ಟೋಕಿಯೋ ಒಲಿಂಪಿಕ್ಸ್‌: ನಾಪತ್ತೆಯಾಗಿದ್ದ ಉಗಾಂಡ ವೇಟ್‌ ಲಿಫ್ಟರ್‌ ಕೊನೆಗೂ ಪತ್ತೆ..!

Suvarna News   | Asianet News
Published : Jul 21, 2021, 11:07 AM IST
ಟೋಕಿಯೋ ಒಲಿಂಪಿಕ್ಸ್‌: ನಾಪತ್ತೆಯಾಗಿದ್ದ ಉಗಾಂಡ ವೇಟ್‌ ಲಿಫ್ಟರ್‌ ಕೊನೆಗೂ ಪತ್ತೆ..!

ಸಾರಾಂಶ

* ನಾಪತ್ತೆಯಾಗಿದ್ದ ಉಗಾಂಡದ ವೇಟ್‌ ಲಿಫ್ಟರ್‌ ಕೊನೆಗೂ ಪತ್ತೆಹಚ್ಚಿದ ಜಪಾನ್ ಪೊಲೀಸರು * ತಾವಿಲ್ಲಿಯೇ ಕೆಲಸ ಹುಡುಕಿಕೊಳ್ಳುವುದಾಗಿ ನೋಟ್ ಬರೆದಿಟ್ಟು ವೇಟ್‌ ಲಿಫ್ಟರ್‌ ನಾಪತ್ತೆಯಾಗಿದ್ದರು. * ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು ಉಗಾಂಡ ಕ್ರೀಡಾಪಟುವನ್ನು ಪತ್ತೆಹಚ್ಚಿದ ಪೊಲೀಸರು

ಟೋಕಿಯೋ(ಜು.21): ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಕ್ರೀಡಾಗ್ರಾಮವನ್ನು ಪ್ರವೇಶಿಸಿದ್ದ ಉಗಾಂಡದ ವೇಟ್‌ ಲಿಫ್ಟರ್‌ ಕಳೆದ ನಾಲ್ಕು ದಿನಗಳ ಹಿಂದಷ್ಟೇ ದಿಢೀರನೇ ನಾಪತ್ತೆಯಾಗಿ ಆತಂಕ ಮೂಡಿಸಿದ್ದರು. ಇದೀಗ ನಾಪತ್ತೆಯಾಗಿದ್ದ ವೇಟ್‌ ಲಿಫ್ಟರ್‌ ಜೂಲಿಯಸ್‌ ಸೆಕಿಟೋಲೆಕೊ ಒಲಿಂಪಿಕ್ಸ್‌ ಕ್ರೀಡಾಗ್ರಾಮದಿಂದ 100 ಮೈಲು ದೂರದಲ್ಲಿ ಪತ್ತೆಯಾಗಿದ್ದಾರೆ.

ಹೌದು, 20 ವರ್ಷದ ಜೂಲಿಯಸ್‌ ಸೆಕಿಟೋಲೆಕೊ ಕಳೆದ ಗುರುವಾರ(ಜು.15) ಉಗಾಂಡದಿಂದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಜಪಾನ್‌ಗೆ ಬಂದಿಳಿದ್ದರು. ಒಸಾಕಾದ ಹೋಟೆಲ್‌ನಲ್ಲಿ ಉಗಾಂಡದ ಕ್ರೀಡಾಪಟುಗಳು ಕ್ವಾರಂಟೈನ್‌ಗೆ ಒಳಗಾಗಿದ್ದರು. ಪ್ರತಿನಿತ್ಯ ಕ್ರೀಡಾಪಟುಗಳು ಕೋವಿಡ್ ಟೆಸ್ಟ್‌ಗೆ ಒಳಗಾಗಬೇಕಿದೆ. ಶುಕ್ರವಾರ ಅಧಿಕಾರಿಗಳು ಕೋವಿಡ್‌ ಟೆಸ್ಟ್‌ ಮಾಡಲು ಬಂದಾಗ  ಜೂಲಿಯಸ್‌ ಸೆಕಿಟೋಲೆಕೊ ನಾಪತ್ತೆಯಾಗಿರುವುದು ತಿಳಿದುಬಂದಿತ್ತು. ಮಾತ್ರವಲ್ಲದೇ ತಾವು ಜಪಾನಿನಲ್ಲಿಯೇ ಉಳಿಯಲು ಬಯಸಿದ್ದು, ತಾನಿಲ್ಲಿಯೇ ಕೆಲಸ ಹುಡುಕಿಕೊಳ್ಳುವುದಾಗಿ ನೋಟ್‌ ಬರೆದಿಟ್ಟು ದಿಢೀರನೇ ನಾಪತ್ತೆಯಾಗಿದ್ದರು.

