WhatsAppನಿಂದ ಮತ್ತೊಂದು ಬಂಪರ್ ಫೀಚರ್! ಬೇಕಂತಿಲ್ಲ ‘ಲಾಸ್ಟ್ ಸೀನ್‘ ಟೆನ್ಷನ್

By Web Desk  |  First Published Nov 26, 2018, 10:16 PM IST

ಇತ್ತೀಚೆಗೆ ಡಿಲೀಟ್ ಫಾರ್ ಎವ್ರಿಒನ್‌ನಲ್ಲಿ ಬದಲಾವಣೆ,  ಪ್ರೈವೇಟ್ ರಿಪ್ಲೈ  ಹಾಗೂ ಸ್ಟಿಕ್ಕರ್ಸ್ಗಳನ್ನು ಪರಿಚಯಿಸಿದ್ದ WhatsApp, ಇದೀಗ ಹೊಸ ಫೀಚರ್‌ನ್ನು ಬಿಡುಗಡೆಮಾಡಲು ಸಿದ್ಧತೆ ನಡೆಸಿದೆ. 


ಬಳಕೆದಾರರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು  WhatsApp ಹೊಸ ಹೊಸ ಫೀಚರ್‌ಗಳನ್ನು ಬಿಡುಗಡೆಮಾಡುತ್ತಾ ಬಂದಿದೆ. ಕಳುಹಿಸಿದ ಮೆಸೇಜನ್ನು ಡಿಲೀಟ್ ಫಾರ್ ಎವ್ರಿಒನ್, ಪ್ರೈವೇಟ್ ರಿಪ್ಲೈ ಹಾಗೂ ವಾಟ್ಸಪ್ ಸ್ಟಿಕ್ಕರ್ಸ್ಗಳಂತಹ ಫೀಚರ್‌ಗಳನ್ನು ಇತ್ತೀಚೆಗಿನ ದಿನಗಳಲ್ಲಿ ಬಿಡುಗಡೆ ಮಾಡಿದೆ. 

ವಾಟ್ಸಪ್ ‘ಫಾರ್ವರ್ಡ್ ಪ್ರಿವೀವ್‘ ಎಂಬ ಫೀಚರ್ ಪರಿಚಯಿಸಲು ಮುಂದಾಗಿದೆ ಎಂದು ಕೆಲ ದಿನಗಳ ಹಿಂದೆ ವರದಿ ಮಾಡಿದ್ದೆವು.  ಇದೀಗ, ಬಳಕೆದಾರರಿಗೆ ಮತ್ತೊಂದು ಮಹತ್ವದ ಫೀಚರ್ ಬಿಡುಗಡೆ ಮಾಡಲು WhatsApp ಸಿದ್ಧತೆ ನಡೆಸಿದೆ.

ಇದನ್ನೂ ಓದಿ: ಹುಷಾರ್! ಈ 5 ಕೆಲಸ ಮಾಡಿದ್ರೆ ವಾಟ್ಸಪ್ ನಿಮ್ಮನ್ನು ಬ್ಯಾನ್ ಮಾಡುತ್ತೆ

Tap to resize

Latest Videos

ಮೆಸೇಜ್‌ಗಳನ್ನು, ಇಮೇಜ್‌ಗಳನ್ನು ನೋಟಿಫಿಕೇಶನ್ ಪ್ಯಾನೆಲ್‌ನಿಂದಲೇ ಪ್ರಿವೀವ್ ಮಾಡಲು ಅವಕಾಶ ಮಾಡಿಕೊಟ್ಟಿರುವ WhatsApp ಇದೀಗ ವಿಡಿಯೋ ಪ್ರಿವೀವ್ ಸೌಲಭ್ಯವನ್ನು ನೀಡುತ್ತಿದೆ.

