಅದನ್ನು ಒಪ್ಪಿಕೊಂಡಿದ್ದರು. ಆದರೆ ಬಳಿಕ ನೆಗೆಟಿವ್ ಆಗಿದೆ. ಆದರೂ ನಾನು ಮಾಡಿದೆ.  ಈಗ ಅವರು ಅನಿರುದ್ಧ ಒಪ್ಪಿಕೊಳ್ಳುತ್ತಿಲ್ಲ ಅಂತ ನನ್ನ ಮೇಲೆ ಹೇಳುತ್ತಿದ್ದಾರೆ. ಇದನ್ನು ಸಹ ಅವರು ಅವರ ಮಕ್ಕಳ ಮೇಲೆ ಕೈ ಇಟ್ಟು ಹೇಳಲಿ ಎಂದು ಹೇಳಿದರು. ನನ್ನ ಮಾನಹಾನಿಯಾಗಿದೆ ಇದನ್ನು ಯಾರಿಗೆ ಹೇಳುವುದು ಎಂದು ಪ್ರಶ್ನೆ ಮಾಡಿದ್ದಾರೆ. 

click me!