
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಮುದ್ದು ಸೊಸೆ ಸೀರಿಯಲ್ ಗೆ ಸಾಕಷ್ಟು ಟ್ವಿಸ್ಟ್ ಸಿಕ್ಕಿದೆ. ಒಂದಾದ್ಮೇಲೆ ಒಂದು ಟ್ವಿಸ್ಟ್ ಪಡೆದ ನಂತ್ರ ಈಗ ಸೀರಿಯಲ್ ಗೆ ಹೊಸಬರ ಎಂಟ್ರಿಯಾಗ್ತಿದೆ. ಯಸ್, ಗೌತಮಿ ಜಾದವ್ ಅವರು ಮುದ್ದು ಸೊಸೆ ಸೀರಿಯಲ್ ಕಾಣಿಸಿಕೊಂಡಿದ್ದಾರೆ.
ಮುದ್ದು ಸೊಸೆ ಸೀರಿಯಲ್ ನಲ್ಲಿ ಗೌತಮಿ ಜಾದವ್, ಸೈಕಾಲಜಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸತ್ಯ ಸೀರಿಯಲ್ ನಂತ್ರ ಗೌತಮಿ, ಬಿಗ್ ಬಾಸ್ ಗೆ ಎಂಟ್ರಿಯಾಗಿದ್ದರು. ಬಿಗ್ ಬಾಸ್ ಮುಗಿದ ಮೇಲೆ ಗೌತಮಿ ಯಾವುದೇ ಸೀರಿಯಲ್ ನಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿಲ್ಲ. ಈಗ ಮತ್ತೆ ಕಲರ್ಸ್ ಕನ್ನಡಕ್ಕೆ ವಾಪಸ್ ಬಂದಿದ್ದಾರೆ. ಮುದ್ದು ಸೊಸೆ ಸೀರಿಯಲ್ ನಲ್ಲಿ, ವಿದ್ಯಾಗೆ ಡಾಕ್ಟರ್ ಆಗಿ ಗೌತಮಿ ಎಂಟ್ರಿಯಾಗಿದ್ದು, ಈಗಾಗಲೇ ಅದ್ರ ಪ್ರೊಮೋವನ್ನು ಕಲರ್ಸ್ ಕನ್ನಡ ಪೋಸ್ಟ್ ಮಾಡಿದೆ.
ಮುದ್ದು ಸೊಸೆ ಸೀರಿಯಲ್ ನಲ್ಲಿ ಈಗ ದೊಡ್ಡ ಬದಲಾವಣೆಯಾಗಿದೆ. ಇಷ್ಟು ದಿನ ಭದ್ರ ಹಾಗೂ ವಿದ್ಯಾ ಗಲಾಟೆ, ದೂರವಾಗೋದು ಮತ್ತೆ ಒಂದಾಗೋದು ಕಾಮನ್ ಆಗಿತ್ತು. ನಂತ್ರ ಡಿವೋರ್ಸ್ ಕೂಡ ನೀಡಲಾಯ್ತು. ವಿದ್ಯಾ ಗರ್ಭಿಣಿ ಇರುವಾಗಲೇ ಡಿವೋರ್ಸ್ ನೀಡಿದ್ದ ಭದ್ರ ಇನ್ನೊಂದು ಮದುವೆಗೆ ಸಿದ್ಧನಾಗಿದ್ದ. ಇನ್ನೇನು ಮದುವೆ ನಡೆಯಬೇಕು ಆಗ ವಿದ್ಯಾಗೆ ಆಕ್ಸಿಡೆಂಟ್ ಆಗಿರುವ ವಿಷ್ಯ ಗೊತ್ತಾಗಿದೆ. ಆಸ್ಪತ್ರೆಗೆ ಓಡಿ ಬರುವ ಭದ್ರನಿಗೆ ವಿದ್ಯಾ ಆಘಾತ ನೀಡಿದ್ದಾಳೆ. ಬರೀ ಭದ್ರ ಮಾತ್ರ ಅಲ್ಲ ಇಡೀ ಕುಟುಂಬವೇ ಶಾಕ್ ಆಗಿದೆ. ವಿದ್ಯಾಗೆ ಆಕ್ಸಿಡೆಂಟ್ ಆಗಿ ಎಲ್ಲವನ್ನೂ ಮರೆತಿದ್ದಾಳೆ. ಭದ್ರನನ್ನೇ ನೀನು ಯಾರು ಅಂತ ಕೇಳಿದ್ದಾಳೆ. ಮದುವೆ, ಮಗು ಎಲ್ಲವನ್ನೂ ವಿದ್ಯಾ ಮರೆತಿದ್ದಾಳೆ. ಇದನ್ನು ಕೇಳಿ ಮನೆಯವರೆಲ್ಲ ಆಘಾತದಲ್ಲಿದ್ರೆ, ವಿದ್ಯಾಗೆ ಟ್ರಿಟ್ಮೆಂಟ್ ನೀಡಲು ಗೌತಮಿ ಡಾಕ್ಟರ್ ಆಗಿ ಸಿರಿಯಲ್ ಗೆ ಎಂಟ್ರಿ ಪಡೆದಿದ್ದಾರೆ.
ಪ್ರೋಮೋ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದ ಗೌತಮಿ, ಈಗ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ತಿರೋದು ಅಭಿಮಾನಿಗಳಿಗೆ ಸಂತೋಷ ತಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.