*ಬಳಕೆದಾರರಿಗೆ ವಾಟ್ಸಪ್ ನಿರಂತರ ಹೊಸ ಅಪ್ಡೇಟ್ಸ
*ಗ್ರೂಪ್ ಮೆಂಬರ್ಸ್ ಮೇಲೆ ಅಡ್ಮಿನ್‌ಗಳ ನಿಯಂತ್ರಣ
*ಬರಲಿದ ಸದಸ್ಯರ ಚಾಟ್ ಡಿಲೀಟ್ ಮಾಡುವ ಫೀಚರ್!
Tech Desk: ವಾಟ್ಸಪ್ (WhatsApp) ಪ್ರಸ್ತುತ ಹೊಸ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದ್ದು ಅದು ಗ್ರೂಪ್ ಅಡ್ಮಿನ್‌ಗಳಿಗೆ (Group Admin) ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆ. ವಾಟ್ಸಪ್ ಚಾಟ್‌ಗಳಲ್ಲಿ ಸಂದೇಶಗಳನ್ನು ಅಳಿಸುವ ವೈಶಿಷ್ಟ್ಯವನ್ನು ದೀರ್ಘಕಾಲ ಬೆಂಬಲಿಸಿದೆ. ಗ್ರೂಪ್ ಅಡ್ಮಿನ್ ಸದಸ್ಯರನ್ನು ಗ್ರೂಪ್‌ನಿಂದ ಹೊರಹಾಕಬಹುದು ಅಥವಾ Admin Only ಸಕ್ರಿಯಗೊಳಿಸುವ ಮೂಲಕ ಗುಂಪಿನ ಇತರ ಸದಸ್ಯರು ಮೆಸೇಜ್ ಮಾಡದಂತೆ ತಡೆ ಹಿಡಿಯಬಹುದು. ಗ್ರೂಪ್ ಅಡ್ಮಿನ್, ಸದಸ್ಯರು ಕಳುಹಿಸಿದ ಸಂದೇಶವನ್ನು ಅಳಿಸಲು ಸದ್ಯಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ ಈ ಹೊಸ ವೈಶಿಷ್ಟ್ಯಗಳು ಶೀಘ್ರದಲ್ಲೇ ಬರಬಹುದು. ಹೀಗಾಗಿ ಗ್ರೂಪ್ ಅಡ್ಮಿನ್‌ಗಳು ಸದಸ್ಯರ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಬಹುದು.
WABetainfo ಮಾಹಿತಿ ಪ್ರಕಾರ, ಮೆಟಾ-ಮಾಲೀಕತ್ವದ ಮೇಸೆಜಿಂಗ್ ಅಪ್ಲಿಕೇಶನ್ ಹೊಸ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ, ಅದು ಅಡ್ಮಿನ್‌ಗಳಿಗೆ ಗುಂಪಿನಲ್ಲಿರುವ ಸಂದೇಶಗಳನ್ನು ಅಳಿಸಲು ಅನುಮತಿಸುತ್ತದೆ. ಇದರರ್ಥ ನೀವು ವಾಟ್ಸಾಪ್ ಗುಂಪಿನ ಮಾಡರೇಟರ್ ಆಗಿದ್ದರೆ, ಗುಂಪಿನ ಸದಸ್ಯರು ಕಳುಹಿಸುವ ಅನಗತ್ಯ ಅಥವಾ ಅನುಪಯುಕ್ತ ಸಂದೇಶಗಳನ್ನು ಅಳಿಸಲು ನಿಮಗೆ ಸಾಧ್ಯವಾಗಲಿದೆ.
undefined
ಅಭಿವೃದ್ಧಿ ಹಂತದಲ್ಲಿದೆ ಹೊಸ ಫೀಚರ್!
