ಅಕ್ಕಿ-ಅರಿಶಿಣ ಸೇರಿದರೆ ಮಂತ್ರಾಕ್ಷತೆ : ಒಗಟಾಗಿ ಉತ್ತರಿಸಿದ ಡಿಕೆಶಿ

Published : Oct 28, 2019, 07:45 AM IST
ಅಕ್ಕಿ-ಅರಿಶಿಣ ಸೇರಿದರೆ ಮಂತ್ರಾಕ್ಷತೆ : ಒಗಟಾಗಿ ಉತ್ತರಿಸಿದ ಡಿಕೆಶಿ

ಸಾರಾಂಶ

ಅಕ್ರಮ ಹಣ ಸಂಗ್ರಹಣೆ ಪ್ರಕರಣದಲ್ಲಿ ಜೈಲು ಸೇರಿದ್ದ ಡಿಕೆ ಶಿವಕುಮಾರ್ ಇದೀಗ ಟೆಂಪಲ್ ರನ್ ಮಾಡುತ್ತಿದ್ದು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದುಕೊಂಡಿದ್ದಾರೆ. 

ತುಮಕೂರು (ಅ.28): ಅಕ್ರಮ ಹಣ ಸಂಗ್ರಹ ಪ್ರಕರಣದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಿಡುಗಡೆಯಾಗಿದ್ದು, ಇದೀಗ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. 

ಬಳಿಕ ತುಮಕೂರಿನಲ್ಲಿ ಮಾತನಾಡಿದ ಡಿಕೆಶಿ ನನಗೆ ಸಿದ್ಧಗಂಗಾ ಶ್ರೀಗಳು ಹಾಗೂ ಮಠದ ಬಗ್ಗೆ ಅಪಾರವಾದ ವಿಶ್ವಾಸ ನಂಬಿಕೆ ಇದೆ. ಶ್ರೀಗಳು ನನಗೆ ಎಂದೂ ಒಳ್ಳೆಯದಾಗಲಿ ಎಂದೇ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದರು. 

ನನ್ನ ಮೇಲೆ ಐಟಿ ದಾಳಿ ಆದಾಗಲೂ ಕೂಡ ಶ್ರೀಗಳು ಧೈರ್ಯ ತುಂಬಿದ್ದರು. ಶ್ರೀಗಳನ್ನು ನಾನು ಅತ್ಯಂತ ಹತ್ತಿರದಿಂದಲೇ ಬಲ್ಲೆ. ಇನ್ನು ಹಿರಿಯ ಶ್ರೀಗಳ ಗದ್ದುಗೆಗೆ ನಮಸ್ಕಾರ ಮಾಡಿ, ನನ್ನ ಕಷ್ಟ ಪರಿಹರಿಸಲಿ ಎಂದು ಕೇಳಿಕೊಂಡಿದ್ದೇನೆ. ನನಗೆ   ಶ್ರೀಗಳು ಆಶೀರ್ವಾದ ಮಾಡಿದ್ದಾರೆ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಇಲ್ಲಿನ ಶ್ರೀಗಳೊಂದಿಗೆ ಮಾತುಕತೆ ನಡೆಸಿದ್ದು, ಶ್ರೀಗಳು ತಮಗೆ ನೀಡಿದ ಅಭಯವೇನು ಎನ್ನವ ಪ್ರಶ್ನೆಗೆ ಒಗಟಾಗಿ ಉತ್ತರಿಸಿದ್ದು, ಅಕ್ಕಿ ಒಂದು ಕಡೆ, ಅರಿಶಿಣ ಒಂದು ಕಡೆ ಇರುತ್ತದೆ. ಎರಡೂ ಸೇರಿದರೆ ಮಂತ್ರಾಕ್ಷತೆಯಾಗುತ್ತದೆ ಎಂದರು. 

PREV
click me!

Recommended Stories

Government Hospital: ಅಪ್ಪ ದಾನ ಮಾಡಿದ ಜಾಗದಲ್ಲಿ ಕಟ್ಟಿದ್ದ ಆಸ್ಪತ್ರೇಲಿ ಚಿಕಿತ್ಸೆ ಸಿಗದೆ ಮಗ ಸಾವು!
ತುಮಕೂರು: ಮನೆ ದರೋಡೆಗಾಗಿ 5 ವರ್ಷದ ಮಗಳ ಮುಂದೆ ಫ್ಲವರ್ ಅಂಗಡಿ ಮಾಲೀಕನನ್ನು ಕೊಂದ ತಮಿಳುನಾಡು ಹಂತಕರು ಅರೆಸ್ಟ್