ಅನಂತ್ ಕುಮಾರ್ ಕೊನೆಯ ಟ್ವೀಟ್ ಇದು

By Web DeskFirst Published Nov 13, 2018, 4:28 PM IST
Highlights

ಜನರೊಂದಿಗೆ ಸಂಪರ್ಕದಲ್ಲಿರುವ, ಅವರೊಡನೆ ಸಂವಾದ ನಡೆಸುವ, ಅವರನ್ನು ತಲುಪುವ ಯಾವುದೇ ಅವಕಾಶವನ್ನು ಮಿಸ್ ಮಾಡದ ಅನಂತ್,  ಅದಕ್ಕಾಗಿ ತಂತ್ರಜ್ಞಾನ ಬಳಕೆಯಲ್ಲೂ ಮುಂಚೂಣಿಯಲ್ಲಿದ್ದರು.

ಬೆಂಗಳೂರು: ಬಿಜೆಪಿ ನಾಯಕ, ಕೇಂದ್ರ ಸಚಿವ ಅನಂತ್ ಕುಮಾರ್ ಇಹಲೋಕ ಪಯಣವನ್ನು ಮುಗಿಸಿದ್ದಾರೆ. ರಾಜಕಾರಣಿಯಾಗಿದ್ದು, ಸಂಸದನಿಂದ ಕೇಂದ್ರ ಸಚಿವ ಹುದ್ದೆಗೇರಿದರೂ, ಜನರನ್ನು ತಲುಪುವ ಹಾಗೂ ಜನರು ಅವರನ್ನು ತಲುಪುವ ಯಾವುದೇ ಅವಕಾಶವನನ್ನು ಅವರು ಮಿಸ್ ಮಾಡಿಕೊಳ್ಳಲು ಇಷ್ಟಪಡುತ್ತಿರಲಿಲ್ಲ. ಆದಕ್ಕಾಗಿ ಅವರು ಸಂವಹನ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವವರಲ್ಲಿ ಅವರೂ ಒಬ್ಬರು.

ಅದಕ್ಕೆ ಅವರ ಈ ನಡೆಯೇ ಸಾಕ್ಷಿ:

ಮೊದಲ ಬಾರಿಗೆ 1996ರಲ್ಲಿ  ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ ಅವರು ನಂತರ 1998ರ ಸಾರ್ವತ್ರಿಕ ಚುನಾವಣೆಯಲ್ಲಿ  www.dataindia.com ಮತ್ತು www.ananth.org  ವೆಬ್ ಸೈಟ್ ಗಳನ್ನು  ಪ್ರಾರಂಭಿಸುವ ಮೂಲಕ  ಸ್ವಂತ ವೆಬ್ ಸೈಟ್ ನ್ನು ಪ್ರಾರಂಭಿಸಿದ ಮೊದಲ ರಾಜಕಾರಣಿ ಎನ್ನುವ ಖ್ಯಾತಿಗೆ ಅನಂತ್ ಕುಮಾರ್ ಪಾತ್ರರಾಗಿದ್ದರು. 

ಟ್ವಿಟರ್ ಹಾಗೂ ಫೇಸ್ಬುಕ್ ನಂಥ ಸೋಶಿಯಲ್ ಮೀಡಿಯಾದಲ್ಲೂ ಬಲು ಸಕ್ರಿಯರಾಗಿದ್ದ ಅನಂತ್ ಕುಮಾರ್ ಲಕ್ಷಾಂತರ ಫಾಲೋವರ್ ಗಳನ್ನು ಹೊಂದಿದ್ದರು. ಟ್ವೀಟರ್ ನಲ್ಲಿ 3.35 ಲಕ್ಷ ಹಾಗೂ 7.78 ಫಾಲೋವರ್‌ಗಳನ್ನು ಹೊಂದಿದ್ದ ಅವರು ಜನರ ಸಲಹೆ-ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು.

ಅ.27 ರಂದು ಅವರು ಮಾಡಿರುವ ಫೇಸ್ಬುಕ್ ಪೋಸ್ಟ್ ಮತ್ತು ಟ್ವೀಟ್ ಬೆಂಗಳೂರು ಹಾಗೂ ಪರಿಸರದ ಬಗ್ಗೆಗಿನ ಅವರ ಬದ್ಧತೆಯನ್ನು ಸೂಚಿಸುತ್ತದೆ.

pic.twitter.com/Iz9wj1PMCJ

— Ananthkumar (@AnanthKumar_BJP)
click me!
Last Updated Nov 13, 2018, 4:30 PM IST
click me!