
ಮುಂಬೈ(ಡಿ.15): ರಿಲಾಯನ್ಸ್ ಜಿಯೋ ತನ್ನ ಉಚಿತ ಕರೆ ಹಾಗೂ ಅನ್'ಲಿಮಿಟೆಡ್ ಆಫರ್'ನಿಂದ ಟೆಲಿಕಾಂ ಕ್ಷೇತ್ರದಲ್ಲೇ ಸಂಚಲನ ಮೂಡಿಸಿದೆ. ಇದನ್ನು ಕಂಡ ಏರ್'ಟೆಲ್, ಐಡಿಯಾ, ವೊಡಾಫೋನ್ ಮೊದಲಾದ ಕಂಪೆನಿಗಳು ತಾವು ಕೂಡಾ ಏನೂ ಕಮ್ಮಿ ಇಲ್ಲ ಎನ್ನುವಂತೆ ತನ್ನ ಬಳಕೆದಾರರಿಗೆ ಉತ್ತಮವಾದ ಆಫರ್'ಗಳನ್ನು ನೀಡಲಾರಂಭಿಸಿವೆ.
ಹೀಗೆ ಆಫರ್ ನೀಡುವ ಸಾಲಿನಲ್ಲಿ ಇದೀಗ ಏರ್'ಸೆಲ್ ಕೂಡಾ ಸೇರಿಕೊಂಡಿದೆ. ಉಚಿತ ಕರೆ ಹಾಗೂ ಡೇಟಾ ಪ್ಯಾಕ್'ನ 'RC 14' ಮತ್ತು 'RC 249' ಎಂಬ ಎರಡು ಆಫರ್'ಗಳನ್ನು ಇದು ತನ್ನ ಗ್ರಾಹಕರಿಗೆ ನೀಡಲಿದೆ. ಈ ಆಫರ್'ನಿಂದ ದೇಶದ ಯಾವುದೇ ಮೂಲೆಯಲ್ಲಿದ್ದರೂ, ಯಾವುದೇ ನೆಟ್ವರ್ಕ್'ಗೂ ಕರೆ ಮಾಡಬಹುದಾಗಿದೆ. RC 14 ಆಫರ್ ಮೂಲಕ ಯಾವುದೇ ಒಬ್ಬ ಗ್ರಾಹಕ ದೇಶದ ಯಾವುದೇ ಮೊಬೈಲ್ ನೆಟ್ವರ್ಕ್'ಗೆ ಅನ್'ಲಿಮಿಟೆಡ್ ಲೋಕಲ್ ಹಾಗೂ ಎಸ್'ಟಿ'ಡಿ ಕರೆ ಮಾಡಬಹುದಾಗಿದೆ. ಈ ಆಫರ್ ಒಂದು ದಿನಕ್ಕೆ ಅನ್ವಯಿಸುತ್ತದೆ.
ಇದರ ಮತ್ತೊಂದು ಆಫರ್ 'RC 249' ಮೂಲಕ ಬಳಕೆದಾರರಿಗೆ 28 ದಿನಗಳ ಕಾಲ 'ಅನ್'ಲಿಮಿಟೆಡ್ ಕಾಲ್ ಹಾಗೂ ಅನ್'ಲಿಮಿಟೆಡ್ ಡೇಟಾ ಬಳಸುವ ಅವಕಾಶವಿದೆ. ರಿಚಾರ್ಜ್ ಮಾಡಿ ಈ ಆಫರ್ ಹಾಕಿಸಿಕೊಳ್ಳುವುದರಿಂದ ದೇಶದ ಯಾವುದೇ ಮೊಬೈಲ್ ನೆಟ್ವರ್ಕ್'ಗೂ ಉಚಿತ ಹಾಗೂ ಮಿತಿ ಇಲ್ಲದೆ ಲೋಕಲ್ ಹಾಗೂ STD ಕರೆ ಮಾಡಬಹುದಾಗಿದೆ.
ಇದರೊಂದಿಗೆ 4G ಮೊಬೈಲ್ ಹೊಂದಿರುವ ತನ್ನ ಗ್ರಾಹಕರಿಗೆ 1.5 ಜಿಬಿ ಹೆಚ್ಚುವರಿ ಡೇಟಾವನ್ನೂ ಉಚಿತವಾಗಿ ನೀಡಲಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.