HR ಕೆಲಸ ಬಿಟ್ಟು 'ರಂಗನಾಯಕಿ' ಯಾದ ಸ್ಟೈಲ್ ಐಕಾನ್ ಈಕೆ!

By Suvarna News  |  First Published Dec 30, 2019, 12:46 PM IST

ಏನ್‌ ಗುರು ಸಿಕ್ಕಾಪಟ್ಟೆ ಸಖತ್ ಆಗವ್ಳೆ ಹುಡ್ಗಿ, ಅಂತಾ ಹೇಳೋರಿಗೆ ಜಸ್ಟ್‌ ಒಂದೇ ಒಂದು ಲುಕ್ ಮೂಲಕ ಭಯ ಹುಟ್ಟಿಸೋ ಈಕೆ  ರಂಗನಾಯಕಿಯ ಸ್ಟೈಲಿಶ್ ಐಕಾನ್ ವಿಭಾ ಅಲಿಯಾಸ್ ಅನುಶ್ರೀ ಜನಾರ್ಧನ್.
 


ವಿಭಾ ಮೂಲತಃ ಸಕ್ಕರೆ ನಾಡು ಮಂಡ್ಯದ ಬೆಡಗಿ. ಸ್ಕ್ರೀನ್ ಮೇಲೆ ನಟಿಯಾಗಿ ಕಾಣಿಸಿಕೊಳ್ಳುತ್ತೇನೆ ಎಂದು ಕನಸಿನಲ್ಲೂ ಅಂದುಕೊಳ್ಳದ ಇವರು ಇಂಡಸ್ಟ್ರಿಗೆ ಎಂಟ್ರಿ ಆಗಿದ್ದೇ ವಿಶೇಷ.

ಭರತನಾಟ್ಯಂ ಕಲಾವಿದೆ:

Tap to resize

Latest Videos

ಬಾಲ್ಯದಿಂದಲೂ ತಾನೊಬ್ಬಳು ಉತ್ತಮ ಡ್ಯಾನ್ಸರ್ ಆಗಬೇಕೆಂಬ ಕನಸು ಕಂಡಿದ್ದರು. ಡ್ಯಾನ್ಸ್, ಡ್ಯಾನ್ಸ್, ಡ್ಯಾನ್ಸ್‌ಎಂದೇ ಇದ್ದ ಇವರು ನಟನೆಯ ಕುರಿತು ಯಾವುದೇ ಕಲ್ಪನೆ ಕೂಡಾ ಮಾಡಿರಲಿಲ್ಲ. ಡ್ಯಾನ್ಸ್‌ನಲ್ಲಿ ಇವರ ಹಾವಭಾವಗಳನ್ನು ಗಮನಿಸಿದ ಸ್ನೇಹಿತರೊಬ್ಬರು ಆಡಿಷನ್‌ ಒಂದಿದೆ. ಜಸ್ಟ್‌ ಟ್ರಯಲ್‌ ಕೊಟ್ಟು ನೋಡು ಎಂದಿದ್ದರಂತೆ. ಅದೇ ಆಡಿಷನ್‌ ಇವರ ಜೀವನಕ್ಕೆ ನಂತರ ಯೂ- ಟರ್ನ್ ನೀಡಿತ್ತು.

ಗಿನ್ನಿಸ್‌ ಪುರಸ್ಕತೆ:

ನಟನೆಗೆ ಬರೋ ಮೊದಲು ಅನುಶ್ರೀ ಪೂಮಾ ಸ್ಪೋರ್ಟ್ಸ್‌ ಕಂಪೆನಿಯಲ್ಲಿ ಹೆಚ್‌ಆರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆ ಸಂದರ್ಭದಲ್ಲಿ ಮಹಿಳೆಯರಿಗಾಗಿ 'ಡುಯು' ಎಂಬ ಕ್ಯಾಂಪೇನ್ ಮಾಡಿ ಅದಕ್ಕಾಗಿ ಗಿನ್ನಿಸ್‌ ಅವಾರ್ಡ್‌ನ್ನು ಪಡೆದಿದ್ದರು.

ರೀಲ್‌ನಲ್ಲಿ ಖಡಕ್ ವಿಲನ್:

ಅನುಶ್ರೀ ಮೊದಲು ಬಣ್ಣ ಹಚ್ಚಿದ್ದು ಮಹಾಕಾಳಿ ಧಾರಾವಾಹಿಗಾಗಿ. ಆ ನಂತರ ಬ್ರಹ್ಮಗಂಟು, ಜೈ ಹನುಮಾನ್, ಶ್ರೀವಿಷ್ಣು ದಶಾವತಾರ ಧಾರಾವಾಹಿಗಳನ್ನು ನಿರ್ವಹಿಸಿದ ಇವರು ಸದ್ಯ 'ರಂಗನಾಯಕಿ'ಯಲ್ಲಿ ಖಡಕ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಪೌರಾಣಿಕ ಮತ್ತು ಸಾಮಾಜಿಕ ನಟನೆಗಳಿಗೂ ಸೈ ಎನಿಸಿಕೊಂಡಿರುವ ಇವರು ನಿಜ ಜೀವನದಲ್ಲಿ ಸಾಧು ಸ್ವಭಾವಿ.

'Bro-in-Law' ಅಂತ ಹೇಳ್ತಾ 'ಜೊತೆ ಜೊತೆಯಲಿ' ಮಿಂಚುತ್ತಿರುವ ಮಾನ್ಸಿ ಯಾರು ?

ಸ್ಟೈಲ್ ಐಕಾನ್:

ಧಾರವಾಹಿಗಳಲ್ಲಿ ವಿಲನ್‌ಗಳು ಸ್ಟೈಲ್ ಆಗಿ ಇದ್ದೇ ಇರುತ್ತಾರೆ. ಆದ್ರೆ ಅನುಶ್ರೀ ಅವರ ಸ್ಪೆಷಾಲಿಟಿ ಅಂದ್ರೆ ಇವರು ಮೊದಲೇ ಹೆಚ್‌ಆರ್‌ ಆಗಿದ್ದವರು ಹಾಗಾಗಿ ಕ್ರಿಯೇಟಿವ್ ಐಡಿಯಾಗಳೂ ಇದ್ದೇ ಇರುತ್ತವೆ. ಅಂತಹ ಐಡಿಯಾಗಳನ್ನೂ ಈಗ ಡ್ರೆಸ್ ಮೂಲಕ ಪ್ರಯೋಗ ಮಾಡುವುದರಿಂದ ಇವರಿಗೆ ಬೇಕಾದ ಕಾಸ್ಯೂಮ್ ಡಿಸೈನ್‌ಗಳನ್ನು ಇವ್ರೇ ಮಾಡ್ಕೊಳ್ತಾರಂತೆ. "ಹೀಗೆ ದಿನೇ ದಿನೇ ಒಂದೊಂದು ಟ್ರೆಂಡಿ ಡಿಸೈನ್‌ಗಳಲ್ಲಿ ಕಾಣಿಸಿಕೊಳ್ಳುವ ಇವರು ರಂಗನಾಯಕಿಯ ಸ್ಟೈಲಿಶ್ ಐಕಾನ್‌'ಎಂದೇ ಫೇಮಸ್‌ ಆಗಿದ್ದಾರೆ.

ಡಿಸೆಂಬರ್ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!