ಟೋಕಿಯೋ ಪ್ಯಾರಾಲಿಂಪಿಕ್ಸ್‌: ಭಾರತದಿಂದ ಈ ಬಾರಿ ದಾಖಲೆ ಸ್ಪರ್ಧೆ!

By Kannadaprabha News  |  First Published Aug 23, 2021, 8:43 AM IST

* ಅಗಸ್ಟ್‌ 24ರಿಂದ ಟೋಕಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟ ಆರಂಭ

* ಭಾರತದಿಂದ ಈ ಬಾರಿ ದಾಖಲೆಯ 54 ಪ್ಯಾರಾ ಅಥ್ಲೀಟ್‌ಗಳು ಭಾಗಿ

* 016ರ ರಿಯೋ ಪ್ಯಾರಾಲಿಂಪಿಕ್ಸ್‌ಗೆ ಭಾರತ 19 ಕ್ರೀಡಾಪಟುಗಳನ್ನು ಕಳುಹಿಸಿತ್ತು


ನವದೆಹಲಿ(ಆ.23): 12ನೇ ಬಾರಿಗೆ ಭಾರತ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಸಜ್ಜಾಗಿದೆ. ಈ ಬಾರಿ ದಾಖಲೆಯ 54 ಕ್ರೀಡಾಪಟುಗಳನ್ನು ಭಾರತ ಕಣಕ್ಕಿಳಿಸಲಿದೆ. 2016ರ ರಿಯೋ ಪ್ಯಾರಾಲಿಂಪಿಕ್ಸ್‌ಗೆ ಭಾರತ 19 ಕ್ರೀಡಾಪಟುಗಳನ್ನು ಕಳುಹಿಸಿತ್ತು. ಅದೇ ಈ ವರೆಗಿನ ದಾಖಲೆಯಾಗಿತ್ತು.

ಭಾರತ 11 ಪ್ಯಾರಾಲಿಂಪಿಕ್ಸ್‌ಗಳಲ್ಲಿ ಒಟ್ಟು 12 ಪದಕಗಳನ್ನು ಜಯಿಸಿದೆ. 1960ರಲ್ಲಿ ಮೊದಲ ಪ್ಯಾರಾಲಿಂಪಿಕ್ಸ್‌ ನಡೆದರೂ ಭಾರತ ಮೊದಲು ಸ್ಪರ್ಧಿಸಿದ್ದು 1968ರ ಟೆಲ್‌ ಅವಿವ್‌ ಕ್ರೀಡಾಕೂಟದಲ್ಲಿ. ಅ ವರ್ಷ ಭಾರತ ಯಾವುದೇ ಪದಕ ಜಯಿಸಿರಲಿಲ್ಲ.

GOOOD MORNING, TOKYO🎎!
Ohayougozaimasu, Japan 🇯🇵! pic.twitter.com/6Q03dTGffn

— #ParaAthletics #Tokyo2020 (@ParaAthletics)

Thank you for your conscientious support as partner in ensuring that our champion para-sportspersons travel with the dignified mobility that they deserve! We join PCI President in conveying our gratitude! 🙏🏼 https://t.co/qmTYPFVgsA

— Paralympic India 🇮🇳 #Cheer4India 🏅 #Praise4Para (@ParalympicIndia)

Tap to resize

Latest Videos

undefined

ಟೋಕಿಯೋ ಪ್ಯಾರಾಲಿಂಪಿಕ್ಸ್‌ ಆರಂಭಕ್ಕೆ ಕ್ಷಣಗಣನೆ

1972ರ ಹೀಡೆಲ್ಬರ್ಗ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ತನ್ನ ಪದಕ ಖಾತೆ ತೆರೆಯಿತು. ಪುರುಷರ 50 ಮೀ. ಫ್ರೀಸ್ಟೈಲ್‌ ಈಜು ಸ್ಪರ್ಧೆಯಲ್ಲಿ ಮುರಳಿಕಾಂತ್‌ ಪೇಟ್ಕರ್‌ ಚಿನ್ನದ ಪದಕ ಜಯಸಿದ್ದರು. ಆ ಬಳಿಕ 1972, 1976ರಲ್ಲಿ ಭಾರತ ಮತ್ತೆ ಸ್ಪರ್ಧಿಸಿರಲಿಲ್ಲ. 1984ರಲ್ಲಿ 4 ಪದಕ ಜಯಿಸಿದ್ದ ಭಾರತ ಆ ನಂತರ ಸತತ 4 ಪ್ಯಾರಾಲಿಂಪಿಕ್ಸ್‌ಗಳಲ್ಲಿ ಒಂದೂ ಪದಕ ಗೆದ್ದಿರಲಿಲ್ಲ. 2016ರ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 2 ಚಿನ್ನ ಸೇರಿ ಒಟ್ಟು 4 ಪದಕ ಗೆದ್ದಿತ್ತು. ಭಾರತ ಒಟ್ಟಾರೆ 11 ಕ್ರೀಡಾಕೂಟಗಳಲ್ಲಿ ತಲಾ 4 ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆದ್ದಿದೆ.
 

click me!