ಎಚ್ಚರ...! ಡೆಬಿಟ್, ಕ್ರೆಡಿಟ್ ಕಾರ್ಡ್'ನಿಂದ ಶಾಪಿಂಗ್ ಮಾಡುವ ಮುನ್ನ ಈ ಸ್ಟೋರಿ ಓದಿ

Published : Dec 15, 2016, 11:04 AM ISTUpdated : Apr 11, 2018, 12:58 PM IST
ಎಚ್ಚರ...! ಡೆಬಿಟ್, ಕ್ರೆಡಿಟ್ ಕಾರ್ಡ್'ನಿಂದ ಶಾಪಿಂಗ್ ಮಾಡುವ ಮುನ್ನ ಈ ಸ್ಟೋರಿ ಓದಿ

ಸಾರಾಂಶ

ನೋಟ್ ಬ್ಯಾನ್ ಬಳಿಕ ಡಿಜಿಟಲ್ ಪೇಮೆಂಟ್'ಗೆ ಪ್ರೋತ್ಸಾಹ ದೊರಕಿದೆ. ಜನರು ಆನ್'ಲೈನ್ ಪೇಮೆಂಟ್ ಹಾಗೂ ಕಾರ್ಡ್ ಪೇಮೆಂಟ್'ನ್ನು ಬಳಸುತ್ತಿದ್ದಾರೆ. ಕ್ಯಾಷ್'ನ ಸಮಸ್ಯೆ ತೆಲೆದೋರಿರುವಾಗ ಕಾರ್ಡ್ ಮೂಲಕ ವ್ಯವಹರಿಸುವುದರಿಂದ ಜನರು ನಗದು ಹಣ ಸಂಗ್ರಹಿಸುವುದು ತಪ್ಪುತ್ತದೆ. ಆದರೆ ಈ ಕಾರ್ಡ್ ಪೇಮೆಂಟ್ ಹಾಗೂ ಡಿಜಿಟಲ್ ಪೇಮೆಂಟ್ ಒಂದೆಡೆ ನಿಮಗೆ ಈ ಸಮಸ್ಯೆಯಿಂದ ಮುಕ್ತಿ ನೀಡಿದರೆ ಮತ್ತೊಂದೆಡೆ ಇದು ನಿಮ್ಮನ್ನು ಸಂಕಷ್ಟಕ್ಕೀಡು ಮಾಡುತ್ತದೆ. ಇಲ್ಲಿ ನೀಡಿರು ಮಾಹಿತಿಯನ್ನು ಆಧರಿಸಿ ನೀವು ನಿಮ್ಮ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್'ನ್ನು ವಂಜಕರಿಂದ ಕಾಪಾಡಬಹುದು. ಕಾರ್ಡ್ ಪೇಮೆಂಟ್ ಹೆಚ್ಚಾದಂತೆ ಆನ್'ಲೈನ್ ವಂಚನೆಯೂ ಹೆಚ್ಚಾಗುತ್ತಿದೆ. ಆನ್'ಲೈನ್ ವ್ಯವಹಾರ ಹೆಚ್ಚಾಗಿ ವಂಚನೆಗೊಳಗಾದ ವಿಚಾರವೂ ನಮಗೆ ತಿಳಿಯುವುದಿಲ್ಲ.

ನವದೆಹಲಿ(ಡಿ.15): ನೋಟ್ ಬ್ಯಾನ್ ಬಳಿಕ ಡಿಜಿಟಲ್ ಪೇಮೆಂಟ್'ಗೆ ಪ್ರೋತ್ಸಾಹ ದೊರಕಿದೆ. ಜನರು ಆನ್'ಲೈನ್ ಪೇಮೆಂಟ್ ಹಾಗೂ ಕಾರ್ಡ್ ಪೇಮೆಂಟ್'ನ್ನು ಬಳಸುತ್ತಿದ್ದಾರೆ. ಕ್ಯಾಷ್'ನ ಸಮಸ್ಯೆ ತೆಲೆದೋರಿರುವಾಗ ಕಾರ್ಡ್ ಮೂಲಕ ವ್ಯವಹರಿಸುವುದರಿಂದ ಜನರು ನಗದು ಹಣ ಸಂಗ್ರಹಿಸುವುದು ತಪ್ಪುತ್ತದೆ. ಆದರೆ ಈ ಕಾರ್ಡ್ ಪೇಮೆಂಟ್ ಹಾಗೂ ಡಿಜಿಟಲ್ ಪೇಮೆಂಟ್ ಒಂದೆಡೆ ನಿಮಗೆ ಈ ಸಮಸ್ಯೆಯಿಂದ ಮುಕ್ತಿ ನೀಡಿದರೆ ಮತ್ತೊಂದೆಡೆ ಇದು ನಿಮ್ಮನ್ನು ಸಂಕಷ್ಟಕ್ಕೀಡು ಮಾಡುತ್ತದೆ. ಇಲ್ಲಿ ನೀಡಿರು ಮಾಹಿತಿಯನ್ನು ಆಧರಿಸಿ ನೀವು ನಿಮ್ಮ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್'ನ್ನು ವಂಜಕರಿಂದ ಕಾಪಾಡಬಹುದು. ಕಾರ್ಡ್ ಪೇಮೆಂಟ್ ಹೆಚ್ಚಾದಂತೆ ಆನ್'ಲೈನ್ ವಂಚನೆಯೂ ಹೆಚ್ಚಾಗುತ್ತಿದೆ. ಆನ್'ಲೈನ್ ವ್ಯವಹಾರ ಹೆಚ್ಚಾಗಿ ವಂಚನೆಗೊಳಗಾದ ವಿಚಾರವೂ ನಮಗೆ ತಿಳಿಯುವುದಿಲ್ಲ.

-ನಿಮ್ಮ ಕಾರ್ಡ್'ನ CVV ನಂಬರ್ ಯಾರೊಂದಿಗೂ ಹಂಚಿಕೊಳ್ಳಬೇಡಿ

-CVV ನಂಬರ್ ಆನ್'ಲೈನ್ ವ್ಯಬಹಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದದು ನಿಮ್ಮ ಬಳಿ ಇಲ್ಲವಾದಲ್ಲಿ ಆನ್'ಲೈನ್ ವ್ಯವಹಾರ ನಡೆಸುವುದು ಅಸಾಧ್ಯ.

-ಆನ್'ಲೈನ್ ಶಾಪಿಂಗ್ ಮಾಡುವ ವೇಳೆ ನಿಮ್ಮ ಕಾರ್ಡ್ ವಿವರಗಳನ್ನು ಸೇವ್ ಮಾಡಬೇಕೋ ಎಂಬ ಾಯ್ಕೆ ಇರುತ್ತದೆ. ಆದರೆ ತಪ್ಪಿಯೂ ಇದನ್ನು ಆಯ್ಕೆ ಮಾಡಬೇಡಿ.

- ನೀವು ನಿಮ್ಮ ಕಾರ್ಡ್ ವಿವರಗಳನ್ನು ಸೇವ್ ಮಾಡಿದರೆ ವಂಚಕರು ಸುಲಭವಾಗಿ ನಿಮ್ಮ ವಿವರಗಳನ್ನು ಪಡೆಯುತ್ತಾರೆ. ಇದರಿಂದ ನೀವು ಸುಲಭವಾಗಿ ಮೋಸ ಹೋಗುತ್ತೀರಿ.

- ಆನ್'ಲೈನ್ ವ್ಯವಹಾರ ನಡೆಸುವ ಸಂದರ್ಭದಲ್ಲಿ OTP ಆಪ್ಶನ್ ಬಳಸಿ. ಹೀಗೆ ಮಾಡುವುದು ತುಂಬಾ ಸುರಕ್ಷಿತ.

- ಯಾವತ್ತೂ ನಿಮ್ಮ ಕಾರ್ಡ್'ನ ವಿವರಗಳನ್ನೂ ಯಾರೊಂದಿಗೂ ಹಂಚಿಕೊಳ್ಳಬೇಡಿ.

-ನೀವು ಕಚೇರಿಯಲ್ಲಿ ಆನ್'ಲೈನ್ ಶಾಪಿಂಗ್ ಮಾಡುವುದಾದರೆ ನಿಮ್ಮ ಕಾರ್ಡ್'ನ CVV ಸಂಖ್ಯೆ ಹಾಗೂ ಪಿನ್ ಸಂಖ್ಯೆಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

-ಆನ್'ಲೈನ್ ವ್ಯವಹಾರ ನಡೆಸುವವರು ನಿಮ್ಮ ಅಕೌಂಟ್'ಗಳನ್ನು ವಾಸ್'ವರ್ಡ್'ನಿಂದ ಸುರಕ್ಷಿಸಿ.

