ಕೊರೋನಾ ಹಾವಳಿ, ಭಾರತವಿಡೀ ಲಾಕ್‌ಡೌನ್| ಜನರಲ್ಲಿ ಭಯ ಹುಟ್ಟಿಸಿದ ಲಾಕ್‌ಡೌನ್, ಮೂರು ವಾರಕ್ಕಾಗುವಷ್ಟು ದಿನಸಿ, ವಸ್ತು ಖರೀದಿಸಲು ಮುಂದಾದ ಜನ| ಆನ್fಲೈನ್ ಶಾಪಿಂಗ್ ಕೂಡಾ ಬಹುತೇಕ ಸ್ಥಗಿತ
ಕೊರೋನ ಹಾವಳಿ ತಡೆಯುವ ನಿಟ್ಟಿನಲ್ಲಿ ಮುಂದಿನ 21 ದಿನಗಳವರೆಗೆ ಭಾರತದೆಲ್ಲೆಡೆ ಲಾಕ್‌ಡೌನ್ ಜಾರಿಯಾಗಿದೆ. ಜನರೆಲ್ಲರೂ ಮನೆಯೊಳಗೇ ಇರಬೇಕು. ಯಾವುದೇ ಕಾರಣಕ್ಕೂ ಹೊರ ಬರುವಂತಿಲ್ಲ ಎಂದು ಮೋದಿ ಮನವಿ ಮಾಡಿಕೊಂಡಿದ್ದಾರೆ. ಹೀಗಿರುವಾಗ ಜನರೆಲ್ಲರೂ ತಮ್ಮ ಮನೆಯೊಳಗೇ ಉಳಿದುಕೊಂಡಿದ್ದಾರೆ. ಹೀಗಿರುವಾಗ ಈಗಾಗಲೇ ಆನ್‌ಲೈನ್ ಶಾಪಿಂಗ್ ಮಾಡಿ ಆರ್ಡರ್ ನೀಡಿರುವರು ಅಥವಾ ಆನ್‌ಲೈನ್ ಶಾಪಿಂಗ್ ಮಾಡುವ ಪ್ಲಾನ್ ಇದ್ದವರಿಗೊಂದು ಬ್ಯಾಡ್ ನ್ಯೂಸ್.
ಹೌದು ಈಗಾಗಲೇ ಫ್ಲಿಪ್ ಕಾರ್ಟ್ ಹಾಗೂ ಗ್ರೋಫರ್ಸ್ ಬಾಗಿಲು ಮುಚ್ಚಿವೆ. ಇತ್ತ ಅಮೆಜಾನ್ ಬಹಳ ಅಗತ್ಯವೆನಿಸುವ ದಿನಬಳಕೆಯ ವಸ್ತುಗಳನ್ನು ಆರ್ಡರ್ ಮಾಡುವ ಆಯ್ಕೆ ನೀಡಿದೆ. ಹೀಗಿದ್ದರೂ ಭಾರತದಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದ್ದು, ಬಂದ ಆರ್ಡರ್‌ಗಳನ್ನು ಹೇಗೆ ತಲುಪಿಸುವುದು ಎಂಬ ಗೊಂದಲದಲ್ಲಿರುವ ಕಂಪನಿಗಳು ತನ್ನ ಈ ಆಯ್ಕೆಯನ್ನು ಶೀಘ್ರದಲ್ಲೇ ಹಿಂಪಡೆಯುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.
