ಜಪಾನ್‌ನಲ್ಲಿ ಮಿಂಚಲು ಅಥ್ಲೀಟ್‌ಗಳಿಗೆ ಸಮಯ ಬಂದಿದೆ: ಒಲಿಂಪಿಕ್ಸ್ ಅಧ್ಯಕ್ಷ ಥಾಮಸ್ ಬಾಚ್

Suvarna News   | Asianet News
Published : Jul 21, 2021, 01:55 PM IST
ಜಪಾನ್‌ನಲ್ಲಿ ಮಿಂಚಲು ಅಥ್ಲೀಟ್‌ಗಳಿಗೆ ಸಮಯ ಬಂದಿದೆ: ಒಲಿಂಪಿಕ್ಸ್ ಅಧ್ಯಕ್ಷ ಥಾಮಸ್ ಬಾಚ್

ಸಾರಾಂಶ

* ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟ ಜುಲೈ 23ರಿಂದ ಆರಂಭ * ಒಲಿಂಪಿಕ್ಸ್‌ನಲ್ಲಿ ಮಿಂಚಲು ಕಾಲ ಕೂಡಿ ಬಂದಿದೆ ಎಂದ ಐಒಸಿ ಅಧ್ಯಕ್ಷ * ಒಲಿಂಪಿಕ್ಸ್‌ ಉದ್ವಾಟನಾ ಸಮಾರಂಭದಲ್ಲಿ ಜಪಾನ್‌ ರಾಜಮನೆತನದವರು ಭಾಗಿ

ಟೋಕಿಯೋ(ಜು.21): ಜಪಾನಿನ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಿಂಚಲು ಅಥ್ಲೀಟ್‌ಗಳಿಗೆ ಸಮಯ ಕೂಡಿ ಬಂದಿದೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ ಥಾಮಸ್‌ ಬಾಚ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಥ್ಲೀಟ್‌ಗಳು ಮಿಂಚಿ, ಜಗತ್ತಿಗೆ ಸ್ಪೂರ್ತಿಯಾಗಲು ವೇದಿಕೆ ಸಜ್ಜಾಗಿದೆ. ಜಪಾನ್ ಕೂಡಾ ಮಿಂಚಲು ಕಾಲ ಕೂಡಿಬಂದಿದೆ ಎಂದು ಥಾಮಸ್‌ ಬಾಚ್‌ ಹೇಳಿದ್ದಾರೆ. ಸಾಮಾನ್ಯ ಸಭೆ ಆರಂಭಕ್ಕೂ ಮುನ್ನ ಸಭೆಯಲ್ಲಿ ಪಾಲ್ಗೊಂಡ ಎಲ್ಲರೂ ಜಗತ್ತಿನಾದ್ಯಂತ ಕೋವಿಡ್‌ನಿಂದ ಕೊನೆಯುಸಿರೆಳೆದ ಜನಗಳಿಗಾಗಿ ಕೆಲಕಾಲ ಮೌನಾಚರಣೆ ಮಾಡಲಾಯಿತು.

ಟೋಕಿಯೋ ಒಲಿಂಪಿಕ್ಸ್‌: ಸುರಕ್ಷತೆಗೆ ಭಾರತ ಕೈಗೊಂಡ ಕ್ರಮಗಳೇನು?

ಇದೇ ಸಂದರ್ಭದಲ್ಲಿ, ವೈದ್ಯರು, ನರ್ಸ್‌ಗಳು, ವೈದ್ಯಕೀಯ ಸಿಬ್ಬಂದಿ ಹಾಗೂ ಕೋವಿಡ್ ಎದುರು ನಿರಂತರ ಹೋರಾಟ ನಡೆಸುತ್ತಿರುವ ಕೋವಿಡ್‌ ವಾರಿಯರ್‌ಗಳಿಗೆ ಬಾಚ್‌ ಕೃತಜ್ಞತೆ ಸಲ್ಲಿಸಿದರು. ನಾವಿಂದು ಒಂದಾಗಲು ಶ್ರಮಿಸಿದ ಎಲ್ಲರಿಗೂ ಅನಂತ ಧನ್ಯವಾದಗಳು ಎಂದು ಬಾಚ್ ಹೇಳಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ರಾಜಮನೆತನದವರು ಭಾಗಿ: 

ಜಪಾನ್ ರಾಜಧಾನಿ ಟೋಕಿಯೋದ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭದಲ್ಲಿ ಜಪಾನ್‌ ರಾಜಮನೆತನದವರು ಹಾಜರಿರಲಿದ್ದಾರೆ ಎಂದು ವರದಿಯಾಗಿದೆ.

ಟೋಕಿಯೋ ಒಲಿಂಪಿಕ್ಸ್‌ ಹಾಗೂ ಪ್ಯಾರಾಲಿಂಪಿಕ್ಸ್‌ ಆಯೋಜಕರು ಈಗಾಗಲೇ ರಾಜಮನೆತನದವರಿಗೆ ಟೋಕಿಯೋ ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭದಲ್ಲಿ ಹಾಜರಿರುವಂತೆ ಮನವಿ ಮಾಡಿಕೊಂಡಿದ್ದರು. ಕೋವಿಡ್‌ ಭೀತಿಯಿಂದಾಗಿ ಟೋಕಿಯೋ ಒಲಿಂಪಿಕ್ಸ್‌ಗೆ ಪ್ರೇಕ್ಷಕರ ಪ್ರವೇಶವನ್ನು ಆಯೋಜಕರು ನಿರ್ಬಂಧಿಸಿದ್ದಾರೆ. ಇದಷ್ಟೇ ಅಲ್ಲದೇ ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟವು ಯಾವುದೇ ಪ್ರೇಕ್ಷಕರಿಲ್ಲದೇ ಜರುಗಲಿದೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳಿಗೆ ಚೀಯರ್ ಅಪ್‌ ಮಾಡಿ, ಪ್ರತಿದಿನ ಭಾರತೀಯ ಒಲಿಂಪಿಕ್ಸ್‌ ಜೆರ್ಸಿ ಪಡೆಯಿರಿ. ಒಲಿಂಪಿಕ್ಸ್‌ ಕ್ವಿಜ್‌ನಲ್ಲಿ ಪಾಲ್ಗೊಳ್ಳಲು ಈ ಲಿಂಕ್‌ ಕ್ಲಿಕ್‌ ಮಾಡಿ.

PREV
click me!

Recommended Stories

ಭಾರತೀಯ ಸೇನೆ ಪಾಕ್ ದಾಳಿ ಹಿಮ್ಮೆಟ್ಟಿಸುತ್ತಿದ್ದಂತೆ ಶಾಂತಿ ಪಾಠ ಮಾಡಿದ ಸಾನಿಯಾ ಮಿರ್ಜಾ
ಕಣ್ಮುಚ್ಚಿ ಯುವತಿರಿಗೆ ಕಿಸ್ ಕೊಡುವಾಗ ಜಾಗೃತೆ, ಅಥ್ಲೀಟ್‌ಗೆ ಒಂದು ಮುತ್ತಿನ ಕತೆ ಎಚ್ಚರಿಕೆ