ಶ್ರೀಗಳ ಆಶೀರ್ವಾದ ಪಡೆವಾಗ ಕಣ್ಣೀರಾದ ಡಿಕೆಶಿ

By Kannadaprabha NewsFirst Published Oct 29, 2019, 12:30 PM IST
Highlights

ತಿಪಟೂರು ತಾಲೂಕಿನ ನೊಣವಿನಕೆರೆ ಶ್ರೀ ಕಾಡಸಿದ್ದೇಶ್ವರ ಮಠಕ್ಕೆ ಕಾಂಗ್ರೆಸ್‌ನ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಭಾನುವಾರ ಭೇಟಿ ನೀಡಿದ್ದರು. ಮಗಳು ಐಶ್ವರ್ಯಾ ಜೊತೆ ಶ್ರೀ ಮಠಕ್ಕೆ ಭೇಟಿ ನೀಡಿದ ಡಿಕೆಶಿ ಭಾವದ್ವೇಗದಿಂದ ಅಜ್ಜಯನವರ ಗದ್ದುಗೆ ಆಶೀರ್ವಾದ ಪಡೆದುಕೊಂಡ ನಂತರ ಶ್ರೀಗಳವರ ಆಶೀರ್ವಾದ ಪಡೆಯುವಾಗ ಕಣ್ಣಲ್ಲಿ ನೀರು ತುಂಬಿಕೊಂಡವು.

ತುಮಕೂರು(ಅ.29): ತಿಪಟೂರು ತಾಲೂಕಿನ ನೊಣವಿನಕೆರೆ ಶ್ರೀ ಕಾಡಸಿದ್ದೇಶ್ವರ ಮಠಕ್ಕೆ ಕಾಂಗ್ರೆಸ್‌ನ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಭಾನುವಾರ ಭೇಟಿ ನೀಡಿದ್ದರು. ಮಗಳು ಐಶ್ವರ್ಯಾ ಜೊತೆ ಶ್ರೀ ಮಠಕ್ಕೆ ಭೇಟಿ ನೀಡಿದ ಡಿಕೆಶಿ ಭಾವದ್ವೇಗದಿಂದ ಅಜ್ಜಯನವರ ಗದ್ದುಗೆ ಆಶೀರ್ವಾದ ಪಡೆದುಕೊಂಡ ನಂತರ ಶ್ರೀಗಳವರ ಆಶೀರ್ವಾದ ಪಡೆಯುವಾಗ ಕಣ್ಣಲ್ಲಿ ನೀರು ತುಂಬಿಕೊಂಡವು.

ಈ ಸಂದರ್ಭದಲ್ಲಿ ಡಿಕೆಶಿಗೆ ಸಮಾಧಾನ ಮಾಡಿದ ಶ್ರೀಗಳು, ಮುಂದಿನ ದಿನಗಳಲ್ಲಿ ಪ್ರಕರಣ ಕಾನೂನು ಪ್ರಕಾರ ನಡೆಯಲಿದ್ದು, ಯಾವುದೇ ತೊಂದರೆ ಆಗಲ್ಲ. ಪ್ರತಿಯೊಬ್ಬರಿಗೂ ಕೆಲ ಸಣ್ಣಪುಟ್ಟವ್ಯತ್ಯಾಸಗಳಿಂದ ಈ ರೀತಿ ಘಟನೆಗಳು ನಡೆದೆ ನಡೆಯುತ್ತವೆ. ಆದರೆ, ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ನಿಮಗೆ ರಾಜಕೀಯ ಭವಿಷ್ಯ ಉತ್ತಮವಾಗಲಿದ್ದು ಶ್ರೀಮಠದ ಆಶೀರ್ವಾದ ಸದಾ ಇರಲಿದೆ ಎಂದು ಶ್ರೀಗಳು ಅಭಯ ನೀಡಿದರು.

ಡಿಕೆಶಿ ಕೈಯಲ್ಲಿ ಜೆಡಿಎಸ್ ಬಾವುಟ: ಸಿದ್ದು ಆಕ್ಷೇಪ ವಿಡಿಯೋ ವೈರಲ್‌

ಡಿಕೆಶಿ ಮಠಕ್ಕೆ ಭೇಟಿ ಕೊಡಲಿದ್ದಾರೆಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಡಿಕೆಶಿ ಪುತ್ರಿ ಐಶ್ವರ್ಯಾ, ಸಹೋದರ ಸಂಸದ ಡಿ.ಕೆ.ಸುರೇಶ್‌, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಶಾಸಕರಾದ ಬಿ.ನಂಜಾಮರಿ, ಎಂ.ಡಿ.ಲಕ್ಷ್ಮೇನಾರಾಯಣ್‌, ಕೆ.ಷಡಕ್ಷರಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು.

ಡಿಕೆಶಿ ಬಿಡುಗಡೆ ಬಗ್ಗೆ ಭವಿಷ್ಯ ಹೇಳಿದ್ದ ಶ್ರೀಗಳು

ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪದಲ್ಲಿ ಜೈಲಿಗೆ ಹೋಗುವುದು ಖಚಿತವಾದ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್‌ ದುಃಖದಲ್ಲೇ ಕಾಡಸಿದ್ದೇಶ್ವರ ಮಠದ ಶ್ರೀಗಳಿಗೆ ದೂರವಾಣಿ ಮೂಲಕ ತನ್ನ ನೋವನ್ನು ಹೇಳಿಕೊಂಡಿದ್ದರಂತೆ. ಇದಕ್ಕೆ ಶ್ರೀಗಳು ನಿನಗೆ ಕವಿದಿರುವ ಕತ್ತಲು ದೂರಸರಿದು, ಬೆಳಕಿನ ಹಬ್ಬ ದೀಪಾವಳಿ ವೇಳೆಗೆ ಬೆಳಕಾಗಿ ಜೈಲಿನಿಂದ ವಾಪಸ್‌ ಬರುತ್ತೀಯ ಎಂದು ಭವಿಷ್ಯ ಹೇಳಿದ್ದು ಈಗ ಸತ್ಯವಾಗಿದೆ ಎಂದು ಶ್ರೀಗಳವರ ಆಪ್ತವಲಯದ ಮೂಲಗಳು ತಿಳಿಸಿದೆ.

ನನ್ನ ರಾಜಕೀಯ ವಿರೋಧಿಗಳಿಗೆ ಇದೇ ನನ್ನ ದೀಪಾವಳಿ ಸಂದೇಶ ಎಂದ ಸಿದ್ದು: ಏನದು..?

click me!