'ಸೊಗಡು ಸಿದ್ದು ವಿರುದ್ಧ ಹೇಳಿಕೆಗಳಿಗೆ ಕಡಿವಾಣ ಹಾಕಲಿ'..!

By Kannadaprabha NewsFirst Published Oct 27, 2019, 12:34 PM IST
Highlights

ಹೈಕಮಾಂಡ್‌ ಓಲೈಕೆಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲೆಯ ಕುರುಬ ಮುಖಂಡರ ವಿರುದ್ಧ ನಾಲಿಗೆ ಹರಿಬಿಡುತ್ತಿರುವ ಮಾಜಿ ಸಚಿವ ಸೊಗಡು ಶಿವಣ್ಣ ತಮ್ಮ ಹೇಳಿಕೆಗಳಿಗೆ ಕಡಿವಾಣ ಹಾಕದಿದ್ದರೆ ತಕ್ಕ ಪಾಠ ಕಲಿಸುವ ಎಚ್ಚರಿಕೆಯನ್ನು ಕುರುಬ ಸಂಘಟನೆಗಳ ಒಕ್ಕೂಟ ಹಾಗೂ ಸಿದ್ದರಾಮಯ್ಯ ಅಭಿಮಾನಿಗಳ ಬಳಗ ನೀಡಿವೆ.

ತುಮಕೂರು(ಅ.27): ಹೈಕಮಾಂಡ್‌ ಓಲೈಕೆಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲೆಯ ಕುರುಬ ಮುಖಂಡರ ವಿರುದ್ಧ ನಾಲಿಗೆ ಹರಿಬಿಡುತ್ತಿರುವ ಮಾಜಿ ಸಚಿವ ಸೊಗಡು ಶಿವಣ್ಣ ತಮ್ಮ ಹೇಳಿಕೆಗಳಿಗೆ ಕಡಿವಾಣ ಹಾಕದಿದ್ದರೆ ತಕ್ಕ ಪಾಠ ಕಲಿಸುವ ಎಚ್ಚರಿಕೆಯನ್ನು ಕುರುಬ ಸಂಘಟನೆಗಳ ಒಕ್ಕೂಟ ಹಾಗೂ ಸಿದ್ದರಾಮಯ್ಯ ಅಭಿಮಾನಿಗಳ ಬಳಗ ನೀಡಿವೆ.

ರಾಜಕೀಯವಾಗಿ ಮೂಲೆ ಗುಂಪಾಗಿರುವ ಸೊಗಡು ಶಿವಣ್ಣ ತಮ್ಮ 20 ವರ್ಷಗಳ ಅಧಿಕಾರಾವಧಿಯಲ್ಲಿ ಏನು ಮಾಡಿದ್ದಾರೆ. ಹೇಗೆ ನಡೆದು ಕೊಂಡಿದ್ದಾರೆ ಎಂಬುದು ಜಿಲ್ಲೆಯ ಜನತೆಗೆ ತಿಳಿದಿದೆ. ಸಜ್ಜನರಾಗಿದ್ದರೆ ಬಿಜೆಪಿ ಹೈಕಮಾಂಡ್‌ ಇವರನ್ನು ಏಕೆ ಮೂಲೆ ಗುಂಪು ಮಾಡುತ್ತಿತ್ತು. ರಾಜಕೀಯವಾಗಿ ನೇಪಥ್ಯಕ್ಕೆ ಸರಿಯುತ್ತಿರುವ ಸೊಗಡು ಶಿವಣ್ಣ ಪ್ರತಿಪಕ್ಷಗಳ ಮುಖಂಡರ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ಕೊಟ್ಟರೆ ಹೈಕಮಾಂಡ್‌ ಗುರುತಿಸಿ ಸ್ಥಾನಮಾನ ನೀಡುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ಈ ಭ್ರಮೆಯಲ್ಲಿ ಅಹಿಂದ ವರ್ಗಗಳ ಸರ್ವೋಚ್ಛ ನಾಯಕ ಕಳಂಕ ರಹಿತ ರಾಜಕಾರಣಿಯಾಗಿರುವ ಸಿದ್ದರಾಮಯ್ಯ ಬಗ್ಗೆ ಲಘುವಾಗಿ ಮಾತನಾಡಿದರೆ ನಾವುಗಳು ಸುಮ್ಮನೆ ಕೂರಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ಪೊಲೀಸಪ್ಪನ ಬಾಯಿಗೇ ಆಲ್ಕೋ ಮೀಟರ್ ಇಟ್ಟು ಊದು ಎಂದ್ರು ಜನ..!...

