ತುಮಕೂರು: ರಾಗಿ ಹೊಲದಲ್ಲಿತ್ತು ಬೃಹತ್ ಗಾತ್ರದ ಎರಡು ಹೆಬ್ಬಾವು..!

By Web DeskFirst Published Nov 15, 2019, 10:21 AM IST
Highlights

ತುಮಕೂರಿನ ಹೊಲವೊಂದರಲ್ಲಿ ಭಾರೀ ಗಾತತ್ರದ ಎರಡು ಹೆಬ್ಬಾವುಗಳು ಪತ್ತೆಯಾಗಿವೆ. ಹುಲ್ಲಿನ ನಡುವೆ ಇದ್ದ ಎರಡು ಹೆಬ್ಬಾವುಗಳನ್ನು ಸೆರೆ ಹಿಡಿಯಲಾಗಿದ್ದು, ಬುಕ್ಕಾಪಟ್ಟಣ ಅರಣ್ಯ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ.

ತುಮಕೂರು(ನ.15): ಚಿಕ್ಕನಾಯಕನಹಳ್ಳಿ ತಾಲೂಕಿನ ತಮ್ಮಡಿಹಳ್ಳಿ ಬಿಳೇಕಲ್ಲು ಗೊಲ್ಲರಹಟ್ಟಿಯ ಹೊಲದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಸೆರೆಯಾಗಿದೆ. ಸೆರೆಯಾದ ಹಾವುಗಳನ್ನು ಬುಕ್ಕಾಪಟ್ಟಣ ಅರಣ್ಯ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ತಮ್ಮಡಿಹಳ್ಳಿ ಬಿಳೇಕಲ್ಲು ಗೊಲ್ಲರಹಟ್ಟಿಯ ಹೊಲದಲ್ಲಿ ಹೆಬ್ಬಾವುಗಳು ಪತ್ತೆಯಾಗಿದ್ದು, ಕುದುರೆ ಕಣಿವೆ ಅರಣ್ಯದಿಂದ ಹೆಬ್ಬಾವುಗಳು ಆಹಾರಕ್ಕಾಗಿ ಹೊಲಕ್ಕೆ ಬಂದಿರುವ ಶಂಕೆ ವ್ಯಕ್ತವಾಗಿದೆ.

ಎಲ್ಲೆಲ್ಲಿ ಸುತ್ತಿದ್ರೂ ಮಲಗೋದಕ್ಕೆ ಮಾತ್ರ ಕಾಳಿಂಗಕ್ಕೆ ತನ್ನ ಮನೆಯೇ ಬೇಕು..!

ಎರಡೂ ಹಾವುಗಳು ಬೃಹತ್ ಗಾತ್ರದವುಗಳಾಗಿದ್ದು, ಹೊಲದಲ್ಲಿ ಹುಲ್ಲಿನ ನಡುವೆ ಕಂಡು ಬಂದಿದೆ. ರಮೇಶ ಎಂಬುವವರ ಸೇರಿದ ರಾಗಿ ಹೊಲದಲ್ಲಿ ಹೆಬ್ಬಾವು ಕಂಡು ಬಂದಿದ್ದು, ಸಾರ್ವಜನಿಕರ ಸಹಾಯದಿಂದ ಹೆಬ್ಬಾವು ಹಿಡಿಯಲಾಗಿದೆ.

ಮಿಲನದ ಬಳಿಕ ಸಂಗಾತಿಯನ್ನೇ ತಿನ್ನುವ ಕಾಳಿಂಗ! ಕಾರಣವೇನು?.

click me!