ಟೋಕಿಯೋ ಪ್ಯಾರಾಲಿಂಪಿಕ್ಸ್‌ ಉದ್ಘಾಟನಾ ಸಮಾರಂಭದಲ್ಲಿ ಭಾರತದ 11 ಮಂದಿ ಭಾಗಿ

By Kannadaprabha News  |  First Published Aug 23, 2021, 9:13 AM IST

* ಟೋಕಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಕ್ಷಣಗಣನೆ

* ಆಗಸ್ಟ್‌ 24ರಿಂದ ಟೋಕಿಯೋ ಪ್ಯಾರಾಲಿಂಪಿಕ್ಸ್‌ ಆರಂಭ

* ಟೋಕಿಯೋ ಪ್ಯಾರಾಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ 11 ಮಂದಿ ಭಾಗಿ


ಟೋಕಿಯೋ(ಆ.23): 2020ರ ಟೋಕಿಯೋ ಪ್ಯಾರಾಲಿಂಪಿಕ್ಸ್‌ ಮಂಗಳವಾರ ಆರಂಭವಾಗಲಿದ್ದು, ಭಾರತದ 11 ಮಂದಿ ಮಾತ್ರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

5 ಆಥ್ಲೀಟ್‌ಗಳು, 6 ಅಧಿಕಾರಿಗಳು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಅಥ್ಲೀಟ್‌ಗಳ ಸಂಖ್ಯೆಗೆ ಮಿತಿ ಇಲ್ಲ. ಆದರೆ ಭಾರತದಿಂದ 7 ಕ್ರೀಡಾಳುಗಳು ಮಾತ್ರ ಈಗ ಟೋಕಿಯೋ ತಲುಪಿದ್ದಾರೆ. ಈ ಪೈಕಿ ಇಬ್ಬರು ಟೇಬಲ್‌ ಟೆನಿಸ್‌ ಆಟಗಾರ್ತಿಯರಿದ್ದು, ಬುಧವಾರ ಇವರಿಗೆ ಸ್ಪರ್ಧೆ ಇರುವುದರಿಂದ ಇವರನ್ನು ಬಿಟ್ಟು ಉಳಿದ ಐವರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

Best wishes to our para athletes who begin their quest for Paralympic glory on the 24th. A massive stage, and I’m sure it’ll be a memorable experience. Let’s .

— Virdhawal Khade OLY (@virdhawalkhade)

Latest Videos

undefined

ಟೋಕಿಯೋ ಪ್ಯಾರಾಲಿಂಪಿಕ್ಸ್‌: ಭಾರತದಿಂದ ಈ ಬಾರಿ ದಾಖಲೆ ಸ್ಪರ್ಧೆ!

ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಈ ಬಾರಿ ದಾಖಲೆಯ 54 ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸಲಿದ್ದಾರೆ. 2016ರ ರಿಯೋ ಪ್ಯಾರಾಲಿಂಪಿಕ್ಸ್‌ಗೆ ಭಾರತ 19 ಕ್ರೀಡಾಪಟುಗಳನ್ನು ಕಳುಹಿಸಿತ್ತು. ಇದುವರೆಗೂ ಭಾರತ 11 ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಒಟ್ಟು 12 ಪದಕಗಳನ್ನು ಜಯಿಸಿದ ಸಾಧನೆ ಮಾಡಿದೆ. ಈ ಬಾರಿಯ ಟೋಕಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತ 10ಕ್ಕೂ ಹೆಚ್ಚು ಪದಕಗಳನ್ನು ಗೆಲ್ಲುವ ವಿಶ್ವಾಸವಿರಿಸಿಕೊಂಡಿದೆ.
 

click me!