ಪಾಪ್‌ ಅಪ್‌, ಸ್ಲೈಡಿಂಗ್‌ ಕ್ಯಾಮೆರಾ ಇರುವ 2019ರ ಸ್ಪೆಷಲ್‌ ಮೊಬೈಲ್‌ಗಳು

By Web Desk  |  First Published May 16, 2019, 6:32 PM IST

ಸ್ಮಾರ್ಟ್‌ಫೋನ್‌ಗಳಲ್ಲಿ ಮೊದಲ ಆಕರ್ಷಣೆ ಕ್ಯಾಮೆರಾಗಳು. 2019ರ ಕ್ಯಾಮೆರಾ ಸ್ಪೆಷಲ್‌ ಏನೆಂದರೆ ಪಾಪ್‌ಅಪ್‌ ಕ್ಯಾಮೆರಾ ಹಾಗೂ ಸ್ಲೈಡಿಂಗ್‌ ಕ್ಯಾಮೆರಾ. ಫ್ರಂಟ್‌ ಕ್ಯಾಮೆರಾ ಬಟನ್‌ ಕ್ಲಿಕ್‌ ಮಾಡಿದ ಕೂಡಲೇ ಪಾಪ್‌ಅಪ್‌ ಕ್ಯಾಮೆರಾ ತೆರೆದುಕೊಳ್ಳುತ್ತದೆ. ಅದೇ ಥರ ಸ್ಲೈಡಿಂಗ್‌ ಕ್ಯಾಮೆರಾಗಳನ್ನು ಸ್ಲೈಡ್‌ ಮಾಡಬಹುದು. ಪಾಪ್‌ಅಪ್‌ ಹಾಗೂ ಸ್ಲೈಡಿಂಗ್‌ ಕ್ಯಾಮೆರಾವಿರುವ ಫೋನ್‌ಗಳ ಡೀಟೈಲ್ಸ್‌ ಇಲ್ಲಿದೆ.


1. Samsung Galaxy A80

ಫುಲ್‌ಸ್ಕ್ರೀನ್‌ ಡಿಸ್ಪ್ಲೇ  ಹೊಂದಿರುವ ಈ ವರ್ಷದ ಸೊಗಸಾದ ಫೋನ್‌ ಇದು. ಇದರಲ್ಲಿ ಸ್ಲೈಡಿಂಗ್‌ ಕ್ಯಾಮೆರಾ ಇದೆ. ಹಳೇ ಸ್ಯಾಮ್‌ಸಂಗ್‌ ಮೊಬೈಲ್‌ ಬಳಸುವವರಿಗೆ ಈ ಸ್ಲೈಡಿಂಗ್‌ ಅನುಭವ ಇರುತ್ತದೆ. ಈ ಸ್ಲೈಡರ್‌ ಕ್ಯಾಮೆರಾವನ್ನು ಶಾಪ್‌ರ್‍ ಆಗಿ ಅಲರ್ಟ್‌ ಮಾಡುತ್ತೆ. ಕ್ಷಣ ಮಾತ್ರದಲ್ಲಿ ನಿಮ್ಮ ಸುಂದರ ಸೆಲ್ಫಿ ಕ್ಲಿಕ್‌ ಆಗಿ ಆಯ್ತು. ಈ ಮೊಬೈಲ್‌ನಲ್ಲಿ ಒಟ್ಟು ಮೂರು ಕ್ಯಾಮೆರಾಗಳು. 48 ಮೆಗಾ ಫಿಕ್ಸೆಲ್‌ನ ಪ್ರೈಮರಿ ಕ್ಯಾಮೆರಾ, 8 ಎಂಪಿ ವೈಡ್‌ ಆ್ಯಂಗಲ್‌ ಕ್ಯಾಮೆರಾ ಹಾಗೂ ಇನ್ನೊಂದು 3ಡಿಯ ಪಿಕ್ಚರ್‌ ತೆಗೆಯೋ ಕ್ಯಾಮೆರಾ. ಉಳಿದಂತೆ 6.7 ಇಂಚುಗಳ ಅಮೋಲ್ಡ್‌ ಸ್ಕ್ರೀನ್‌ ಡಿಸ್‌ಪ್ಲೇ, ಆ್ಯಂಡ್ರಾಯ್ಡ್‌ 9.0 ಸಾಫ್ಟ್‌ವೇರ್‌, ಫಿಂಗರ್‌ ಪ್ರಿಂಟ್‌ ಸೆನ್ಸಾರ್‌ ಹಾಗೂ 3700 ಎಂಎಎಚ್‌ ಸಾಮರ್ಥ್ಯದ ಬ್ಯಾಟರಿ ಇತರೇ ಫೀಚರ್‌ಗಳು.