ಕೊರೋನಾ ವೈರಸ್ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸದ್ಯ ಭಾರತದಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದು ಮುಂದಿನ ಮೂರು ವಾರ ಇದು ಜಾರಿಯಲ್ಲಿರಲಿದೆ. ಹೀಗಿರುವಾಗ ಅಗತ್ಯವಾದ ವಸ್ತುಗಳು ಎಂದಿನಂತಿರಲಿದೆ ಎಂದು ಸರ್ಕಾರ ತಿಳಿಸಿದೆಯಾದರೂ, ಈ ಅಗತ್ಯ ವಸ್ತುಗಳು ಯಾವುದೆಂಬ ಕುರಿತಾಗಿ ಇನ್ನೂ ಗೊಂದಲಗಳಿವೆ. ಅಲ್ಲದೇ ಈ ವಸ್ತುಗಳನ್ನು ಮನ ಬಾಗಿಲಿಗೆ ತಲುಪಿಸುವ ಡೆಎಲಿವರಿ ಬಾಯ್ಸ್ ಹೊರಗೆ ಓಡಾಡುವ ಅವಕಾಶ ಇದೆಯೇ ಎಂಬುವುದೂ ಇನ್ನೂ ಖಚಿತವಾಗಿಲ್ಲ. ಅಲ್ಲದೇ ಲಾಕ್‌ಡೌನ್ ಘೋಷಣೆ ಬೆನ್ನಲ್ಲೇ ಭಯಭೀತರಾದ ಜನ ಒಂದೇ ಸಮನೆ ಮನೆಗೆ ಬೇಕಾದ ವಸ್ತುಗಳನ್ನು ಆರ್ಡರ್ ಮಾಡಿದ್ದಾರೆ. ಹೀಗಿರುವಾಗ ಕಂಪನಿಗಳಿಗೆ ಇಷ್ಟೊಂದು ವಸ್ತುಗಳನ್ನು ಪೂರೆಐಸಲು ಸಾಧ್ಯವಾ ಎಂಬ ಪ್ರಶದನೆಯೂ ಏಳುತ್ತದೆ.
ಹೀಗಿರುವಾಗ ಭಾರತದ ಆನ್‌ಲೈನ್ ಕಂಪನಿ ಫ್ಲಿಪ್ ಕಾರ್ಟ್ ಸಂಪಪೂರ್ಣವಾಗಿ ತನ್ನ ಉದ್ಯಮವನ್ನು ನಿಲ್ಲಿಸಿದೆ. ಈ ಕುರಿತಾಗಿ ಪ್ರತಿಕ್ರಿಯಿಸಿರುವ ಕಂಪನಿ ತಾತ್ಕಾಲಿಕವಾಗಿ ಸೇವೆ ಸ್ಥಗಿತಗೊಳಿಸಲಾಗಿದೆ. ಶೀಘ್ರದಲ್ಲೇ ಮತ್ತೆ ನಮ್ಮ ಸೇವೆ ಆರಂಭಿಸುತ್ತೇವೆ. ಜನರೆಲ್ಲರೂ ಮನಯಲ್ಲೇ ಇರಬೇಕು ತಮ್ಮನ್ನು ತಾವು ರಕ್ಷಿಸಿಕೊಳ್ಬೇಕೆಂದು ಮನವಿ ಮಾಡಿದೆ.
ಇನ್ನು ತನ್ನ ಎದುರಾಳಿ ಅಮೆಜಾನ್ ಕೇವಲ ಅಗತ್ಯ ವಸ್ತುಗಳ ಮಾರಾಟವಷ್ಟೇ ಅರಂಭಿಸಿದ ಬೆನ್ನಲ್ಲೇ, ಫ್ಲಿಪ್‌ಕಾರ್ಟ್ ಈ ನಡೆ ಇಟ್ಟಿದೆ ಎಂಬುವುದು ಉಲಲ್ಲೇಖನೀಯ. ಲಾಕ್‌ಡೌನ್ ಬಬೆನ್ನ್ಲೇ ಪ್ರತಿಕ್ರಿಇಯಿಸಿರುವ ಅಮೆಜಾನ್ 'ನಮ್ಮ ಗ್ರಾಹಕರ ಸೇವೆಗಾಗಿ, ತೀರಾ ಅಗತ್ಯವಿರುವ ವಸ್ತುಗಳನ್ನಷ್ಟೇ ಮಾರಾಟ ಮಾಡುತ್ತಿದ್ದೇವೆ' ಎಂದು ತಿಳಿಸಿದೆ. ಅಲ್ಲದೇ ತಮ್ಮ ಉದ್ಯೋಗಿಗಳ ಹಿತರಕ್ಷಣೆಯೂ ಮುಖ್ಯ ಎಂದಿದೆ.
ಅದೇನಿದ್ದರೂ ಲಾಕ್‌ಡೌನ್ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಜನರು ಭಯ ಬೀಳುವ ಅಗತ್ಯವಿಲ್ಲ. ಅಗತ್ಯವಾದ ವಸ್ತುಗಳು ಎಂದಿನಂತೆ ಸಿಗಲಿವೆ ಎಂದು ತಿಳಿಸಿದ್ದಾರೆ.