ವಾಟ್ಸ್ಆ್ಯಪ್‌ಗೆ ಶೀಘ್ರ ಫೇಶಿಯಲ್ ರೆಕಗ್ನಿಷನ್?

By Suvarna NewsFirst Published Oct 23, 2020, 4:41 PM IST
Highlights

ಬಳಕೆದಾರರಿಗೆ ನೆರವಾಗಲು ಮತ್ತಷ್ಟು ಹೊಸ  ಫೀಚರ್‌ಗಳನ್ನು ಪರಿಚಯಿಸಲು ಮುಂದಾಗಿದೆ ವಾಟ್ಸ್‌ಆಪ್. ಈಗಾಗಲೇ ಬೀಟಾ ವರ್ಷನ್‌ನಲ್ಲಿ ಫೀಚರ್‌ಗಳನ್ನು ಬಳಸಲಾಗುತ್ತಿದೆ.
 

ಬಹುಶಃ ವಾಟ್ಸ್ಆ್ಯಪ್ ಬಳಕೆಯಾದಷ್ಟು ಬೇರೆ ಯಾವ ಆ್ಯಪ್ ಬಳಕೆಯಾಗುತ್ತಿಲ್ಲ. ಅದರಲ್ಲೂ ಭಾರತದಲ್ಲಂತೂ ವಾಟ್ಸ್ಆ್ಯಪ್ ಬಳಕೆ ಮೀತಿಮೀರಿದೆ ಎನ್ನವಷ್ಟು ಹೆಚ್ಚಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಬಳಕೆದಾರರು ಹೆಚ್ಚಿತ್ತಿರುವ ಹಿನ್ನೆಲೆಯಲ್ಲಿ ವಾಟ್ಸ್ಆ್ಯಪ್ ಹೊಸ ಹೊಸ ಫೀಚರ್ ಗಳನ್ನು ಸೇರಿಸುತ್ತಿರುತ್ತಿದೆ. ಬಳಕೆದಾರರ ಸ್ನೇಹಿ ಫೀಚರ್‌ಗಳನ್ನು ಸೇರಿಸುವ ಮೂಲಕ ಇನ್ನಷ್ಟು ಅವರಿಗೆ ಹತ್ತಿರವಾಗುತ್ತಿದೆ.

ವರದಿಯೊಂದರ ಪ್ರಕಾರ, ಫೇಸ್‌ಬುಕ್ ಮಾಲೀಕತ್ವದ ವಾಟ್ಸ್‌ಆ್ಯಪ್ ಇದೀಗ ಗ್ರೂಪ್ ಕಾಲ್ ಜಾಯಿನ್ ಆಗುವುದನ್ನು ಇನ್ನಷ್ಟು ಸುಲಭಗೊಳಿಸುವುದು ಹೇಗೆ ಎಂಬುದರ ಬಗ್ಗೆ ಕೆಲಸ ಮಾಡುತ್ತಿದೆ. ಇದರ ಜೊತೆಗೆ ಫಿಂಗರ್ ಪ್ರಿಂಟ್ ಅನ್ಲಾಕ್ ಜೊತೆಗೆ ಫೇಶಿಯಲ್ ಅನ್ಲಾಕ್ ಬೆಂಬಲವನ್ನೂ ನೀಡಲು ಮುಂದಾಗುತ್ತಿದೆ ಎನ್ನಲಾಗುತ್ತಿದೆ. ಈಗಾಗಲೇ ವಾಟ್ಸ್ಆ್ಯಪ್ ಆ್ಯಪಲ್ ಫೋನ್ ಬಳಕೆದಾರರಿಗೆ ಫೇಸ್ ಐಡಿ ಹಾಗೂ ಫಿಂಗರ್ ಪ್ರಿಂಟ್ ಐಡಿ ಎರಡಕ್ಕೂ ಬೆಂಬಲ ನೀಡುತ್ತಿದೆ. ಇದೀಗ ಈ ಫೀಚರನ್ನ ಆಂಡ್ರಾಯ್ಡ್ ಬಳಕೆದಾರರಿಗೂ ನೀಡಲು ವಾಟ್ಸ್ಆ್ಯಪ್ ಮುಂದಾಗಿದೆ ಎಂದು WaBetaInfo ವರದಿ ಮಾಡಿದೆ.

