ಸ್ಟುಡಿಯೋ ಫೋಟೋಗ್ರಫಿ ಮಾಡುವ ಲಾವಾ Z81 ಮೊಬೈಲ್ ಮಾರುಕಟ್ಟೆಗೆ

By Web DeskFirst Published Nov 10, 2018, 9:51 PM IST
Highlights

ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿ ಸ್ಟುಡಿಯೋ ಮೋಡ್ | ಗೊರಿಲ್ಲ ಗ್ಲಾಸ್ ಪ್ರೊಟೆಕ್ಷನ್ | 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮರಾ ಹಾಗೂ ಅಷ್ಟೇ ಸಾಮರ್ಥ್ಯದ ಸೆಲ್ಫೀ ಕ್ಯಾಮರಾ

ದೇಶೀಯ ಸ್ಮಾರ್ಟ್ ಫೋನ್ ತಯಾರಕ ಸಂಸ್ಥೆ ಲಾವಾ ನವೆಂಬರ್‌ನಲ್ಲಿ ಮಾರುಕಟ್ಟೆಗೆ ಬಿಟ್ಟಿರುವ ಹೊಸ ಫೋನ್ Z81. ಇದರಲ್ಲಿ ಕ್ಯಾಮರಾ ಆ್ಯಪ್ ಇದೆ. ಇದರ ಮೂಲಕ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿ ಸ್ಟುಡಿಯೋ ಮೋಡ್‌ನಲ್ಲಿ ಫೋಟೋಗ್ರಫಿ ಮಾಡಬಹುದು.

ಈ ಫೋಟೋಗಳು ಹೆಚ್ಚು ಆಕರ್ಷಕವಾಗಿರುತ್ತವೆ ಎಂಬ ಭರವಸೆಯನ್ನು ಕಂಪೆನಿ ನೀಡಿದೆ.  13 ಮೆಗಾಪಿಕ್ಸೆಲ್ ರಿಯರ್ ಕ್ಯಾಮರಾ ಹಾಗೂ ಅಷ್ಟೇ ಸಾಮರ್ಥ್ಯದ ಸೆಲ್ಫೀ ಕ್ಯಾಮರಾವೂ ಇದೆ. ಸೆಲ್ಫೀ ಹಾಗೂ ರಿಯರ್ ಕ್ಯಾಮರಗಳಲ್ಲಿ ಫ್ಲ್ಯಾಶ್ ವ್ಯವಸ್ಥೆ ಇದೆ. 

ಈ ಫೋನ್‌ನ ಸ್ಕ್ರೀನ್ 5.70 ಇಂಚುಗಳ ಟಚ್ಸ್ಕ್ರೀನ್ ಡಿಸ್ಪ್ಲೇ ಹೊಂದಿದೆ. ಗೊರಿಲ್ಲ ಗ್ಲಾಸ್ ಪ್ರೊಟೆಕ್ಷನ್ ಈ ಮೊಬೈಲ್ಗಿದೆ. ಈ ಮೊಬೈಲ್ ಎರಡು ಆಯ್ಕೆಗಳಲ್ಲಿ ಲಭ್ಯವಿದೆ. 

3 ಜಿಬಿ ರ್ಯಾಮ್ 2ಜಿಬಿ ರ್ಯಾಮ್ 32 ಜಿಬಿ ಸ್ಟೋರೇಜ್ ಹೊಂದಿರುವ ಫೋನ್ 9499 ರು.ಗೆ ಲಭ್ಯ.

ಇದಕ್ಕಿಂತ ಕಡಿಮೆ ಸಾಮರ್ಥ್ಯದ 2 ಜಿಬಿ ರ್ಯಾಮ್ ಹೊಂದಿರುವ ಲಾವಾ Z81 ಫೋನ್ ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಕಂಪೆನಿ ತಿಳಿಸಿದೆ.

click me!