Tap to resize

Latest Videos

2. Vivo V15 Pro ಹಾಗೂ Vivo V15

ಮಧ್ಯಮವರ್ಗದ ಸೆಲ್ಫಿ ಕ್ರೇಜ್‌ ಇರುವ ಹುಡುಗ್ರಿಗಾಗಿಯೇ ಡಿಸೈನ್‌ ಮಾಡಿರೋ ಫೋನ್‌ ಇದು. ಇದರಲ್ಲಿರೋದು 32 ಮೆಗಾ ಫಿಕ್ಸೆಲ್‌ನ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ. ಸ್ಯಾಮ್‌ಸಂಗ್‌ ಸೆನ್ಸಾರ್‌ ಹೊಂದಿರೋ ಈ ಕ್ಯಾಮೆರಾದಲ್ಲಿ ಸೆಲ್ಫಿ ಅದ್ಭುತವಾಗಿ ಬರುತ್ತೆ ಅಂತ ಅನುಭವಿಗಳು ಹೇಳ್ತಾರೆ. ಉಳಿದಂತೆ 48 ಎಂಪಿ ರೆಸೊಲ್ಯೂಷನ್‌ ಹೊಂದಿರುವ ಪ್ರೈಮರಿ ಕ್ಯಾಮೆರಾದಲ್ಲೂ ಉತ್ತಮ ಫೋಟೋ ಹೊಡೆಯಬಹುದು. ಯಾವ ಡಿಎಸ್‌ಎಲ್‌ಆರ್‌ ಕ್ಯಾಮೆರಾಗಳಿಗೂ ಕಡಿಮೆ ಇಲ್ಲದಂತೆ ಡೆಪ್ತ್ ಫೋಟೋಗಳು ಬರುತ್ತವೆ. ಸ್ನಾಪ್‌ಡ್ರ್ಯಾಗನ್‌ 675 ಚಿಪ್‌ಸೆಟ್‌ ಹೊಂದಿರುವ ಕಾರಣ ಕ್ಷಿಪ್ರ ಕಾರ್ಯಾಚರಣೆ ಶತಸಿದ್ಧ. ಇದೂ ಅಮೋಲ್ಡ್‌ ಡಿಸ್ಪ್ಲೇ ಹೊಂದಿದೆ.