ಈ ಫೀಚರ್ ಮೂಲಕ, ವಿಡಿಯೋವನ್ನು ಡೌನ್ ಲೋಡ್ ಮಾಡಿ ಪ್ಲೇ ಮಾಡಿ ನೋಡಬೇಕಾದ ಅವಶ್ಯಕತೆ ಇರಲ್ಲ. ನೋಟಿಫಿಕೇಶನ್ ಪ್ಯಾನೆಲ್‌ನಲ್ಲಿ ಬಂದಿರುವ ವಿಡಿಯೋವನ್ನು ಪ್ರಿವೀವ್ ಮಾಡಬಹುದು.  ಹೀಗೆ ಪ್ರಿವೀವ್ ನೋಡುವುದರಿಂದ ಬಳಕೆದಾರರ ‘ಲಾಸ್ಟ್ ಸೀನ್’ ಸ್ಟೇಟಸ್ ಕೂಡಾ ಬದಲಾಗಲ್ಲ.

ಕೆಲವರಿಗೆ ‘ಲಾಸ್ಟ್ ಸೀನ್’ ಸ್ಟೇಟಸ್  ಏನೇ ಆಗಿದ್ದರೂ ತಲೆಕೆಡಿಸುವ ವಿಚಾರವೇ ಅಲ್ಲ, ಆದರೆ ಇನ್ನೂ ಹಲವರಿಗೆ ಅದು ‘ಖಾಸಗಿತನ’ದ ಪ್ರಶ್ನೆ! ಅಂಥವರಿಗೆ ಈ ಸೌಲಭ್ಯ ಬಹಳ ಸಹಕಾರಿಯಾಗಿದೆ.  ‘ಆನ್ ಲೈನ್’ ಸ್ಟೇಟಸ್ ನೋಡಿ ಅನಾವಶ್ಯಕ ಮೆಸೇಜ್ ಕಳುಹಿಸುವವರು ‘ಲಾಸ್ಟ್ ಸೀನ್’ ನೋಡಿ ಹಿಂದೆ ಸರಿಯುವುತ್ತಾರೆ. 

ಇದನ್ನೂ ಓದಿ: ಸಂಚಲನ ಹುಟ್ಟಿಸಿದೆ Redmi Note 6 Pro; ಹೇಗಿದೆ? ಏನಿದೆ? ಇಲ್ಲಿದೆ ಫುಲ್ ಡೀಟೆಲ್ಸ್

ಆದರೆ WhatsAppನ ಈ ಹಿಸ ಫೀಚರ್ ಯಾವಾಗ ಕಾರ್ಯಗತವಾಗುತ್ತೆ ಎಂಬ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ. ಹಾಗೂ, ಈ ರೀತಿ ಪ್ರಿವೀವ್‌ ನೋಡುವುದರಿಂದಾಗಿ ಫೋನ್‌ನ ಸ್ಟೋರೆಜ್ ಸ್ಪೇಸ್ ಉಳಿತಾಯವಾಗುತ್ತೋ ಇಲ್ಲವೋ ಎಂಬುವುದೂ ಸ್ಪಷ್ಟವಾಗಿಲ್ಲ.   

ಒಟ್ಟಾರೆಯಾಗಿ, ಬಳಕೆದಾರರ ಅವಶ್ಯಕತೆಗಳಿಗೆ ತಕ್ಕಂತೆ ಬದಲಾವಣೆ, ಫೀಚರ್‌ಗಳನ್ನು ಅಭಿವೃದ್ಧಿಪಡಿಸುವ ಮೂಲಕ ಈ ಜನಪ್ರಿಯ ಇನ್ಸ್ಟಾಂಟ್ ಮೆಸೇಜಿಂಗ್ ತಾಣವಾಗಿರುವ ವಾಟ್ಸಪ್, ತನ್ನ ಮಾರುಕಟ್ಟೆಯನ್ನು ಇನ್ನೂ ವಿಸ್ತರಿಸಿಕೊಳ್ಳುತ್ತಿದೆ. 

 

click me!