ತುಮಕೂರು: ವಿಚಿತ್ರ ಜ್ವರಕ್ಕೆ ವ್ಯಕ್ತಿಯೋರ್ವ ಬಲಿ?

By Kannadaprabha NewsFirst Published Oct 27, 2019, 12:11 PM IST
Highlights

ವಿಚಿತ್ರ ಜ್ವರಕ್ಕೆ ವ್ಯಕ್ತಿಯೋರ್ವ ಬಲಿಯಾಗಿರುವ ಘಟನೆ ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿ ಎಚ್‌.ಭೈರಾಪುರ ಗ್ರಾಮದಲ್ಲಿ ಶನಿವಾರ ನಡೆದಿದೆ. ತಿಪಟೂರು ತಾಲೂಕಿನ ಹಾಲ್ಕುರಿಕೆ ಹಾಗೂ ಮಣಕೀಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಉಂಟಾಗಿದ್ದು ಜನರು ಜ್ವರ, ಕೆಮ್ಮ, ನೆಗಡಿಯಂತಹ ರೋಗಗಳಿಂದ ಬಳಲುತ್ತಿದ್ದಾರೆ.

ತುಮಕೂರು(ಅ.27): ವಿಚಿತ್ರ ಜ್ವರಕ್ಕೆ ವ್ಯಕ್ತಿಯೋರ್ವ ಬಲಿಯಾಗಿರುವ ಘಟನೆ ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿ ಎಚ್‌.ಭೈರಾಪುರ ಗ್ರಾಮದಲ್ಲಿ ಶನಿವಾರ ನಡೆದಿದೆ.

ಗ್ರಾಮದ ಚಂದ್ರನಾಯಕ್‌(45) ಜ್ವರಕ್ಕೆ ಬಲಿಯಾದ ದುರ್ದೈವಿ. ಇವರು ಎಸ್‌ಡಿಎಂಸಿ ಉಪಾಧ್ಯಕ್ಷರಾಗಿದ್ದು, 15 ದಿನಗಳಿಂದಲೂ ಜ್ವರದಿಂದ ಬಳಲುತ್ತಿದ್ದರು. ಕಡು ಬಡವರಾಗಿರುವ ಇವರ ಬಳಿ ಹಣವಿಲ್ಲದಿರುವುದರಿಂದ ಸ್ಥಳೀಯ ಆಸ್ಪತ್ರೆಗೆ ತೋರಿಸಿದರೂ ಜ್ವರ ಕಡಿಮೆಯಾಗದ ಕಾರಣ ಶನಿವಾರ ಮೃತಪಟ್ಟಿದ್ದಾರೆ. ಇವರಿಗೆ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು, ಕುಟುಂಬಕ್ಕೆ ಆಸರೆಯಾಗಿದ್ದ ಚಂದ್ರನಾಯಕ್‌ನ ಅಕಾಲಿಕ ಮರಣದಿಂದ ಇಡೀ ಕುಟುಂಬ ಬೀದಿಗೆ ಬೀಳುವಂತಾಗಿದೆ. ಅಪ್ಪನನ್ನು ಕಳೆದುಕೊಂಡ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು.

ಸಾಂಕ್ರಮಿಕ ರೋಗದ ಭೀತಿ:

ತಾಲೂಕಿನ ಹಾಲ್ಕುರಿಕೆ ಹಾಗೂ ಮಣಕೀಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಉಂಟಾಗಿದ್ದು ಜನರು ಜ್ವರ, ಕೆಮ್ಮ, ನೆಗಡಿಯಂತಹ ರೋಗಗಳಿಂದ ಬಳಲುತ್ತಿದ್ದಾರೆ. ಬಹುತೇಕ ಮನೆಗಳಲ್ಲಿ ದೊಡ್ಡವರು- ಮಕ್ಕಳಾದಿಯಾಗಿ ಒಂದಲ್ಲೊಂದು ರೋಗಗಳಿಗೆ ತುsdsdತ್ತಾಗುತ್ತಿದ್ದು, ಜ್ವರ, ತಲೆನೋವು, ಕೈಕಾಲು ನೋವು ಕಾಣಿಸಿಕೊಂಡರೆ ಮತ್ತೆ ಕೆಲವರಿಗೆ ಕೀಲುಗಳಲ್ಲಿ ನೋವು, ವಾಂತಿ ಸೇರಿದಂತೆ ದಿನಬಿಟ್ಟುದಿನ ಬರುತ್ತಿರುವ ಜ್ವರದಿಂದ ಬಳಲುತ್ತಿದ್ದಾರೆ.

ಪೊಲೀಸಪ್ಪನ ಬಾಯಿಗೇ ಆಲ್ಕೋ ಮೀಟರ್ ಇಟ್ಟು ಊದು ಎಂದ್ರು ಜನ..!

ಗ್ರಾಮಗಳ ಸಾಕಷ್ಟುಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ತಾಲೂಕು ಆರೋಗ್ಯಾಧಿಕಾರಿಗಳ ನಿರ್ಲಕ್ಷ್ಯವೂ ಎದ್ದು ಕಾಣುತ್ತಿದ್ದು, ಒಂದು ಬಾರಿಯೂ ಗ್ರಾಮಗಳಿಗೆ ಇವರು ಭೇಟಿ ನೀಡಿಲ್ಲ. ಅಧಿಕಾರಗಳ ಬೇಜವಾಬ್ದಾರಿಯಿಂದಾಗಿ ಇಂತಹ ಬರಗಾಲದ ಪರಿಸ್ಥಿತಿಯಲ್ಲಿಯೂ ಬಡ ಮತ್ತು ಮಧ್ಯಮ ವರ್ಗದ ಜನರು ಆಸ್ಪತ್ರೆ ಖರ್ಚುಗಳಿಗೆ ಪರದಾಡುವಂತಾಗಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳೂ ಸಹ ಗಮನ ಹರಿಸಿ ನೋವು ಅನುಭವಿಸುತ್ತಿರುವ ಜನರಿಗೆ ಸ್ಪಂದಿಸಬೇಕಾಗಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

click me!