ನೀವೂ ವಾಟ್ಸಪ್ ಬಳಸುದ್ದೀರಾ..? ಆಗಿದ್ದರೆ ಹುಷಾರ್..! ಈ ರೋಗ ಬರಬಹುದು

Published : Dec 15, 2016, 02:12 PM ISTUpdated : Apr 11, 2018, 12:43 PM IST
ನೀವೂ ವಾಟ್ಸಪ್ ಬಳಸುದ್ದೀರಾ..? ಆಗಿದ್ದರೆ ಹುಷಾರ್..! ಈ ರೋಗ ಬರಬಹುದು

ಸಾರಾಂಶ

ತೀವ್ರ ಮಣಿಕಟ್ಟಿನ ನೋವಿನಿಂದ ಬಳಲುತ್ತಿದ್ದ 34 ವರ್ಷ ವಯಸ್ಸಿನ 27 ವಾರದ ಗರ್ಭಿಣಿಯೊಬ್ಬಳು ವೈದ್ಯರ ಬಳಿ ಚಿಕಿತ್ಸೆಗೆ ಬಂದಿದ್ದಳು. ಈ ಹಿಂದೆ ಆಕೆಗೆ ಕೈಗಳಿಗೆ ಯಾವುದೇ ಹೊಡೆತ ಬಿದ್ದಿರಲಿಲ್ಲ ಅಥವಾ ಯಾವುದೇ ಕಠಿಣ ವ್ಯಾಯಾಮ ಮಾಡಿರಲಿಲ್ಲ.

ವಾಟ್ಸಪ್ ಆಧುನಿಕ ತಂತ್ರಜ್ಞಾನ ಕ್ರಾಂತಿಗಳಲ್ಲಿ ಬಹುದೊಡ್ಡ ಹೆಸರು. ಇತ್ತೀಚಿನ ದಿನಗಳಲ್ಲಿ ಸಂದೇಶ ರವಾನೆಗೆ ಬಳಸಲಾಗುತ್ತಿರುವ ಜನಪ್ರಿಯ ಮಾಧ್ಯಮ ವಾಟ್ಸಪ್. ಆದರೆ, ಈ ವಾಟ್ಸಪ್ ಬಳಕೆ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಜೋಕೆ.. !

ಹೌದು, ಈ ಮಾತನ್ನ ಹೇಳ್ತಿರೋದು ಸ್ಪಾನಿಷ್ ವೈದ್ಯರು. ವಾಟ್ಸಪ್`ನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ `ವಾಟ್ಸಾಪ್ಪಿಟೀಸ್' ಎಂಬ ಹೊಸ ಸಮಸ್ಯೆ ದೇಹವನ್ನ ಕಾಡುತ್ತಂತೆ.

`ವಾಟ್ಸಾಪ್ಪಿಟೀಸ್' ಸಮಸ್ಯೆಯಿಂದ ಬಳಲುತ್ತಿರುವ ಮೊದಲ ಕೇಸ್ ಸ್ಪೇನ್`ನಲ್ಲಿ ಪತ್ತೆಯಾಗಿದೆಯಂತೆ. ಸಹಿಸಲಾರದಂತಹ ಮಣಿಕಟ್ಟಿನ ನೋವಿನಿಂದ ಬಳಲುತ್ತಿದ್ದ ರೋಗಿಯೊಬ್ಬಳನ್ನ ಪರೀಕ್ಷಿಸಿದ ವೈದ್ಯರು ಆಕೆ ವಾಟ್ಸಾಪ್ಪಿಟೀಸ್ ಸಮಸ್ಯೆಯಿಂದ ಬಳಲುತ್ತಿರುವುದನ್ನ ಖಚಿತಪಡಿಸಿದ್ದಾರೆ.

 ಸುಮಾರು 6 ಗಂಟೆಗಳ ಕಾಲ ವಾಟ್ಸಪ್`ನಲ್ಲಿ ಮೆಸೇಜ್ ಕಳುಹಿಸಿದ್ದ ಮಹಿಳೆಗೆ ಈ ಸಮಸ್ಯೆ ಕಾಡಲಾರಂಭಿಸಿದೆಯಂತೆ.

ಏನಿದು ಪ್ರಕರಣ..?: ತೀವ್ರ ಮಣಿಕಟ್ಟಿನ ನೋವಿನಿಂದ ಬಳಲುತ್ತಿದ್ದ 34 ವರ್ಷ ವಯಸ್ಸಿನ 27 ವಾರದ ಗರ್ಭಿಣಿಯೊಬ್ಬಳು ವೈದ್ಯರ ಬಳಿ ಚಿಕಿತ್ಸೆಗೆ ಬಂದಿದ್ದಳು. ಈ ಹಿಂದೆ ಆಕೆಗೆ ಕೈಗಳಿಗೆ ಯಾವುದೇ ಹೊಡೆತ ಬಿದ್ದಿರಲಿಲ್ಲ ಅಥವಾ ಯಾವುದೇ ಕಠಿಣ ವ್ಯಾಯಾಮ ಮಾಡಿರಲಿಲ್ಲ.

ಆದರೂ ಆಕೆಯ ಕೈಗಳ ಮಣಿಕಟ್ಟಿನಲ್ಲಿ ಭಯಾನಕ ನೋವು ಕಾಡುತ್ತಿತ್ತು. ರೋಗಿಯನ್ನ ಕೂಲಂಕುಶವಾಗಿ ಪರೀಕ್ಷಿಸಿ, ವಿಚಾರಿಸಿದಾಗ ತಿಳಿದುಬಂದ ವಿಷಯವೇನೆಂದರೆ. ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಸತತ 6 ಗಂಟೆಗಳ ಕಾಲ ಆಕೆ ಮೊಬೈಲ್`ನಲ್ಲಿ ವಾಟ್ಸಪ್ ಸಂದೇಶ ಕಳುಹಿಸಿದ್ದಳು.

ಈ ಸಂದರ್ಭ ಪರೀಕ್ಷಿಸಿದಾಗ ಆಕೆಯ ಮಣಿಕಟ್ಟಿನಲ್ಲಿ ಇಂಜುರಿ ಕಂಡುಬಂದಿದ್ದು, ಆಕೆ ವಾಟ್ಸಾಪ್ಪಿಟೀಸ್ ಸಮಸ್ಯೆಗೆ ತುತ್ತಾಗಿರುವುದು ಗೊತ್ತಾಗಿದೆ. 6 ಗಂಟೆಗಳ ಕಾಲ ಮೊಬೈಲ್ ಹಿಡಿದು ಮೆಸೇಜ್ ಕಳುಹಿಸಲು ನಡೆಸಿದ ಚಲನೆಯಿಂದಾಗಿ ಈ ಸಮಸ್ಯೆ ಉಂಟಾಗಿದೆ. ಬಳಿಕ ಆಕೆಗೆ ಪೇನ್ ಕಿಲ್ಲರ್ ಔಷಧಿ ನೀಡಿರುವ ವೈದ್ಯರು, ಮೊಬೈಲ್ ಬಳಸದಂತೆ ಸೂಚನೆ ನೀಡಿದ್ದಾರೆ.

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!
ನಕಲಿ ಕ್ಯೂಆರ್​ ಕೋಡ್​ಗೆ ಬಲಿಯಾಗದಿರಿ ಎಚ್ಚರ! ಯಾಮಾರಿದ್ರೆ ಅಕೌಂಟ್​ ಖಾಲಿ: ನಕಲಿ ಗುರುತಿಸುವುದು ಹೇಗೆ?