ವಾಟ್ಸಪ್ ತರುತ್ತಿದೆ ಹೊಸ ಫೀಚರ್; ಇನ್ಮುಂದೆ ಎಡವುದು ಕಡಿಮೆ?

By Web DeskFirst Published Nov 13, 2018, 5:04 PM IST
Highlights

ಬಳಕೆದಾರರು ಮೆಸೇಜ್‌ಗಳನ್ನು ಕಳುಹಿಸುವಾಗ ಹೆಚ್ಚು ಜವಾಬ್ದಾರಿ ಹೊಂದಿರಬೇಕು. ಆ ನಿಟ್ಟಿನಲ್ಲಿ ತಾವು ಕಳುಹಿಸುವ ಯಾವುದೇ ಸಂದೇಶವನ್ನು ಮತ್ತೊಮ್ಮೆ ಅವಲೋಕನ ನಡೆಸಬೇಕು. ಓಕೆಯೆಂದಾದ್ರೆ ಮುಂದುವರಿಯಬೇಕು. 

ಬಳಕೆದಾರರು ಮೆಸೇಜ್ ಗಳನ್ನು ಕಳುಹಿಸುವಾಗ ಹೆಚ್ಚು ಜವಾಬ್ದಾರಿ ಹೊಂದಿರಬೇಕು. ಆ ನಿಟ್ಟಿನಲ್ಲಿ ತಾವು ಕಳುಹಿಸುವ ಯಾವುದೇ ಸಂದೇಶವನ್ನು ಮತ್ತೊಮ್ಮೆ ಅವಲೋಕನ ನಡೆಸಬೇಕು. ಓಕೆಯೆಂದಾದ್ರೆ ಮುಂದುವರಿಯಬೇಕು. 

ಬಳಕೆದಾರರಿಗೆ ಇನ್ನೊಂದು ಹೊಸ ಫೀಚರ್ ನೀಡಲು ವಾಟ್ಸಪ್ ಇದೀಗ ಮುಂದಾಗಿದೆ. ಕಳೆದ ಕೆಲ ದಿನಗಳಲ್ಲಿ ಡಿಲೀಟ್ ಫಾರ್ ಎವ್ರಿಒನ್, ಪ್ರೈವೇಟ್ ರಿಪ್ಲೈ,  ಸ್ಟಿಕ್ಕರ್ಸ್ ನಂತಹ ಫೀಚರ್ ನೀಡಿದ್ದ ವಾಟ್ಸಪ್ ಇದೀಗ ‘ಫಾರ್ವರ್ಡ್ ಪ್ರಿವೀವ್’ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ.

WABetaInfo ಪ್ರಕಾರ ಆ್ಯಂಡ್ರಾಯಿಡ್ ಬೀಟಾ 2.18.325 ಆವೃತ್ತಿಯಲ್ಲಿ, ಈ ಫೀಚರ್ ಲಭ್ಯವಿದೆ.  ಬಳಕೆದಾರರು ಯಾವುದೇ ಫೈಲನ್ನು ಫಾರ್ವರ್ಡ್ ಮಾಡುವ ಮುಂಚೆ, ಪಾಪ್ ಅಪ್ ನಲ್ಲಿ ಪ್ರಿವೀವ್ ನೋಡಬಹುದಾಗಿದೆ. ಸರಿಯಾಗಿದ್ದಲ್ಲಿ, ಅದನ್ನು ಫಾರ್ವರ್ಡ್ ಮಾಡಬಹುದು ಇಲ್ಲದಿದ್ದಲ್ಲಿ ರದ್ದುಮಾಡಬಹುದು.

WhatsApp beta for Android 2.18.325: when you forward a message or media to two or more chats, WhatsApp will show you a preview before forwarding the item, so you can confirm or cancel the operation.

[AVAILABLE IN FUTURE]
[AVAILABLE IN FUTURE]
[AVAILABLE IN FUTURE] pic.twitter.com/KgdKer2CdJ

— WABetaInfo (@WABetaInfo)

ಆದರೆ ಎಲ್ಲಾ ಫಾರ್ವರ್ಡ್ ಮೆಸೇಜ್ ನಲ್ಲಿ ಈ ಪ್ರಿವೀವ್ ಕಾಣಲ್ಲ. ಬಳಕೆದಾರರು ಒಂದು ಸಂದೇಶ ಅಥವಾ ಮೀಡಿಯಾ ಫೈಲನ್ನು 2 ಅಥವಾ ಅದಕ್ಕಿಂತ ಹೆಚ್ಚು ಕಾಂಟ್ಯಾಕ್ಟ್ ಗಳಿಗೆ ಕಳುಹಿಸುವುದಾದರೆ ಮಾತ್ರ ಕಾಣಿಸುತ್ತದೆ.

ಸದ್ಯಕ್ಕೆ ಈ ಫೀಚರ್ ಪ್ರಯೋಗ ಹಂತದಲ್ಲಿದ್ದು,  ಮುಂದಿನ ದಿನಗಳಲ್ಲಿ ಲಭ್ಯವಾಗುವುದು. 

click me!
Last Updated Nov 13, 2018, 5:04 PM IST
click me!