5,499 ರೂಪಾಯಿಗೆ ಜಿಯೊನೀ ಸ್ಮಾರ್ಟ್‌ಫೋನ್! ಏನೀದರ ವಿಶೇಷತೆ?

ಈ ವರದಿಯ ಪ್ರಕಾರ, ಜಾಯಿನ್ ಮಿಸ್ಡ್ ಕಾಲ್(Join Missed call) ಫೀಚರ್ ಬಳಕೆದಾರರಿಗೆ ದೊರೆಯಲಿದ್ದು, ಇದರ ಅನ್ವಯ ಬಳಕೆದಾರರು ಈಗಾಗಲೇ ನಡೆಯುತ್ತಿರುವ ಆನ್ ಗೋಯಿಂಗ್ ಗ್ರೂಪ್ ಕಾಲ್‌ನಲ್ಲೇ ನಿಮಗೆ ಜಾಯಿನ್ ಆಗಲು ಈ ಹೊಸ ಫೀಚರ್ ಬೆಂಬಲ ನೀಡುತ್ತದೆ. ಸದ್ಯದ ಸೌಲಭ್ಯದ ಪ್ರಕಾರ, ಒಂದು ವೇಳೆ ಮಿಸ್ಡ್ ಕಾಲ್ ಇದ್ದೋರನ್ನು ನೀವು ಗ್ರೂಪ್ ಕಾಲ್‌ಗೆ ಸೇರಿಸಬೇಕಿದ್ದರೆ  ಮತ್ತೆ ಬಳಕೆದಾರರು ಗ್ರೂಪ್ ಕಾಲ್ ಮರು ಆರಂಭಿಸಬೇಕಿತ್ತು. ಹೊಸ ಫೀಚರ್‌ನಲ್ಲಿ ಈ ತೊಂದರೆ ಇರುವುದಿಲ್ಲ ಎನ್ನಲಾಗುತ್ತಿದೆ.

ಈಗಾಗಲೇ ವಾಟ್ಸ್‌ಆಪ್‌ನಲ್ಲಿ ಫಿಂಗರ್ ಪ್ರಿಂಟ್ ರೆಕಗ್ನೇಷನ್ ಫೀಚರ್ ಇದೆ. ಇದನ್ನು ಇನ್ನಷ್ಟು ಸುಧಾರಿಸಲು ಮುಂದಾಗಿರುವ ವಾಟ್ಸ್‌ಆ್ಯಪ್ ಅದಕ್ಕೆ ಫೇಶಿಯಲ್ ಸಪೋರ್ಟ್ ಒದಗಿಸುತ್ತದೆ. ಅಂದರೆ, ಇದೀಗ ವಾಟ್ಸ್ಆ್ಯಪ್‌ನ್ನು ಫೇಷಿಯಲ್ ರೆಕಗ್ನೇಷನ್‌ನಿಂದಲೂ ಅನ್ಲಾಕ್ ಮಾಡಬಹುದು. ಫಿಂಗರ್ ಪ್ರಿಂಟ್ ಫೀಚರ್ ಬಳಸಲಾಗದ ಪರಿಸ್ಥಿತಿಯಲ್ಲಿ ಈ ಫೇಷಿಯಲ್ ರೆಕಗ್ನೇಷನ್ ಫೀಚರ್ ಬಳಸಬಹದು. ಬಳಕೆದಾರರ ಬಳಸುವ ಫೋನ್‌ನಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್‌ ಇಲ್ಲದಿದ್ದಾಗೂ ವಾಟ್ಸ್ಆ್ಯಪ್‌ಗೆ ಈ ಫೇಷಿಯಲ್ ರೆಕಗ್ನೇಷನ್ ಫೀಚರ್ ಬಳಸಬಹುದು ಎನ್ನುತ್ತದೆ ವರದಿ. ಈ ಎರಡೂ ಫೀಚರ್‌ಗಳು ಶೀಘ್ರವೇ ಆಂಡ್ರಾಯ್ಡ್ ಬಳಕೆದಾರರಿಗೆ ಸಿಗಲಿವೆ ಎನ್ನಲಾಗುತ್ತಿದೆ. ಬೀಟಾ ವರ್ಷನ್‌ನಲ್ಲಿ ಈ ಫೀಚರ್‌ಗಳನ್ನು ಬಳಸಲಾಗುತ್ತಿದೆ.