ಸಂದೇಶವನ್ನು ಅಳಿಸಿದಾಗ, ವಾಟ್ಸಾಪ್ ಬಳಕೆದಾರರಿಗೆ "ಅದನ್ನು ಅಡ್ಮಿನ್‌ಗಳಿಂದ ಅಳಿಸಲಾಗಿದೆ" ಎಂದು ತಿಳಿಸುತ್ತದೆ ಮತ್ತು ಸಂದೇಶವನ್ನು ಅಳಿಸಿದ ನಿರ್ವಾಹಕರ ಹೆಸರೂ ಕಾಣಿಸಿಕೊಳ್ಳುತ್ತದೆ. WABetoinfo ಗಮನಿಸಿದಂತೆ, ಈ ವೈಶಿಷ್ಟ್ಯವು ಇನ್ನೂ ಅಭಿವೃದ್ಧಿಯಲ್ಲಿದೆ ಮತ್ತು ಬಳಕೆದಾರರಿಗೆ ಇನ್ನೂ ಲಭ್ಯವಿಲ್ಲ. ವಾಟ್ಸಪ್‌ನ ಈ ಫೀಚರ್ ಎಲ್ಲರಿಗೂ ಯಾವಾ ಲಭ್ಯವಾಗಲಿದೆ ಎಂದು ಇನ್ನೂ ತಿಳಿದಿಲ್ಲ. ವಾಟ್ಸಪ್ ಅದನ್ನು ಸ್ಕ್ರ್ಯಾಪ್ ಮಾಡದಿದ್ದರೆ, ವೈಶಿಷ್ಟ್ಯವು ಮೊದಲು ವಾಟ್ಸಪ್ ಬೀಟಾದಲ್ಲಿ ಅಥವಾ ಚಾನಲ್‌ಗೆ ಹೋಗುವ ಮೊದಲು ಕಾಣಿಸಿಕೊಳ್ಳುತ್ತದೆ.
ವಾಟ್ಸಪ್ ಸಂದೇಶವನ್ನು ಅಳಿಸುವ ಗಡುವನ್ನು ತೆಗೆದುಹಾಕಲು ಪರಿಗಣಿಸುತ್ತಿದೆ ಕಳೆದ ತಿಂಗಳು ತಿಳಿದುಬಂದಿತ್ತು ಹಾಗೆಯೇ ಸಂದೇಶಗಳನ್ನು ಅಳಿಸುವ ಸಾಮರ್ಥ್ಯವು ಬರಲಿದೆ ಎಂದು ವರದಿಯಾಗಿದೆ. ಪ್ರಸ್ತುತ, ವಾಟ್ಸಪ್ ಬಳಕೆದಾರರಿಗೆ ಸಂದೇಶವನ್ನು ಕಳುಹಿಸಿದ ನಂತರ ಅದನ್ನು ಅಳಿಸಲು 4,096 ಸೆಕೆಂಡುಗಳು (68 ನಿಮಿಷ 16 ಸೆಕೆಂಡುಗಳು) ಸಮಯ ನೀಡುತ್ತದೆ. ಆದಾಗ್ಯೂ, ಭವಿಷ್ಯದಲ್ಲಿ, ನೀವು ಯಾವುದೇ ಸಮಯದಲ್ಲಿ ಕಳುಹಿಸಿದ ಯಾವುದೇ ಸಂದೇಶಗಳನ್ನು ಅಳಿಸಲು ವಾಟ್ಸಪ್ ನಿಮಗೆ ಅನುಮತಿಸಬಹುದು.
ಬಳಕೆದಾರರಿಗೆ ವಾಟ್ಸಪ್ ನಿರಂತರ ಹೊಸ ಅಪ್ಡೇಟ್ಸ
ವಾಟ್ಸಪ್ ಕಳೆದ ಕೆಲವು ದಿನಗಳಿಂದ ಬಳಕೆದಾರರಿಗೆ ಹಲವು ಅಪ್ಡೇಟ್‌ಗಳನ್ನು ನೀಡುತ್ತಿದೆ. Disappearing Messges, Voice Messge Preview ಸೇರಿದಂತೆ ಹಲವಾರು ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದೆ. ಇಲ್ಲಿಯವರೆಗೆ, ಕಣ್ಮರೆಯಾಗುವ ಸಂದೇಶಗಳ ಫೀಚರ್ ಏಳು ದಿನಗಳ ನಂತರ ಚಾಟ್‌ನಿಂದ ಎಲ್ಲ ಸಂದೇಶಗಳನ್ನು ಸ್ವಯಂಚಾಲಿತವಾಗಿ ತೆಗೆದುಹಾಕುತ್ತಿತ್ತು. ಕಣ್ಮರೆಯಾಗುವ ಸಂದೇಶಗಳಿಗೆ ಕಂಪನಿಯು ಎರಡು ಹೊಸ ಅವಧಿಗಳನ್ನು ಸೇರಿಸಿದ್ದು 24 ಗಂಟೆಗಳು ಮತ್ತು 90 ದಿನಗಳು ನಂತರ ಮೇಸೆಜ್‌ಗಳು ಅಳಿಸಿ ಹೋಗುವಂತೆ ಮಾಡಲು ಆಯ್ಕೆ ನೀಡಿದೆ
ಜತೆಗೆ ಬಳಕೆದಾರರ ಗೌಪ್ಯತೆ, ಆನ್‌ಲೈನ್ ಸ್ಟೇಟಸ್ ಕದ್ದು ನೋಡುತ್ತಿದ್ದ ಥರ್ಡ್ ಪಾರ್ಟಿ ಆಪ್‌ಗಳಿಗೂ ಕಡಿವಾಣ ಹಾಕಿದೆ. ಈ ಮೂಲಕ ಬಳಕೆದಾರರಿಗೆ ವಾಟ್ಸಪ್ ಸುರಕ್ಷಿತ ವೇದಿಕೆಯನ್ನು ನಿರ್ಮಿಸುತ್ತಿದೆ ಎಂದು ಹೇಳಿದೆ.
