ಶೀಘ್ರದಲ್ಲೇ WhatsApp ಹೊಸ ನಿಯಮ; ಇಂಥವರ ಅಕೌಂಟ್‌ ನಿಷೇಧ!

By Web Desk  |  First Published Aug 19, 2019, 6:26 PM IST

ಯಾವುದೇ ತಂತ್ರಜ್ಞಾನವಾಗಲಿ, ಬೆಳದಂತೆ, ಪ್ರಭಾವಶಾಲಿಯಾದಂತೆ ಬಳಕೆಯ ಸ್ವರೂಪ ಕೂಡಾ ಬದಲಾಗುತ್ತದೆ. ಬಳಕೆಯ ಜೊತೆ ದುರ್ಬಳಕೆಯೂ ಆಗುತ್ತದೆ. ಅಂಥ ಬೆಳವಣಿಗೆಗಳನ್ನು  ನಿಯಂತ್ರಿಸಲು  ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ಜಾರಿ ಮಾಡಬೇಕಾಗುತ್ತದೆ. WhatsApp ಕೂಡಾ ಈ ನಿಟ್ಟಿನಲ್ಲಿ ಮುಂದಡಿಯಿಟ್ಟಿದೆ. 


ಕಳದೊಂದು ದಶಕದಲ್ಲಿ ಸಂವಹನದ ಪ್ರಬಲ ಮಾಧ್ಯಮವಾಗಿ ಹೊರಹೊಮ್ಮಿರುವ ಫೇಸ್ಬುಕ್ ಒಡೆತನದ WhatsApp ಹೊಸ ನಿಯಮವೊಂದನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. 

WhatsApp ಬಳಸಲು ಇರುವ ಕನಿಷ್ಠ ವಯಸ್ಸಿನ ಅರ್ಹತೆಯನ್ನು ಬಿಗಿಗೊಳಿಸಲು ಹೊರಟಿದ್ದು, ಈ ಮಾನದಂಡವನ್ನು ಪಾಲಿಸದ ಖಾತೆಗಳನ್ನು ಬ್ಯಾನ್ ಮಾಡಲು ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.

Tap to resize

Latest Videos

ಯೂರೋಪಿನಲ್ಲಿ WhatsApp ಬಳಸಬೇಕಾದರೆ ವ್ಯಕ್ತಿಗೆ ಕನಿಷ್ಠ 13 ವರ್ಷವಾಗಿರಬೇಕು ಎಂಬ ನಿಯಮವಿತ್ತು. ಕಳೆದ ವರ್ಷ ಅದನ್ನು 16ಕ್ಕೇರಿಸಲಾಗಿತ್ತು. ಉಳಿದೆಲ್ಲೆಡೆ ಈಗಲೂ 13 ವರ್ಷ ಕಡ್ಡಾಯ ಎಂಬ ನಿಯಮ ಇದೆ. 

ಇದನ್ನೂ ಓದಿ | ವಾಟ್ಸಪ್ ಮತ್ತು ಇನ್ಸ್ಟಾಗ್ರಾಮ್‌ಗೆ ಇನ್ಮುಂದೆ ಹೊಸ ಹೆಸರು!

undefined

WhatsApp ಷರತ್ತು ಮತ್ತು ನಿಬಂಧನೆಗಳ ಪ್ರಕಾರ, ವಾಟ್ಸಪ್ ಬಳಸಬೇಕಾದರೆ ವಯಸ್ಸು ಕನಿಷ್ಠ 13 ವರ್ಷವಾಗಿರಬೇಕು. Terms & Conditionಗೆ ಸಮ್ಮತಿಸಲು, ಆಯಾಯ ದೇಶದ ಕಾನೂನಿನನ್ವಯ ಅಪ್ರಾಪ್ತರಾಗಿದ್ದರೆ, ಅಂಥವರ ಪರವಾಗಿ ಹೆತ್ತವರು/ಪೋಷಕರು ಸಮ್ಮತಿಸಬೇಕಾಗುತ್ತದೆ. 

ಈ ನಿಯಮ ಪಾಲಿಸದ ಖಾತೆಗಳನ್ನು ನಿಷೇಧಿಸಲು WhatsApp ಹೊರಟಿದೆ ಸರಿ, ಆದರೆ ಬಳಕೆದಾರರ ವಯಸ್ಸನ್ನು ಹೇಗೆ ಖಚಿತಪಡಿಸಲಿದೆ ಎಂಬುವುದು ಇನ್ನೂ ಸ್ಪಷ್ಟವಾಗಿಲ್ಲ.

click me!