ತುಮಕೂರು(ಜ.29): ರೈತನಿಗೆ ಮಹೀಂದ್ರ ಶೋ ರೂಂ ಸಿಬ್ಬಂದಿ(Mahindra Showroom) ಅವಮಾನ ಮಾಡಿದ ಪ್ರಕರಣ ಇಡೀ ದೇಶದಲ್ಲಿ ಭಾರಿ ಸದ್ದು ಮಾಡಿತ್ತು. ಈ ಕುರಿತು ಸ್ವತಃ ಆನಂದ್ ಮಹೀಂದ್ರ(Ananand Mahindra) ಪ್ರತ್ರಿಕ್ರಿಯೆ ನೀಡಿದ್ದರು. ಅಪಮಾನದ ನಡುವೆ ಮಹೀಂದ್ರ ಬೊಲೆರೋ(MahindrA bolero) ಕಾರು ಬುಕ್ ಮಾಡಿದ್ದ ತುಮಕೂರಿನ ರೈತ ಕೆಂಪೇಗೌಡ(Farmer Kemegowda) ಇಂದು ಕಾರು ಖರೀದಿಸಿದ್ದಾರೆ.
ಕೆಂಪೇಗೌಡ 9.40 ಲಕ್ಷ ರೂಪಾಯಿ ನೀಡಿ ಹೊಚ್ಚ ಹೊಸ ಮಹೀಂದ್ರ ಬೊಲೆರೋ ಕಾರು ಖರೀದಿಸಿದ್ದಾನೆ. ಜನವರಿ 21ರಂದು ಅವಮಾನ ಘಟನೆ ನಡೆದ ಬೆನ್ನಲ್ಲೇ 2ಲಕ್ಷ ರೂಪಾಯಿ ಪಾವತಿಸಿ ಮಹೀಂದ್ರ ಬೊಲೆರೋ ಕಾರು ಬುಕ್(Car Bookings) ಮಾಡಿದ್ದ. ಇದೀಗ ಉಳಿದ ಹಣವನ್ನು ಬ್ಯಾಂಕ್ ಲೋನ್*Bank Loan) ಮಾಡಿರುವ ಕೆಂಪೇಗೌಡ, ಕಂತಿನ ಮೂಲಕ ಹಣ ಪಾವತಿಸುವ ಒಪ್ಪಂದ ಮಾಡಿಕೊಂಡಿದ್ದಾನೆ. ತುಮಕೂರು ತಾಲ್ಲೂಕಿನ ರಾಮನಹಳ್ಳಿ ಗ್ರಾಮದ ನಿವಾಸಿ ಕೆಂಪೇಗೌಡ ಇದೀಗ ದೇಶದಲ್ಲಿ ಹೀರೋ ಆಗಿದ್ದಾರೆ.
ಜನವರಿ 21 ರಂದು ರೈತ ಕೆಂಪೇಂಗೌಡ ತುಮಕೂರಿನ(Tumkur) ಮಹೀಂದ್ರ ಶೋ ರೂಂಗೆ ತೆರಳಿ ವಾಹನ ಪರಿಶೀಲಿಸಲು ಮುಂದಾಗಿದ್ದಾನೆ. ಆದರೆ ಕೆಂಪೇಗೌಡನ ವೇಷಭೂಷಣ ನೋಡಿದ ಶೋ ರೂಂ ಸಿಬ್ಬಂದಿ ಅಪಮಾನ ಮಾಡಿದ್ದಾರೆ. 10 ರೂಪಾಯಿ ನೀಡುವ ಯೋಗ್ಯತೆ ಇಲ್ಲ, ಕಾರು ಖರೀದಿಸಲು ಬಂದಿದ್ದಾನೆ. ನಿಮಗೆಲ್ಲಾ ಸುಮ್ಮನೆ ಕಾರಿನ ಕುರಿತು ವಿವರಿಸಲು ಸಾಧ್ಯವಿಲ್ಲ ಎಂದು ಹೀಯಾಳಿಸಿದ್ದಾರೆ.
ಸಿಬ್ಬಂದಿ ಅಪಮಾನದಿಂದ ರೊಚ್ಚಿಗೆದ್ದ ರೈತ ಕೇಂಪೆಗೌಡ, 2 ಗಂಟೆಯಲ್ಲಿ 10 ಲಕ್ಷ ರೂಪಾಯಿ ಹಣ ಸಂಗ್ರಹಿಸಿ ಈಗಲೇ ಕಾರು ನೀಡುವಂತೆ ಪಟ್ಟು ಹಿಡಿದಿದ್ದಾನೆ. ಇಷ್ಟೇ ಅಲ್ಲ ಈ ರೀತಿ ಅವಮಾನ ಎಂದಿಗೂ ಸಹಿಸುವುದಿಲ್ಲ ಎಂದು ಕೆಂಪೇಗೌಡ ಹಾಗೂ ಆತನ ಸ್ನೇಹಿತರು ಶೋ ರೂಂನಲ್ಲಿ ಜಾಮಾಯಿಸಿದ್ದಾರೆ. ಆಗಿರುವ ಪ್ರಮಾದ ಅರಿತ ಸಿಬ್ಬಂದಿ ಕ್ಷಮೆ ಯಾಚಿಸಿದ್ದಾರೆ. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ರೈತ ಕೆಂಪೇಗೌಡನ ಮನವೋಲಿಸಿದ ಶೋ ರೂಂ ಸಿಬ್ಬಂದಿ ಬೊಲೆರೋ ವಾಹನ ಖರೀದಿಸಲು ಅನುವು ಮಾಡಿಕೊಟ್ಟಿದ್ದರು.
