ಗದ್ದುಗೆ ಮುಂದೆ ಶಕ್ತಿಗಾಗಿ ಪ್ರಾರ್ಥಿಸಿದ ಡಿಕೆಶಿ

Published : Oct 29, 2019, 12:51 PM IST
ಗದ್ದುಗೆ ಮುಂದೆ ಶಕ್ತಿಗಾಗಿ ಪ್ರಾರ್ಥಿಸಿದ ಡಿಕೆಶಿ

ಸಾರಾಂಶ

ಶಿವೈಕ್ಯ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ ಮುಂದೆ ಕಷ್ಟಗಳನ್ನು ಪರಿಹಾರ ಮಾಡುವ ಶಕ್ತಿ ಕೊಡುವಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಪ್ರಾರ್ಥಿಸಿದ್ದಾರೆ. ಬೇಲ್‌ ಮೇಲೆ ಬಿಡುಗಡೆಗೊಂಡ ಬಳಿಕ ತುಮಕೂರಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್‌ ಅವರು ಮೊದಲು ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದರು. ನಂತರ ಪಟ್ಟನಾಯಕನಹಳ್ಳಿಗೆ ತೆರಳಿದ್ದಾರೆ.

ತುಮಕೂರು(ಅ.29): ಶಿವೈಕ್ಯ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ ಮುಂದೆ ಕಷ್ಟಗಳನ್ನು ಪರಿಹಾರ ಮಾಡುವ ಶಕ್ತಿ ಕೊಡುವಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಪ್ರಾರ್ಥಿಸಿದ್ದಾರೆ.

ಬೇಲ್‌ ಮೇಲೆ ಬಿಡುಗಡೆಗೊಂಡ ಬಳಿಕ ತುಮಕೂರಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್‌ ಅವರು ಮೊದಲು ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದರು. ನಂತರ ಪಟ್ಟನಾಯಕನಹಳ್ಳಿಗೆ ತೆರಳಿದ್ದಾರೆ. ಬೆಂಗಳೂರಿಗೆ ಹೋಗುವ ಮುನ್ನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಗದ್ದುಗೆ ದರ್ಶನ ಪಡೆದರು.

ಶ್ರೀಗಳ ಆಶೀರ್ವಾದ ಪಡೆವಾಗ ಕಣ್ಣೀರಾದ ಡಿಕೆಶಿ

ಬಳಿಕ ಮಾತನಾಡಿದ ಅವರು, ನನಗೆ ಸಿದ್ದಗಂಗಾ ಶ್ರೀಗಳು ಹಾಗೂ ಮಠದ ಬಗ್ಗೆ ಅಪಾರವಾದ ವಿಶ್ವಾಸ ಇದೆ. ನನಗೆ ಯಾವಾಗಲೂ ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡುತ್ತಿದ್ದರು ಎಂದು ಸ್ಮರಿಸಿದ್ದಾರೆ.

ಸಿದ್ಧಲಿಂಗ ಸ್ವಾಮೀಜಿ ಅವರ ಆಶೀರ್ವಾದ ಕೂಡ ಪಡೆದಿದ್ದೇನೆ. ನನ್ನ ಮೇಲೆ ರೇಡ್‌ ಆದಾಗ ಸಿದ್ಧಲಿಂಗ ಶ್ರೀಗಳು ಧೈರ್ಯ ತುಂಬಿದರು. ಶ್ರೀಗಳು ತುಂಬು ಹೃದಯದಿಂದ ಆಶೀರ್ವಾದ ಮಾಡಿದ್ದಾರೆ ಎಂದಿದ್ದಾರೆ.

ಬಿಎಸ್‌ವೈದು ತುಘಲಕ್ ಸರ್ಕಾರ ಎಂದ ಬಾದಾಮಿಯ ಕಾಂಗ್ರೆಸ್ ಕಾರ್ಯಕರ್ತ!

ಶ್ರೀಗಳು ಏನು ಮಾತನಾಡಿದರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಕ್ಕಿ ಒಂದು ಕಡೆ ಇರುತ್ತದೆ. ಅರಿಶಿಣ ಒಂದುಕಡೆ ಇರುತ್ತದೆ. ಎರಡೂ ಸೇರಿದರೆ ಮಂತ್ರಾಕ್ಷತೆ ಆಗುತ್ತದೆ ಎಂದು ಒಗಟಾಗಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

PREV
click me!

Recommended Stories

ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು
ಡೆಡ್ಲಿ ರಾಟ್‌ವೀಲರ್ ನಾಯಿಗಳ ದಾಳಿಗೆ ಮಹಿಳೆ ದುರ್ಮರಣ; ಮೂವರು ಮಕ್ಕಳು ಅನಾಥ