ಇನ್ಮುಂದೆ ಈ ಫೋನ್‌ಗಳಿಗೆ ಸಾಫ್ಟ್ ವೇರ್ ಅಪ್ಡೇಟ್ ಸಿಗಲ್ಲ!

By Web DeskFirst Published Nov 24, 2018, 10:20 AM IST
Highlights

ಹೊಸ ಹೊಸ ತಂತ್ರಜ್ಞಾನ ಅಭಿವೃದ್ಧಿಯಾದಂತೆ ಹಳೆ ಮಾದರಿ ಫೋನ್ ಬಿಡಿಭಾಗಗಳಷ್ಟೇ ಅಲ್ಲ, ಅವುಗಳ ಸಾಫ್ಟ್‌ವೇರ್ ಅಪ್ಡೇಟ್‌ಗಳನ್ನು ಕೂಡಾ ಕ್ರಮೇಣವಾಗಿ ನಿಲ್ಲಿಸಲಾಗುತ್ತದೆ.  ಈಗ ಜನಪ್ರಿಯ ಮೊಬೈಲ್ ತಯಾರಿಕಾ ಕಂಪನಿ ಶ್ಯೋಮಿ ಕೂಡಾ ಕೆಲ ಹಳೆಯ ಫೋನ್‌ಗಳ  ಸಾಫ್ಟ್‌ವೇರ್ ಅಪ್ಡೇಟ್‌ಗಳನ್ನು ನಿಲ್ಲಿಸಲು ಮುಂದಾಗಿದೆ.

ಮೊಬೈಲ್ ಫೋನ್ ಕಂಪನಿಗಳಿಗೆ ಭಾರತ ಪ್ರಮುಖ ಮಾರುಕಟ್ಟೆ.  ಯುಎಸ್‌ಎ ಹೊಂದಿರುವ ಜನಸಂಖ್ಯೆಯಷ್ಟು ಮೊಬೈಲ್ ಬಳಕೆದಾರರನ್ನು  ಭಾರತ ಹೊಂದಿದೆ. ಮಾರುಕಟ್ಟೆ ಅಂದಾಜಿನ ಪ್ರಕಾರ ಭಾರತದ ಮೊಬೈಲ್ ಬಳಕೆದಾರರ ಸಂಖ್ಯೆ 2022ರಲ್ಲಿ 442 ಮಿಲಿಯನ್ ದಾಟಲಿದೆ.  2018ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಬರೋಬ್ಬರಿ 30 ಮಿಲಿಯನ್ ಸ್ಮಾರ್ಟ್ ಫೋನ್ ಗಳು ಆನ್‌ಲೈನ್ ಮಾರಾಟವಾಗಿದೆ.  ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಜನಪ್ರಿಯ ಚೈನೀಸ್ ಕಂಪನಿ ಶ್ಯೋಮಿಯ ಪಾಲು ಕೂಡಾ ಬಹಳ ದೊಡ್ಡದು.   

ಹೊಸ ಹೊಸ ತಂತ್ರಜ್ಞಾನ ಅಭಿವೃದ್ಧಿಯಾದಂತೆ ಹಳೆಯ ತಂತ್ರಜ್ಞಾನಾಧರಿತ ಉಪಕರಣಗಳ ನಿರ್ವಹಣೆ ಅಥವಾ ರಿಪೇರಿ ಅಷ್ಟು ಸುಲಭವಲ್ಲ.  ಮೊಬೈಲ್ ಹಾಗೂ ಇನ್ನಿತರ ಗ್ಯಾಜೆಟ್‌ಗಳದ್ದೇ ಇದೇ ಕಥೆ. ಮೊಬೈಲ್ ಕಂಪನಿಗಳು ಕೂಡಾ ಹಳೆಯ ಫೋನ್ಗಳ ಬಿಡಿ ಭಾಗಗಳನ್ನು ಅಥವಾ ಅವಕ್ಕೆ ಬೇಕಾದ ಸಾಫ್ಟ್‌ವೇರ್‌ಗಳನ್ನು ಅಭಿವೃದ್ಧಿಪಡಿಸೋದನ್ನು ಕ್ರಮೇಣವಾಗಿ ನಿಲ್ಲಿಸುತ್ತವೆ.

ಇದನ್ನೂ ಓದಿ: ಜಿಯೋಗೆ ಮುಡಿಗೆ ಇನ್ನೊಂದು ಗರಿ; ಬಳಕೆದಾರರಿಗೆ ಹೊಸ ಸೇವೆ

ಇದೀಗ, ಭಾರತದಲ್ಲಿ ಜನಪ್ರಿಯವಾಗಿರೋ ಶ್ಯೋಮಿ ಕೂಡಾ ಕೆಲವು ಹಳೆಯ ಫೋನ್‌ಗಳ ಸಾಫ್ಟ್‌ವೇರ್ ಅಪ್ಡೇಟ್ಸ್‌ಗಳನ್ನು ನಿಲ್ಲಿಸುವ ನಿರ್ಧಾರಕ್ಕೆ ಬಂದಿದೆ. ಅಂದಹಾಗೇ,  ಶ್ಯೋಮಿ ಸಾಮಾನ್ಯವಾಗಿ 5 ವರ್ಷಗಳ ಕಾಲ  ಸಾಫ್ಟ್‌ವೇರ್ ಅಪ್ಡೇಟ್ ಮಾಡುತ್ತದೆ.

ಬಿಜಿಆರ್.ಇನ್ ವರದಿ ಪ್ರಕಾರ,  Redmi Note 3, Mi 4, Mi 4C, Mi 4S, ಹಾಗೂ Mi 5 ಫೋನ್‌ಗಳ ಸಾಫ್ಟ್‌ವೇರ್ ಅಪ್ಡೇಟ್ಸ್‌ ಇನ್ಮುಂದೆ ನಿಲ್ಲಿಸಲಾಗುತ್ತದೆ.

Mi 5 ಮತ್ತು Redmi Note 3 ಫೋನ್‌ಗಳಿಗೆ MIUI 10.2 ROM ಮುಂದುವರಿಯುವುದು, ಆದರೆ  Mi 4, Mi 4C, ಮತ್ತು Mi 4S ಫೋನ್‌ನಲ್ಲಿ ಬಳಕೆಯಾಗುವ MIUI 10.1 ROM ಇನ್ಮುಂದೆ ನಿಲ್ಲಿಸಲಾಗುವುದು, ಹಾಗೂ ಹೊಸ ROMನ್ನು ಮುಂಬರುವ ಜನವರಿಯಲ್ಲಿ ಬಿಡುಗಡೆಮಾಡಲಾಗುವುದು, ಎಂದು ಹೇಳಲಾಗಿದೆ.

ಶ್ಯೋಮಿಯ ಹೊಸ ಫೋನ್‌ಗಳ ಬಗ್ಗೆ ಹೇಳುವುದಾದರೆ,  Redmi Note 6 Pro ಫೋನ್‌ನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

click me!