3. Oneplus 7 Pro

ಸ್ಕ್ರೀನ್‌ಗೂ ಕ್ಯಾಮೆರಾಗೂ ಸಂಬಂಧವೇ ಇಲ್ಲದಂತೆ ಮಾಡುವ ಪಾಪ್‌ಅಪ್‌ ಫ್ರಂಟ್‌ ಕ್ಯಾಮೆರಾ ಈ ಫೋನ್‌ನ ಹೆಚ್ಚುಗಾರಿಕೆ. ಈ ಒಂದು ಫೀಚರ್‌ನಿಂದ ಈಗಷ್ಟೇ ಬಿಡುಗಡೆಯಾಗಿರುವ Oneplus 7 Pro ಮೊಬೈಲ್‌ ಉಳಿದ ಫೋನ್‌ಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ. ಈ ಫೋನ್‌ನ ಮುಖ್ಯ ಪ್ರಯಾರಿಟಿಯೇ ಯುವ ಗ್ರಾಹಕನಿಗೆ ಅತ್ಯುತ್ತಮ ಸೆಲ್ಫಿಯ ಕೊಡುಗೆ ನೀಡೋದು. ಉಳಿದಂತೆ ಇದರಲ್ಲಿ ಒಟ್ಟು ಮೂರು ಕ್ಯಾಮೆರಾಗಳಿವೆ . 48 ಮೆಗಾ ಫಿಕ್ಸೆಲ್‌ನ ರಿಯರ್‌ ಸೋನಿ ಕೆಮರಾ ಇದರಲ್ಲಿ ಮುಖ್ಯವಾದದ್ದು. ಸ್ನಾಪ್‌ಡ್ರ್ಯಾಗನ್‌ 855 ಸಾಮರ್ಥ್ಯದ್ದು. ಈ ಫೋನ್‌ನ ಡಿಸ್ಪ್ಲೇಗೆ ಎಪ್ಲಸ್‌ ಸಿರ್ಟಿಫಿಕೇಟ್‌ ಬೇರೆ ಸಂದಿದೆ. ಹೀಗಾಗಿ ಕ್ಯಾಮೆರಾ ಜೊತೆಗೆ ಇತರ ಫೀಚರ್‌ಗಳಲ್ಲೂ Oneplus ಸೈ ಎನಿಸಿದೆ.

ಇದನ್ನೂ ಓದಿ | Oneplusಗೆ ಸಡ್ಡು ಹೊಡೆಯಲು Redmi ರೆಡಿ!

4. Realme X

ಇದರಲ್ಲಿ 8 ಎಂಪಿ ಸಾಮರ್ಥ್ಯದ ಫ್ರಂಟ್‌ ಪಾಪ್‌ಅಪ್‌ ಕ್ಯಾಮೆರಾವಿದೆ. ರಿಯರ್‌ ಕ್ಯಾಮೆರಾ ಅತ್ಯುತ್ತಮ ಸಾಮರ್ಥ್ಯದ್ದು. ಸುಮಾರು 48 ಮೆಗಾ ಫಿಕ್ಸೆಲ್‌ ರೆಸೊಲ್ಯೂಶನ್‌ನ ಫೋಟೋಗಳನ್ನು ಇದರಲ್ಲಿ ಕ್ಲಿಕ್ಕಿಸಬಹುದು. ಜೊತೆಗೆ 5 ಎಂಪಿಗೆ ಡೆಪ್ತ್ ಸೆನ್ಸಾರ್‌ ಇರುವ ಕಾರಣ ಫೋಟೋಗಳ ಗುಣಮಟ್ಟದ ಬಗ್ಗೆ ಎರಡು ಮಾತಿಲ್ಲ. ಉಳಿದಂತೆ 6.5 ಇಂಚಿನ ಅಮೋಲ್ಡ್‌ ಡಿಸ್ಪ್ಲೇ ಸ್ಕ್ರೀನ್‌ ಇದೆ. 4000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದಕ್ಕಿಂತ ಹೆಚ್ಚಾಗಿ ಇದರಲ್ಲಿರುವ ಸ್ನಾಪ್‌ಡ್ರ್ಯಾಗನ್‌ 730 ತಂತ್ರಜ್ಞಾನ ಅಳವಡಿಸಲಾಗಿದೆ.