ಕಾಣೆಯಾಗಿದ್ದ ಉಗಾಂಡದ ವೇಟ್‌ ಲಿಫ್ಟರ್ ಟೋಕಿಯೋ ನಗರದಿಂದ 100 ಮೈಲು ದೂರದ ಯೊಕೈಚಿ ನಗರದ ಮೀ ಪ್ರಿಪೆಕ್ಚರ್‌ ನಗರದಲ್ಲಿ ಪತ್ತೆಯಾಗಿದ್ದಾರೆ ಎಂದು ದಿ ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ. ಸಿಸಿಟಿವಿ ಕ್ಯಾಮರ ಕಣ್ಗಾವಲಿನ ಮೂಲಕ ಜೂಲಿಯಸ್‌ ಸೆಕಿಟೋಲೆಕೊ ಅವರನ್ನು ಪತ್ತೆ ಹಚ್ಚಲಾಯಿತು. ಆತ ಒಲಿಂಪಿಕ್ಸ್‌ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾನೆ ಎನ್ನುವುದನ್ನು ಹೊರತು ಪಡಿಸಿದರೆ, ಮತ್ತ್ಯಾವ ತಪ್ಪನ್ನು ಎಸಗಿಲ್ಲ. ಆತ ಯಾವುದೇ ಅಪರಾಧವನ್ನು ಎಸಗಿಲ್ಲ ಎಂದು ಜಪಾನ್ ಪೊಲೀಸರು ತಿಳಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌: ಪದಕ ಬೇಟೆಗೆ ಭಾರತ ಸಜ್ಜು

ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟವು ಜುಲೈ 23ರಿಂದ ಅಗಸ್ಟ್ 08ರವರೆಗೆ ಜಪಾನ್ ರಾಜಧಾನಿ ಟೋಕಿಯೋದಲ್ಲಿ ಜರುಗಲಿದೆ. ಸುಮಾರು 206 ದೇಶಗಳ 11 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಜಗತ್ತಿನ ಅತಿದೊಡ್ಡ ಕ್ರೀಡಾಜಾತ್ರೆಯಲ್ಲಿ ತಮ್ಮ ಪ್ರತಿಭೆ ಅನಾವರಣ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಭಾರತದ 127 ಅಥ್ಲೀಟ್‌ಗಳು 18 ವಿವಿಧ ಸ್ಪರ್ಧೆಗಳನ್ನು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳಿಗೆ ಚೀಯರ್ ಅಪ್‌ ಮಾಡಿ, ಪ್ರತಿದಿನ ಭಾರತೀಯ ಒಲಿಂಪಿಕ್ಸ್‌ ಜೆರ್ಸಿ ಪಡೆಯಿರಿ. ಒಲಿಂಪಿಕ್ಸ್‌ ಕ್ವಿಜ್‌ನಲ್ಲಿ ಪಾಲ್ಗೊಳ್ಳಲು ಈ ಲಿಂಕ್‌ ಕ್ಲಿಕ್‌ ಮಾಡಿ.

PREV
click me!

Recommended Stories

ಭಾರತೀಯ ಸೇನೆ ಪಾಕ್ ದಾಳಿ ಹಿಮ್ಮೆಟ್ಟಿಸುತ್ತಿದ್ದಂತೆ ಶಾಂತಿ ಪಾಠ ಮಾಡಿದ ಸಾನಿಯಾ ಮಿರ್ಜಾ
ಕಣ್ಮುಚ್ಚಿ ಯುವತಿರಿಗೆ ಕಿಸ್ ಕೊಡುವಾಗ ಜಾಗೃತೆ, ಅಥ್ಲೀಟ್‌ಗೆ ಒಂದು ಮುತ್ತಿನ ಕತೆ ಎಚ್ಚರಿಕೆ