Google Meetನಲ್ಲಿ ಬ್ರೇಕೌಟ್ ರೂಮ್ ಸೃಷ್ಟಿಸುವುದು ಹೇಗೆ?

ವಾಟ್ಸ್ಆಪ್ ಗ್ರೂಪ್‌ಗಳಿಗಾಗಿ ಹೊಸ ಮ್ಯೂಟ್ ನೋಟಿಫಿಕೇಷನ್, ಆಪ್‌ನ ಸ್ಟೋರೇಜ್ ಸೆಕ್ಷನ್‌ಗೆ ನೂತನ ಇಂಟರ್ಫೇಸ್ ಬಗ್ಗೆಯೂ ವಾಟ್ಸ್ಆಪ್ ಕೆಲಸ ಮಾಡುತ್ತಿದೆ. ಬಗ್ ರಿಪೋರ್ಟ್ ಸಲ್ಲಿಸಲು ಸುಲಭವಾಗವಂತೆಯೂ ಸೌಲಭ್ಯವನ್ನು ವಾಟ್ಸ್ಆ್ಯಪ್ ರೂಪಿಸುತ್ತಿದೆ ಎನ್ನುತ್ತವೆ ವರದಿಗಳು. 

ವಾಟ್ಸ್ಆ್ಯಪ್ ಗ್ರೂಪ್‌ಗಳಿಗಾಗಿ ಹೊಸ ಮ್ಯೂಟ್ ನೋಟಿಫಿಕೇಶನ್, ಆಪ್‌ನ ಸ್ಟೋರೇಜ್ ಸೆಕ್ಷನ್‌ಗೆ ನೂತನ ಇಂಟರ್ಫೇಸ್ ಬಗ್ಗೆಯೂ ವಾಟ್ಸ್ಆ್ಯಪ್ ಕೆಲಸ ಮಾಡುತ್ತಿದೆ. ಬಗ್ ರಿಪೋರ್ಟ್ ಸಲ್ಲಿಸಲು ಸುಲಭವಾಗವಂತೆಯೂ ಸೌಲಭ್ಯವನ್ನು ವಾಟ್ಸ್ಆಪ್ ರೂಪಿಸುತ್ತಿದೆ ಎನ್ನುತ್ತವೆ ವರದಿಗಳು. 

ವಾಟ್ಸ್ಆಪ್ ತನ್ನ ಬಳಕೆದಾರರನ್ನು ಅಪ್‌ಡೇಟ್ ಆಗಿಸುವುದಕ್ಕೆಸತತ ಹೊಸ ಹೊಸ ಫೀಚರ್‌ಗಳನ್ನು ಸೇರಿಸುತ್ತಲೇ ಇರುತ್ತದೆ. ಬಳಕೆದಾರರ ಸ್ನೇಹಿ ಫೀಚರ್‌ಗಳ ಮೂಲಕ ತನ್ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲ ವರ್ಗದವರು, ಎಲ್ಲಾ ಮಾದರಿಯ ಜನರಿಗೆ ಇಷ್ಟವಾಗುವ ರೀತಿಯಲ್ಲಿ ವಾಟ್ಸ್‌ಆಪ್ ರೂಪಿಸುವ ಕೆಲಸವು ನಡೆಯುತ್ತಲೇ ಇರುತ್ತದೆ. ಈ ಹೊಸ ಫೀಚರ್‌ಗಳು ಕೂಡ ಅದರ ಭಾಗವಾಗಿಯೇ ರೂಪಿಸಲಾಗುತ್ತಿದೆ.

Work from home ಮಾಡುತ್ತಿದ್ದೀರಾ? ಹ್ಯಾಕರ್ಸ್ ಬಗ್ಗೆ ಇರಲಿ ಎಚ್ಚರ

click me!