ಹಿಂದೂಗಳಿಗೆ ಅನ್ಯಾಯವಾದರೆ ನನ್ನ ರಕ್ತ ಕುದಿಯುತ್ತದೆ ಎಂದು ಬೀಗುತ್ತಿರಲ್ಲ. ದೇಶದಲ್ಲಿ ಸಾವಿರಾರು ದಲಿತ ಹೆಣ್ಣು ಮಕ್ಕಳ ಅತ್ಯಾಚಾರ ಆಗಿದೆ. ಹಿಂದುತ್ವದ ಪ್ರತಿಪಾದನೆ ಮಾಡಿಕೊಂಡು ಕಾನೂನಿನ ಕುಣಿಕೆಯಲ್ಲಿ ಸಿಲುಕಿರುವ ಹಿಂದುತ್ವವಾದಿಗಳನ್ನು ನೀವೇಕೆ ಬಚ್ಚಿಟ್ಟುಕೊಂಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಬಂಡಾರ ಹಣೆಗೆ ಇಟ್ಟುಕೊಳ್ಳುತ್ತಾರೆ:

ಸೊಗಡು ಶಿವಣ್ಣ ವಿರುದ್ಧ ಕುರುಬರ ಸಂಘಟನೆಗಳ ಒಕ್ಕೂಟ ನಡೆಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಕುರುಬ ಮುಖಂಡರ ಬಂಡಾರ ಬಿಚ್ಚಿಡುತ್ತೇನೆ ಎಂದು ಹೇಳಿದ್ದಾರೆ. ಬಂಡಾರ ನಮ್ಮ ಸಮುದಾಯದ ತಿಲಕವಿದ್ದಂತೆ ಮೈಲಾರನ ಆರಾಧಕರಾದ ಕುರುಬರು ಬಂಡಾರವನ್ನು ತಮ್ಮ ಹಣೆಗೆ ಇಟ್ಟುಕೊಳ್ಳುತ್ತಾರೆ. ಕುರುಬರ ಸಾಂಸ್ಕೃತಿಕ ತಿಲಕ ಬಂಡಾರ. ಇದೇ ಕುರುಬ ಸಮುದಾಯದಲ್ಲಿ ಜನಿಸಿರುವ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಬ್ರೀಗೇಡ್‌ ಹೆಸರಿನಲ್ಲಿ ಇದೇ ಬಂಡಾರವನ್ನಿಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿಕೊಂಡಿರುವುದನ್ನು ರಾಜ್ಯದ ಜನತೆ ಇನ್ನು ಮರೆತಿಲ್ಲ ಎಂಬುವುದು ನಿಮಗೆ ತಿಳಿದಿರಲಿ ಎಂದಿದ್ದಾರೆ.

ಪ್ರತಿ ಲೋಕಸಭಾ ಕ್ಷೇತ್ರದಲ್ಲಿ 1 ಲಕ್ಷ ಮನೆ ನಿರ್ಮಾಣ: ಸಂಸದ ಭರವಸೆ

ಬಾಡೂಟ ತಿನ್ನಲು ದಲಿತ ಮತ್ತು ಹಿಂದುಳಿದ ಸಮುದಾಯದ ಮನೆಗಳಿಗೆ ಹೋಗಿದ್ದೀರೇ ಹೊರತು ಆ ಸಮುದಾಯಗಳ ಮುಖಂಡರನ್ನು ರಾಜಕೀಯವಾಗಿ ಬೆಳೆಸಿದ್ದೀರಾ. ಕನಿಷ್ಠ ಪಕ್ಷ ದಲಿತರ ಅಭಿವೃದ್ಧಿಗೆ ವಿಧಾನಸಭೆಯಲ್ಲಿ ಎಷ್ಟುಬಾರಿ ಚರ್ಚೆ ಮಾಡಿದ್ದೀರಾ, ಎಷ್ಟುಅನುದಾನ ತಂದಿದ್ದೀರಾ ಎಂದು ಬಹಿರಂಗಗೊಳಿಸುವಂತೆ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ಚಿಕ್ಕವೆಂಕಟಯ್ಯ, ಹಾಲಿ ಸದಸ್ಯ ಕೊಂಡವಾಡಿ ತಿಮ್ಮಯ್ಯ, ಚಿಕ್ಕನಾಯಕನಹಳ್ಳಿ ಪುರಸಭೆ ಮಾಜಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್‌, ಮುಖಂಡರಾದ ಪುಟ್ಟಲಿಂಗಯ್ಯ, ಬರಗೂರು ನಟರಾಜ್‌, ಸುನಿತಾ, ಕೆ.ಎಸ್‌.ಗುರುಪ್ರಕಾಶ್‌, ಗಂಗಹನುಮಯ್ಯ, ಚಂದ್ರೇಗೌಡ, ಶಂಕರ್‌ ಮುಂತಾದವರು ಹಾಜರಿದ್ದರು.

click me!