ಈಗ ವಾಟ್ಸಪ್‌ನಲ್ಲೂ ಕ್ಯಾಬ್ ಬುಕ್ಕಿಂಗ್
ವಾಟ್ಸಪ್ ಬಳಸಿ ಊಬರ್ ಕ್ಯಾಬ್ ಬುಕ್ ಮಾಡಲು (Book an Uber Ride on WhatsAp) ಊಬರ್ ಮತ್ತು ಮೆಟಾ (Meta) ಒಡೆತನದ ವಾಟ್ಸಪ್ ಸೇರಿ ಹೊಸದೊಂದು ಫೀಚರ್ ಲಾಂಚ್ ಮಾಡುತ್ತಿವೆ. ವಾಟ್ಸಾಪ್ ಮೂಲಕ ಕ್ಯಾಬ್ ಬುಕ್ (Cab Book) ಮಾಡಲು ಬಳಕೆದಾರರಿಗೆ ಅವಕಾಶ ನೀಡುವುದಾಗಿ ಕಂಪನಿ ಘೋಷಿಸಿದೆ.
WhatsApp ಮಾತೃ ಸಂಸ್ಥೆ ಮೇಟಾ ಮತು ಊಬರ್ ಕಂಪನಿಯು ರೈಡ್ ಬುಕಿಂಗ್ ಸೇವೆಗಳನ್ನು ಸುಲಭವಾಗಿಸಲು ಮೆಸೇಜಿಂಗ್ ಅಪ್ಲಿಕೇಶನ್‌ಗ ವಾಟ್ಸಪ್ ಬಳಕೆಗಾಗಿ ಕೈಜೋಡಿಸಿವೆ. WhatsApp ಮೂಲಕ Uber ಬುಕಿಂಗ್ ಮಾಡುವ ಫೀಚರ್ ಮೊದಲು ಲಖನೌದಲ್ಲಿ (Lucknow) ಲಾಂಚ್ ಆಗುತ್ತಿದೆ. ನಂತರ ಭಾರತದ ಇತರ ಪ್ರಮುಖ ನಗರಗಳಿಗೆ ಕಂಪನಿ ಈ ಯೋಜನೆಯನ್ನು ವಿಸ್ತರಿಸಲಿದೆ. ಪೂರ್ತಿ ಲೇಖನವನ್ನು ಇಲ್ಲಿ ಓದಿ
ಇದನ್ನೂ ಓದಿ:
1) Ola Cabs: ರೈಡ್ ಸ್ವೀಕರಿಸುವ ಮುನ್ನವೇ ಚಾಲಕರಿಗೆ ಡ್ರಾಪ್‌ಲೊಕೇಶನ್, ಪೇಮೆಂಟ್ ಮಾಹಿತಿ ಲಭ್ಯ!
2) Card Stuck in ATM : ಎಟಿಎಂ ಯಂತ್ರದಲ್ಲಿ ಕಾರ್ಡ್ ಸಿಕ್ಕಿಬಿದ್ರೆ ಚಿಂತೆ ಬೇಡ,ಹೀಗೆ ಮಾಡಿ!
3) First Tesla Baby: ಆಟೋಪೈಲಟ್‌ನಲ್ಲಿ ಚಲಿಸುತ್ತಿದ್ದ ಟೆಸ್ಲಾ ಕಾರಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ!