ಕೊರೋನಾ ವೈರಸ್ ಜೊತೆ ಸುಳ್ಸುದ್ದಿಗಳ ಭರಾಟೆ| ವಾಟ್ಸಾಪ್‌ನಲ್ಲಿ ಕೊರೋನಾ ಸುಳ್ಳು ಸುದ್ದಿ ಪರೀಕ್ಷೆಗೆ ಹೊಸ ಫೀಚರ್!
ವಾಷಿಂಗ್ಟನ್(ಮಾ.26): ಕೊರೋನಾ ವೈರಸ್ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದನ್ನು ತಡೆಯುವ ನಿಟ್ಟಿನಿಂದ ವಾಟ್ಸ್ ಆ್ಯಪ್ ಹೊಸದೊಂದು ಫೀಚರ್ ಅನ್ನು ಪರಿಚಯಿಸಲು ನಿರ್ಧರಿಸಿದೆ.
ಕೊರೋನಾ ವೈರಸ್ ಸಂಬಂಧಿತ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸಚ್ರ್ಮೆಸೇಜ್ ಆನ್ ವೆಬ್ ಎಂಬ ಫೀಚರ್ ಇದಾಗಿದ್ದು, ಫಾರ್ವರ್ಡ್ ಸಂದೇಶಗಳು ಬಂದ ಸಂದರ್ಭದಲ್ಲಿ ಆ ಸಂದೇಶಗಳು ಸತ್ಯವೇ ಅಥವಾ ಸುಳ್ಳೇ ಎಂದು ತಿಳಿದುಕೊಳ್ಳಲು ಈ ಫೀಚರ್ ನೆರವಾಗಲಿದೆ.
ಇದಕ್ಕೆ ಸಂದೇಶಗಳ ಮುಂದೆ ಕಾಪಿ ಮಾಡಿ ಗೂಗಲ್ನಲ್ಲಿ ಸಚ್‌ರ್ ಮಾಡುವ ಆಯ್ಕೆಯನ್ನು ನೀಡಲಾಗುವುದು. ಸದ್ಯಕ್ಕೆ ಇದು ಪರೀಕ್ಷೆಯ ಹಂತದಲ್ಲಿದೆ ಎನ್ನಲಾಗಿದೆ.