5. Oppo Reno 10X ಝೂಮ್‌ ಎಡಿಟೆಡ್‌

Oppo Reno ಭಿನ್ನ ಮಾದರಿಯ ಮೊಬೈಲ್‌ಗಳಲ್ಲಿ ಮುಖ್ಯವಾದದ್ದು Reno 10 X ಝೂಮ್‌ ಎಡಿಟೆಡ್‌. ಇದರಲ್ಲಿ 10 Xವರೆಗಿನ ವೈಡ್‌ ಆ್ಯಂಗಲ್‌ ಫೋಟೋಗಳನ್ನು ಅದ್ಭುತವಾಗಿ ಕ್ಲಿಕ್ಕಿಸುವ ಅವಕಾಶ ಕಲ್ಪಿಸಲಾಗಿದೆ. ಟ್ರಿಪ್ಪಲ್‌ ಲೆನ್ಸ್‌ ಇರುವ ಕಾರಣ ಫೋಟೋದ ಗುಣಮಟ್ಟುವೂ ಸಖತ್ತಾಗಿರುತ್ತದೆ. ಪಾಪ್‌ಅಪ್‌ ಸ್ಲೈಡರ್‌ ಹೊಂದಿರೋ ಕ್ಯಾಮೆರಾ ಈ ಫೋನ್‌ನ ಮತ್ತೊಂದು ಆಕರ್ಷಣೆ. ಇದರ ಪಾಫ್ಸ್‌ಅಪ್‌ ಫ್ರಂಟ್‌ ಕ್ಯಾಮೆರಾದಲ್ಲಿ ‘ಶಾರ್ಕ್ ಫಿನ್‌’ ಎಂಬ ಆಯ್ಕೆ ಇದೆ. ಶಾರ್ಕ್ನ ರೆಕ್ಕೆಗಳಂಥ ಈ ರಚನೆಯಿಂದ ಚೆಂದದ ಸೆಲ್ಫಿ ಕ್ಲಿಕ್ಕಿಸಬಹುದು. ಈ ಫೋನ್‌ನ ಹಾರ್ಡ್‌ವೇರ್‌ನ ತಂತ್ರಜ್ಞಾನವೂ ಬಹಳ ಆಧುನಿಕವಾದದ್ದು. ಉಳಿದಂತೆ ಸ್ನಾಪ್‌ಡ್ರ್ಯಾಗನ್‌ 855 ಇದೆ.

ಇದನ್ನೂ ಓದಿ | ಗಮನಿಸಿ.. BSNLನ ಪ್ರಮುಖ ಎರಡು ಪ್ಲ್ಯಾನ್ ಸ್ಥಗಿತ

6. Xiaomi Mi Mix 3

ಹವಾಯಿ ಹಾನರ್‌ನ ಹೊಸ ಮೊಬೈಲ್‌ Xiaomi Mi Mix 3ಯಲ್ಲೂ ಕೆಮರಾದ ಹೊಸ ಸಾಧ್ಯತೆಗೆ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿರುವ ಸ್ಲೈಡರ್‌ಗಳಲ್ಲಿ ಸೆಲ್ಫಿ ಹಾಗೂ ರಿಯರ್‌ ಕ್ಯಾಮೆರಾಗಳ ಆಯ್ಕೆ ಇದೆ. ಅತ್ಯುತ್ತಮ ಸೆಲ್ಫೀ ಕ್ಲಿಕ್ಕಿಸಲು ಅವಕಾಶವಿದೆ. ಅದೇ ರೀತಿ ರಿಯರ್‌ ಕ್ಯಾಮೆರಾದಲ್ಲಿ ಇತರ ಫೋಟೋಗಳನ್ನೂ ಪರಿಣಾಮಕಾರಿಯಾಗಿ ಕ್ಲಿಕ್ಕಿಸಬಹುದು. 24 ಎಂಪಿ ಹಾಗೂ 2 ಎಂಪಿ ಸಾಮರ್ಥ್ಯದ ಎರಡು ಕ್ಯಾಮೆರಾಗಳು ಸೆಲ್ಫಿ ಕ್ಲಿಕ್ಕಿಸಲು ಸದಾ ಚುರುಕಾಗಿ ರೆಡಿಯಾಗುತ್ತವೆ. ಆರಂಭದಿಂದಲೇ ಸೆಲ್ಫಿಗೆ ಮಹತ್ವ ನೀಡುತ್ತ ಬಂದಿರುವ Xiaomi ಈ ಫೋನ್‌ನಲ್ಲೂ ಅದನ್ನು ಮುಂದುವರಿಸಿದೆ. ಉಳಿದಂತೆ 6.39 ಎಫ್‌ಎಚ್‌ಡಿ ಅಮೋಲ್ಡ್‌ ಡಿಸ್ಪ್ಲೇ ಇದೆ. 5Gಗೆ ಸಪೋರ್ಟ್‌ ಮಾಡೋ ಮೊಬೈಲ್‌ ಇದು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ. 

click me!