Tumakuru: ರೈತಗೆ ಅಪಮಾನ ಕೇಸ್: ಕಂಪನಿ ಸಿದ್ಧಾಂತದಲ್ಲಿ ತಪ್ಪಾಗಿದ್ದರೆ ಪರಿಶೀಲನೆ: ಆನಂದ್ ಮಹಿಂದ್ರಾ
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇಷ್ಟೇ ಅಲ್ಲ ದೇಶಾದ್ಯಂತ ಮಾಧ್ಯಮಗಳು ಈ ಕುರಿತು ಸುದ್ದಿ ಬಿತ್ತರ ಮಾಡಿತ್ತು. ಇದರ ಬೆನ್ನಲ್ಲೇ ಮಹೀಂದ್ರ ಮುಖ್ಯಸ್ಥ ಆನಂದ್ ಮಹೀಂದ್ರ ಪ್ರತಿಕ್ರಿಯೆ ನೀಡಿದ್ದರು. ಎಲ್ಲರ ಅಭಿವೃದ್ಧಿ ಮಹೀಂದ್ರ ಧ್ಯೇಯವಾಗಿದೆ. ಸಿಬ್ಬಂದಿಯಿಂದ ಅಥವಾ ನಮ್ಮ ಕಡೆಯಿಂದ ತಪ್ಪಾಗಿದ್ದರೆ ತಕ್ಷಣವೇ ಗಮನಹರಿಸಲಾಗುತ್ತದೆ. ಪ್ರತಿಯೊಬ್ಬರ ಘನತೆಯನ್ನು ಎತ್ತಿಹಿಡಿಯಲು ಮಹೀಂದ್ರ ಬದ್ಧವಾಗಿದೆ. ಇದರಲ್ಲಿ ಯಾವುದೇ ರಾಜಿ ಇಲ್ಲ. ಈ ಕುರಿತು ಸಿಬ್ಬಂದಿಗಳಿಗೆ ಸೂಕ್ತ ಮಾಹಿತಿ ನೀಡುತ್ತೇವೆ ಎಂದು ಆನಂದ್ ಮಹೀಂದ್ರ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದರು.
ಮಹೀಂದ್ರ ಕಾರ್ಯನಿರ್ವಾಹಕ ಅಧಿಕಾರಿ ವಿಜಯ್ ನಕ್ರಾ ಈ ಕುರಿತು ಪ್ರತಿಕ್ರಿಯಿಸಿ ಸೂಕ್ತ ಕ್ರಮ ಕೈಗೊಳ್ಳವುದಾಗಿ ಭರವಸೆ ನೀಡಿದ್ದಾರೆ. ಗ್ರಾಹಕರು ಹಾಗೂ ಡೀಲರ್‌ಶಿಪ್ ಎರಡೂ ಕೂಡ ಉದ್ಯಮದ ಪ್ರಮುಖ ಅಂಗಗಳು ಇದರಲ್ಲಿ ಯಾರು ತಪ್ಪೆಸಗಿದರೆ ಉದ್ಯಮಕ್ಕೆ ಹೊಡೆತ ಬೀಳಲಿದೆ. ಶೋ ರೂಂಗೆ ಆಗಮಿಸುವ ಪ್ರತಿಯೊಬ್ಬ ಗ್ರಾಹಕನಿಗೆ ಗೌರವ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಇದರಲ್ಲಿ ಯಾವುದೇ ತಪ್ಪನ್ನು ಸಹಿಸಲು ಸಾಧ್ಯವಿಲ್ಲ. ಸಿಬ್ಬಂದಿಯಿಂದ ಆಗಿರುವ ಪ್ರಮಾಮದಕ್ಕೆ ಕ್ಷಮೆ ಕೇಳುತ್ತಾ ಕುರಿತು ಸಿಬ್ಬಂದಿಗಳಿಗೆ ಕೌನ್ಸಲಿಂಗ್ ಸೇರಿದಂತೆ ಎಲ್ಲಾ ಸಲಹೆ ಸೂಚನೆಗಳನ್ನು ನೀಡುತ್ತೇವೆ ಎಂದು ವಿಜಯ್ ನಕ್ರಾ ಹೇಳಿದ್ದಾರೆ.