ಟೋಕಿಯೋ ಒಲಿಂಪಿಕ್ಸ್‌: ರಾಜ್ಯದ ಕ್ರೀಡಾಪಟುಗಳನ್ನು ಸನ್ಮಾನಿಸಿದ ರಾಜ್ಯಪಾಲ ಗೆಹ್ಲೋಟ್‌

By Suvarna NewsFirst Published Sep 3, 2021, 4:57 PM IST
Highlights

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ರಾಜ್ಯದ ಅಥ್ಲೀಟ್‌ಗಳಿಗೆ ಸನ್ಮಾನ

* ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರಿಂದ ರಾಜಭವನದಲ್ಲಿ ಸನ್ಮಾನ

* ಮುಖ್ಯಮಂತ್ರಿ ಬೊಮ್ಮಾಯಿ, ಕ್ರೀಡಾಸಚಿವ ನಾರಾಯಣಗೌಡ ಭಾಗಿ

ಬೆಂಗಳೂರು(ಸೆ.03): ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡು ರಾಜ್ಯದ ಗೌರವವನ್ನು ಹೆಚ್ಚಿಸಿದ್ದ ಕ್ರೀಡಾಪಟುಗಳನ್ನು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್‌ ಗೆಹ್ಲೋಟ್‌ ಸನ್ಮಾನ ಮಾಡಿ ಪ್ರೋತ್ಸಾಹಧನ ವಿತರಿಸಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕ್ರೀಡಾ ಸಚಿವ ಕೆ.ಸಿ ನಾರಾಯಣಗೌಡ ಉಪಸ್ಥಿತರಿದ್ದರು. 

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅದಿತಿ ಅಶೋಕ್‌ ಪದಕ ಗೆಲ್ಲುವ ಅವಕಾಶವನ್ನು ಕೊನೆಯ ಕ್ಷಣದಲ್ಲಿ ಕೈಚೆಲ್ಲಿದ್ದರು. ಇನ್ನು ಈಕ್ವೇಸ್ಟ್ರಿಯನ್‌ನಲ್ಲಿ ಮಿರ್ಜಾ ಫೈನಲ್‌ ಪ್ರವೇಶಿಸಿ ಪದಕದ ಭರವಸೆ ಮೂಡಿಸಿದ್ದರು. ಆದರೆ ಫೈನಲ್‌ನಲ್ಲಿ 23ನೇ ಸ್ಥಾನ ಪಡೆದಿದ್ದರು. ಮಹಿಳಾ ಹಾಕಿ ತಂಡದ ಕೋಚ್ ಅಂಕಿತಾ ಸುರೇಶ್‌, ಶ್ರೀಹರಿ ನಟರಾಜ್ ಸೇರಿದಂತೆ ರಾಜ್ಯದ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.

ಇಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ರಾಜಭವನದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಟೋಕಿಯೋ ಒಲಂಪಿಕ್ಸ್-2020ರಲ್ಲಿ ಭಾಗವಹಿಸಿದ ರಾಜ್ಯದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ವಿತರಣಾ ಸಮಾರಂಭದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಸದರಿ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ವಿತರಿಸಿ,…..… pic.twitter.com/71O0rCCFkF

— Thaawarchand Gehlot (@TCGEHLOT)

ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಚಿವರಾದ ಡಾ.ಕೆ ಸಿ ನಾರಾಯಣಗೌಡ, ವಿಧಾನಪರಿಷತ್ ಸದಸ್ಯರು ಹಾಗೂ ಕರ್ನಾಟಕ ಒಲಂಪಿಕ್ಸ್ ಸಂಸ್ಥೆ ಅಧ್ಯಕ್ಷರಾದ ಡಾ.ಕೆ ಗೋವಿಂದರಾಜ್ ಅವರು ಉಪಸ್ಥಿತರಿದ್ದರು. pic.twitter.com/Pw3KFuqcIf

— Thaawarchand Gehlot (@TCGEHLOT)

ಪ್ಯಾರಾಲಿಂಪಿಕ್ಸ್‌ನಲ್ಲಿ ಮತ್ತೊಂದು ಪದಕ ಗೆದ್ದ ಅವನಿ ಲೇಖರಾ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 'ಟೋಕಿಯೋ ಒಲಂಪಿಕ್ಸ್ 2020'ರಲ್ಲಿ ಭಾಗವಹಿಸಿದ ರಾಜ್ಯದ ಕ್ರೀಡಾಪಟುಗಳಿಗೆ ಘನತೆವೆತ್ತ ರಾಜ್ಯಪಾಲ ರವರ ಸಮಕ್ಷಮದಲ್ಲಿ ಮುಖ್ಯಮಂತ್ರಿ ರವರು ಅಭಿನಂದನೆ ಸಲ್ಲಿಸಿ, ಪ್ರೋತ್ಸಾಹಧನ ವಿತರಿಸಿದರು. (1/2) pic.twitter.com/FPwy9OG0Ou

— CM of Karnataka (@CMofKarnataka)

ರಾಜ್ಯಪಾಲರಿಂದ 1 ಲಕ್ಷ ರು. ಪ್ರೋತ್ಸಾಹ ಧನ

ರಾಜ್ಯದಲ್ಲಿ ಕ್ರೀಡಾಪಟುಗಳಿಗೆ ಕೊರತೆ ಇಲ್ಲ. ಆದರೆ, ತರಬೇತಿಯ ಅಗತ್ಯವಿದೆ. ಪ್ರತಿ ಕ್ರೀಡಾಳುಗಳಿಗೆ ಪ್ರತ್ಯೇಕವಾಗಿ ಒಂದು ಲಕ್ಷ ರು. ಗಳ ಪ್ರೋತ್ಸಾಹ ಧನ ನೀಡುವುದಾಗಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋಟ್‌ ಕೆಲದಿನಗಳ ಹಿಂದಷ್ಟೇ ತಿಳಿಸಿದ್ದರು. ಅದರಂತೆಯೇ ಇದೀಗ ರಾಜಭವನದಲ್ಲಿ ಕರ್ನಾಟಕದ ಒಲಿಂಪಿಯನ್‌ಗಳನ್ನು ರಾಜ್ಯಪಾಲರು ಸನ್ಮಾನಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ರಾಜ್ಯದ ಈಜುಪಟು ಶ್ರೀಹರಿ ನಟರಾಜ್‌, ಗಾಲ್ಫರ್‌ ಅದಿತಿ ಅಶೋಕ್‌, ಈಕ್ವೇಸ್ಟ್ರಿಯನ್ ಫೌಹಾದ್‌ ಮಿರ್ಜಾ ಹಾಗೂ ಸೈಲಿಂಗ್‌ನಲ್ಲಿ ಕೆ.ಸಿ. ಗಣಪತಿ ಗಮನಾರ್ಹ ಪ್ರದರ್ಶನ ನೀಡಿದ್ದರಾದರೂ ಪದಕ ಗೆಲ್ಲಲು ವಿಫಲರಾಗಿದ್ದರು.

click me!