ಪ್ಯಾರಾಲಿಂಪಿಕ್ಸ್‌ನಲ್ಲಿ ಮತ್ತೊಂದು ಪದಕ ಗೆದ್ದ ಅವನಿ ಲೇಖರಾ

By Suvarna News  |  First Published Sep 3, 2021, 12:10 PM IST

* ಮತ್ತೊಂದು ಪದಕ ಬೇಟೆಯಾಡಿದ ಅವನಿ ಲೇಖರಾ

* ಪ್ಯಾರಾಲಿಂಪಿಕ್ಸ್‌ನಲ್ಲಿ 2 ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಅಥ್ಲೀಟ್‌

* ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆ 12ಕ್ಕೆ ಏರಿಕೆ


ಟೋಕಿಯೋ(ಸೆ.03): ಟೋಕಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮಹಿಳಾ ಯುವ ಶೂಟರ್‌ ಅವನಿ ಲೇಖರಾ ಮತ್ತೊಂದು ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

ಹೌದು, 50 ಮೀಟರ್ ರೈಫಲ್ 3 ಪೊಸಿಷನ್‌ ಶೂಟಿಂಗ್ ಸ್ಪರ್ಧೆಯಲ್ಲಿ ಅವನಿ ಲೇಖರಾ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಫೈನಲ್‌ ಸ್ಪರ್ಧೆಯಲ್ಲಿ 445.9 ಅಂಕಗಳನ್ನು ಗಳಿಸುವ ಮೂಲಕ ಕಂಚಿನ ಪದಕ ಜಯಿಸಿದ್ದಾರೆ. ಈ ಮೊದಲು ಅವನಿ ಲೇಖರಾ 10 ಮೀಟರ್ ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದರು. ಇದರೊಂದಿಗೆ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ 2 ಪದಕ ಗೆದ್ದ ಭಾರತದ ಮೊದಲ ಮಹಿಳಾ ಪ್ಯಾರಾಥ್ಲೀಟ್ ಎನ್ನುವ ಗೌರವಕ್ಕೆ ಅವನಿ ಪಾತ್ರರಾಗಿದ್ದಾರೆ. 

Tap to resize

Latest Videos

undefined

Paralympics ಅಭಿನವ್‌ ಬಿಂದ್ರಾ ಆತ್ಮಕತೆ ಓದಿ ಶೂಟರ್‌ ಆದ ಅವನಿ ಲೇಖರಾ!

., you beauty! 😍😍😍's ace shooter claims a second medal in R8 - Women's 50m Rifle 3P SH1, winning with a score of 445.9! 🔥

1⃣2⃣ medals for 🇮🇳! pic.twitter.com/sJ51rQpky1

— #Tokyo2020 for India (@Tokyo2020hi)

A proud moment as has won her spectacular 2nd medal
She won Bronze medal in Women’s 50m Rifle 3P SH1 and created a history for India🇮🇳 https://t.co/fyrx6JNSPD

— Kiren Rijiju (@KirenRijiju)

ಕೇವಲ 19 ವರ್ಷದ ರಾಜಸ್ಥಾನ ಮೂಲದ ಅವನಿ, 2012ರಲ್ಲಿ ಕಾರು ಅಪಘಾತಕ್ಕೆ ಒಳಗಾಗಿ  ಬೆನ್ನುಮೂಳೆ ಜರ್ಝರಿತವಾಗಿತ್ತು. ಬಳಿಕ ಪಾರ್ಶ್ವವಾಯುವಿಗೆ ಒಳಗಾಗಿದ್ದ ಅವನಿ, 2008 ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಅವರ ಆತ್ಮಕತೆಯನ್ನು ಓದಿ ಕ್ರೀಡೆಯತ್ತ ಆಸಕ್ತರಾಗಿದ್ದರು. 

The moment💜 Outstanding from Avani Lekhara. Only 19 yrs and the youngest competitor in the final, she can only get better. Two medals: a and a already. pic.twitter.com/Oi0YZoFisY

— Doordarshan Sports (@ddsportschannel)

ಅವನಿ ಲೇಖರಾ ಅವರು ಚಿನ್ನದ ಪದಕ ಗೆಲ್ಲುತ್ತಿದ್ದಂತೆಯೇ ಈ ಪ್ಯಾರಾಥ್ಲೀಟ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

More glory at the Tokyo . Elated by the stupendous performance of . Congratulations to her on bringing home the Bronze medal. Wishing her the very best for her future endeavours.

— Narendra Modi (@narendramodi)

And does India proud a second time at the Games, winning a with a score of 445.9! 🔥

1⃣2⃣ medals now for India. pic.twitter.com/XnzRj0N7Bf

— VVS Laxman (@VVSLaxman281)
click me!