ಬೆಂಗಳೂರು (ಮಾ.22): ಕೋವಿಡ್ -19 ಕುರಿತ ಸಾರ್ವಜನಿಕರ ಎಲ್ಲಾ ಪ್ರಶ್ನೆಗಳನ್ನು ಪರಿಹರಿಸಲು, ಅವರ ಅಗತ್ಯ ಸಂದರ್ಭದಲ್ಲಿ ಸಹಾಯ ಮಾಡಲು ಭಾರತ ಸರ್ಕಾರವು 'ಮೈಗೋವ್ ಕೊರೋನಾ ಹೆಲ್ಪ್‌ಡೆಸ್ಕ್' ಎಂಬ ವಾಟ್ಸಾಪ್ ಚಾಟ್‌ಬಾಟ್ ಅನ್ನು ಆರಂಭಿಸಿದೆ.
ಈ ಚಾಟ್‌ಬಾಟ್‌ಅನ್ನು ವಿಶ್ವದ ಅತಿದೊಡ್ಡ ಎಐ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ನ ಅಂಗಸಂಸ್ಥೆಯಾದ ಜಿಯೋ ಹ್ಯಾಪ್ಟಿಕ್ ಟೆಕ್ನಾಲಜೀಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದೆ ಮತ್ತು ಕಾರ್ಯಗತಗೊಳಿಸಿದೆ.
undefined
ಇದನ್ನೂ ನೋಡಿ | ಬದಲಾದ ಸನ್ನಿವೇಶ ಹೆಚ್ಚಾದ ಅವಶ್ಯಕತೆ: ಜಿಯೋ ಗ್ರಾಹಕರಿಗೆ ಡಬಲ್ ಡೇಟಾ ಸೌಲಭ್ಯ!...
ಸಾರ್ವಜನಿಕರು +91 9013151515 ಸಂಖ್ಯೆಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸುವ ಮೂಲಕ ಚಾಟ್‌ಬಾಟ್ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಮೂಲಭೂತ ನೈರ್ಮಲ್ಯ ಪದ್ಧತಿಗಳನ್ನು ಅನುಸರಿಸುವ ಮೂಲಕ ದೇಶಾದ್ಯಂತ ಈ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯುವ ಸಲುವಾಗಿ ವಾಟ್ಸ್‌ಆಪ್ ಮೂಲಕ ಒಂದು ಬಟನ್ ಪ್ರೇಸ್ ಮಾಡಿ ಸರಿಯಾದ ಮಾಹಿತಿಯನ್ನು ಪಡೆಯುವುದು ಈ ಯೋಜನೆಯ ಮುಖ್ಯ ಉದ್ದೇಶ.
ಈ ಚಾಟ್‌ಬಾಟನ್ನು ಜಿಯೋ ಹ್ಯಾಪ್ಟಿಕ್(Jio Haptik) ಉಚಿತವಾಗಿ ಅಭಿವೃದ್ಧಿಪಡಿಸಿದ್ದು ಮತ್ತು ನೆಜಿಡಿ (NeGD) ಮತ್ತು ಮೈಗೋವ್(MyGov)ನ ಸೂಚನೆಗಳ ಪ್ರಕಾರ ನೈಜ ಸಮಯದಲ್ಲಿ ಅಪ್ಡೇಟ್ ಮಾಡಲಾಗುತ್ತದೆ.
ರಿಯಲಟ ಟೈಮ್ ಆಪ್‌ಡೇಟ್‌ಗಳ ಮೂಲಕ ಪ್ರಸ್ತುತ ಸನ್ನಿವೇಶದ ಬಗ್ಗೆ ಜನರಿಗೆ ಅರಿವು ಮೂಡಿಸಲಿದ್ದು, ಸುಳ್ಳು ಮಾಹಿತಿಯ ಪ್ರಸರಣವನ್ನು ತಡೆಯಲು ಈ ಚಾಟ್ ಬಾಟ್ ಸಹಾಯಕಾರಿಯಾಗಲಿದೆ .
ಇದನ್ನೂ ನೋಡಿ | ಪವರ್ ಬ್ಯಾಂಕ್ ಕುರಿತು ತಿಳಿದಿರಬೇಕಾದ 10 ಅಂಶಗಳು...
ಆರೋಗ್ಯ ಸಚಿವಾಲಯದಿಂದ ಪರಿಶೀಲಿಸಿದ ಡೇಟಾದೊಂದಿಗೆ, ಚಾಟ್ ಬಾಟ್ ಕೊರೋನ ವೈರಸ್ ಕುರಿತ ಸಂಬಂಧಿಸಿದ FAQ ಗಳನ್ನು ನೀಡಲಾಗಿದೆ. ಇದು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳು, ಲಕ್ಷಣಗಳು, ಸರಿಯಾದ ಮತ್ತು ತಪ್ಪಾದ ಸಂಗತಿಗಳು, ಸಹಾಯವಾಣಿ ಸಂಖ್ಯೆಗಳು, ಪ್ರದೇಶದ ಪೀಡಿತ ಪ್ರಕರಣಗಳು, ಸರ್ಕಾರದ ಸಲಹೆಗಳು (ಪ್ರಯಾಣ ಸೇರಿದಂತೆ), ಮಾಹಿತಿ ವೀಡಿಯೊಗಳು ಇತ್ಯಾದಿಗಳನ್ನು ಒಳಗೊಂಡಿರಲಿದೆ.
ಮಾರ್ಚ್ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