ಬಿಎಸ್‌ವೈ ಜಾಣನಡೆ: ರೆಬೆಲ್ ಆಗಿದ್ದ ಸೊಗಡು ಶಿವಣ್ಣ ಮನೆಯಲ್ಲಿ ಊಟ

Published : Nov 14, 2019, 03:06 PM IST
ಬಿಎಸ್‌ವೈ ಜಾಣನಡೆ: ರೆಬೆಲ್ ಆಗಿದ್ದ ಸೊಗಡು ಶಿವಣ್ಣ ಮನೆಯಲ್ಲಿ ಊಟ

ಸಾರಾಂಶ

ವಿಧಾನಸಭಾ ಚುನಾವಣೆ ಸಂದರ್ಭ ರೆಬೆಲ್ ಆಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಮನೆಯಲ್ಲಿ ಔತಣಕೂಟಕ್ಕೆ ಸಿದ್ಧತೆ ನಡೆದಿದೆ. ಸಿಎಂ ಬ. ಎಸ್. ಯಡಿಯೂರಪ್ಪ ಅವರು ಸೊಗಡು ಶಿವಣ್ಣ ಮನೆಯಲ್ಲಿ ಔತಣಕ್ಕೆ ಹೋಗಿದ್ದಾರೆ. ಈ ಮೂಲಕ ಸಿಎಂ ಬಿಎಸ್‌ವೈ ರಾಜಕೀಯ ಜಾಣ ನಡೆ ತೋರಿಸಿದ್ದಾರೆ.

ತುಮಕೂರು(ನ.14): ವಿಧಾನಸಭಾ ಚುನಾವಣೆ ಸಂದರ್ಭ ರೆಬೆಲ್ ಆಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಮನೆಯಲ್ಲಿ ಔತಣಕೂಟಕ್ಕೆ ಸಿದ್ಧತೆ ನಡೆದಿದೆ. ಸಿಎಂ ಬ. ಎಸ್. ಯಡಿಯೂರಪ್ಪ ಅವರು ಸೊಗಡು ಶಿವಣ್ಣ ಮನೆಯಲ್ಲಿ ಔತಣಕ್ಕೆ ಹೋಗಿದ್ದಾರೆ. ಈ ಮೂಲಕ ಸಿಎಂ ಬಿಎಸ್‌ವೈ ರಾಜಕೀಯ ಜಾಣ ನಡೆ ತೋರಿಸಿದ್ದಾರೆ.

ಮಾಜಿ ಸಚಿವ ಸೊಗಡು ಶಿವಣ್ಣ ಮನೆಯಲ್ಲಿ ಸಿಎಂ ಬಿ. ಎಸ್. ಯಡಿಯೂರಪ್ಪ ಊಟ ಮಾಡಲಿದ್ದಾರೆ. ವಿಧಾನಸಭೆ ಚುನಾವಣೆ ಸೊಗಡು ಶಿವಣ್ಣ ರೆಬೆಲ್ ಆಗಿದ್ದರು. ಆ ಸಂದರ್ಭ ಸೊಗಡು ಶಿವಣ್ಣ ಅವರನ್ನು ಸಿಎಂ ಯಡಿಯೂರಪ್ಪ ಸಮಧಾನ ಮಾಡಿದ್ದರು.

ತುಮಕೂರಲ್ಲಿ ಬಾಂಗ್ಲನ್ನರ ಆತಂಕ : ಉದ್ಯಮಿಗಳಾಗಿ ಬೆಳೆದ ವಲಸಿಗರು

ಲೋಕಸಭೆ ಚುನಾವಣೆ ಯಡಿಯೂರಪ್ಪ ಅವರು ಸೊಗಡು ಶಿವಣ್ಣ ಜೊತೆಗೆ ಮಾತುಕತೆ ನಡೆಸಿದ್ದರು. ಮಾತುಕತೆ ಮೂಲಕ ಜಿ.ಎಸ್ ಬಸವರಾಜು-ಸೊಡಗು ಶಿವಣ್ಣ ನಡುವಿನ ಭಿನ್ನಮತ ಶಮನ ಮಾಡುವಲ್ಲಿ ಸಿಎಂ ಯಶಸ್ವಿಯಾಗಿದ್ದರು. ಭಿನ್ನಮತ ಶಮನವಾಗಿದ್ದರಿಂದ ತುಮಕೂರಿನಲ್ಲಿ ಬಿಜೆಪಿ ಗೆಲುವಿಗೆ ಸಹಕಾರಿಯಾಗಿತ್ತು. ದೇವೇಗೌಡರಿಗೆ ಸೋಲುಂಟಾಗಿತ್ತು.

ಅಂದಿನಿಂದ ಸೊಗಡು ಶಿವಣ್ಣ ಜೊತೆಗೆ ವಿಶ್ವಾಸ ನಿಭಾಯಿಸುತ್ತಿರುವ ಸಿಎಂ ಅವರು ಇಂದು ಕೂಡ ಸೊಗಡು ಶಿವಣ್ಣ ಮನೆಯಲ್ಲಿ ಊಟ ಮಾಡಲಿದ್ದಾರೆ. ಸಂಸದ ಜಿ.ಎಸ್ ಬಸವರಾಜು, ಜ್ಯೋತಿಗಣೇಶ್ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವ ಸಿಎಂ ತುಮಕೂರಿನಲ್ಲಿ ಬಿಜೆಪಿ ನೆಲೆ ಗಟ್ಟಿ ಮಾಡಲು ಪ್ರಯತ್ನಿಸಿದ್ದಾರೆ.

ಕಾಂಗ್ರೆಸ್ ಮಾಜಿ ಕಾರ್ಪೋರೇಟರ್‌ಗಳ ಮಧ್ಯೆ ಬಿಜೆಪಿ ಹೊಸ ಮುಖಗಳ ಗೆಲುವು

PREV
click me!

Recommended Stories

ಡೆಡ್ಲಿ ರಾಟ್‌ವೀಲರ್ ನಾಯಿಗಳ ದಾಳಿಗೆ ಮಹಿಳೆ ದುರ್ಮರಣ; ಮೂವರು ಮಕ್ಕಳು ಅನಾಥ
ಪರಮೇಶ್ವರ್ ಮುಂದಿನ ಸಿಎಂಗೆ ಆಗ್ರಹಿಸಿ ರಕ್ತದಲ್ಲಿ ನೂರಾರು ಜನರಿಂದ ಸಹಿ ಸಂಗ್ರಹ