-ಪಾಸ್'ವರ್ಡ್ ಯಾವತ್ತೂ ವಿಭಿನ್ನವಾಗಿಡಿ. ಪಾಸ್'ವರ್ಡ್'ನಲ್ಲಿ ಯಾವತ್ತೂ ವಿಭಿನ್ನವಾದ ಅಕ್ಷರ ಹಾಗೂ ಸಂಕೇತಗಳನ್ನು ಬಳಸಿ.

ಇನ್ನು ಪ್ರೀಪೈಡ್ ವಾಲೆಟ್'ಗೆ ನಿಮ್ಮ ಬ್ಯಾಂಕ್ ಖಾತೆಯಿಂದ ಮೊದಲೇ ಹಣವನ್ನು ವರ್ಗಾಯಿಸಬೇಕಾಗುತ್ತದೆ. ಇದಾದ ನಂತರವಷ್ಟೇ ನೀವು ಆ ಹಣವನ್ನು ಬಳಸಲಾಗುತ್ತದೆ. ಆದರೆ ಪೋಸ್ಟ್ ಪೈಡ್ ವಾಲೆಟ್'ನ್ನು ನಿಮ್ಮ ಬ್ಯಾಂಕ್ ಅಕೌಂಟ್'ನೊಂದಿಗೆ ಮೊದಲೇ ಜೋಡಿಸಿಕೊಳ್ಳಲಾಗುತ್ತದೆ. ಬಳಿಕ ನಿಮ್ಮ ಅಕೌಂಟ್'ನಲ್ಲಿರುವ ಹಣವನ್ನು ನೀವು ನಿಮ್ಮ ಇಚ್ಛೆಯಂತೆ ಖರ್ಚು ಮಾಡಬಹುದಾಗಿದೆ.

ಹೀಗಾಗಿ ಪ್ರೀಪೈಡ್ ಅಕೌಂಟ್'ನಲ್ಲಿ ಯಾವತ್ತೂ ಕಡಿಮೆ ಮೊತ್ತವನ್ನು ಸಂಗ್ರಹಿಸಿ. ಇದರಿಂದ ನಿಮಗೆ ಅಗತ್ಯ ಬೀಳುವ ಸಂದರ್ಭದಲ್ಲಿ ಮಾತ್ರ ಬಬಳಸಬಹುದು. ಯಾರೇ ಆಗಲಿ ಹಣ ವರ್ಗಾವಣೆ ಮಾಡಲು ಡಿಜಿಟಲ್ ಆ್ಯಪ್ ಬಳಸಬೇಕಾಗುತ್ತದೆ, ಹಾಗೂ ಈ ಆ್ಯಪ್'ಗೆ ಲಾಗಿನ್ ಆಗಲು ಬಳಕೆದಾರರ ಐಡಿ ಹಾಗೂ ಪಾಸ್'ವರ್ಡ್ ಹಾಕಬೇಕು. ಆದರೆ ಆ್ಯಪ್ ಬಳಸಿದ ಬಳಿಕ ತಪ್ಪದೇ ಲಾಗೌಟ್ ಮಾಟಿ. ಒಂದು ವೇಳೆ ಕಚೇರಿ ಇಲ್ಲವೇ ಬೇರೆಲ್ಲಾದರೂ ನೀವು ಮೊಬೈಲ್ ಮರೆತು, ಅದು ಇತರರ ಕೈ ಸೇರಿದರೂ ನಿಮ್ಮ ಅಕೌಂಟ್ ವಿವರಗಳು ಅವರಿಗೆ ಸಿಗುವುದಿಲ್ಲ.

ಈ ಮೇಲಿನ ಕ್ರಮಗಳನ್ನು ಅನುಸರಿಸಿ ವಂಚಕರಿಂದ ನಿಮ್ಮ ಹಣವನ್ನು ಸುರಕ್ಷತವಾಗಿಡಿ.  

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!
ನಕಲಿ ಕ್ಯೂಆರ್​ ಕೋಡ್​ಗೆ ಬಲಿಯಾಗದಿರಿ ಎಚ್ಚರ! ಯಾಮಾರಿದ್ರೆ ಅಕೌಂಟ್​ ಖಾಲಿ: ನಕಲಿ ಗುರುತಿಸುವುದು ಹೇಗೆ?