ಹೆಚ್ಚಾಗ್ತಿದೆ ಪಿಂಕ್‌ ವ್ಯಾಟ್ಸ್‌ಆಪ್‌ ಸ್ಕ್ಯಾಮ್‌, ಮೊಬೈಲ್‌ನ ಹ್ಯಾಕ್‌ ಮಾಡೋಕೆ ಬಳಸ್ತಾರೆ ಖದೀಮರು!

By Santosh Naik  |  First Published Jun 22, 2023, 1:17 PM IST

WhatsApp Pink Scam: ಸೋಶಿಯಲ್‌ ಮೀಡಿಯಾದಲ್ಲಿ ನೀವು ಮಾಡುವ ಒಂದೇ ಒಂದು ತಪ್ಪು ನಿಮ್ಮೆಲ್ಲಾ ಡೇಟಾ ಕಳವಿಗೆ ಕಾರಣವಾಗಬಹುದು. ಆದ್ದರಿಂದ ಜನರು ವಾಟ್ಸಾಪ್ ಪಿಂಕ್ ಬಳಸಬಾರದು ಎಂದು ಮುಂಬೈ ಪೊಲೀಸರು ಸಲಹೆ ನೀಡಿದ್ದಾರೆ.


ನವದೆಹಲಿ (ಜೂ.22):ಮುಂಬೈ ಪೊಲೀಸರು ಕೇಂದ್ರ ಸರ್ಕಾರದ ಸಲಹೆಯ ಆಧಾರದ ಮೇಲೆ ವಾಟ್ಸಾಪ್ ಪಿಂಕ್  (WhatsApp Pink) ಎನ್ನುವ ಹೊಸ ವಂಚನೆಯ ಬಗ್ಗೆ ನಾಗರಿಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಮುಂಬೈ ಪೊಲೀಸ್‌ ನೀಡಿರುವ ಸಲಹೆಯ ಪ್ರಕಾರ, 'ನ್ಯೂ ಪಿಂಕ್‌ ಲುಕ್ ವಾಟ್ಸಾಪ್, ವಿತ್‌ ಎಕ್ಟ್ರಾ ಫೀಚರ್‌ (ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಹೊಸ ಪಿಂಕ್ ಲುಕ್ ವಾಟ್ಸಾಪ್)' ಎನ್ನುವ ಮೆಸೇಜ್‌ ಮೂಲಕ ಜನಪ್ರೀಯ ಮೇಸೇಜಿಂಗ್‌ ಸಾಫ್ಟ್‌ವೇರ್‌ ಮೂಲಕ ಮೊಬೈಲ್‌ಅನ್ನು ಹ್ಯಾಕ್‌ ಮಾಡಬಹುದು ಎಂದು ಎಚ್ಚರಿಸಿದ್ದಾರೆ. ವರದಿಯ ಪ್ರಕಾರ, "ಸೈಬರ್ ವಂಚನೆಗಳನ್ನು ಮಾಡಲು ಮೋಸಗಾರ ಬಳಕೆದಾರರನ್ನು ತಮ್ಮ ವೆಬ್‌ಗಳಿಗೆ ಸೆಳೆಯಲು ವಂಚಕರು ವಿವಿಧ ಹೊಸ ತಂತ್ರಗಳು ಮತ್ತು ವಿಧಾನಗಳೊಂದಿಗೆ ಬರುತ್ತಾರೆ. ಅಂತಹ ವಂಚನೆಗಳ ಬಗ್ಗೆ ಬಳಕೆದಾರರು ಜಾಗೃತರಾಗಿರುವುದು, ಎಚ್ಚರವಾಗಿರುವುದು ಮತ್ತು ಜಾಗರೂಕರಾಗಿರುವುದು ಮತ್ತು ಡಿಜಿಟಲ್ ಜಗತ್ತಿನಲ್ಲಿ ಸುರಕ್ಷಿತವಾಗಿರುವುದು ಅಗತ್ಯ' ಎಂದಿದ್ದಾರೆ.

ಏನಿದು ವಾಟ್ಸಾಪ್‌ ಪಿಂಕ್‌: ನಿಮಗೆ ಪರಿಚಯವೇ ಇಲ್ಲದ ನಂಬರ್‌ನಿಂದ ಆಂಡ್ರಾಯ್ಡ್‌ ಮೊಬೈ ಬಳಕೆದಾರರಿಗೆ ಫೇಕ್‌ ಲಿಂಕ್‌ ಬರುತ್ತದೆ. ನೀವು ಈ ಲಿಂಕ್‌ ಅನ್ನು ಕ್ಲಿಕ್‌ ಮಾಡಿದ ಬಳಿಕ ತನ್ನಿಂದ ತಾನೇ ಆ ಸಾಫ್ಟ್‌ವೇರ್‌ ನಿಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಆಗುತ್ತದೆ. ಬಳಕೆದಾರರ ಫೋನ್‌ಗೆ ವೈರಸ್‌ ತಗುಲಬಹುದು ಮತ್ತು ವಾಟ್ಸಾಪ್‌ನಲ್ಲಿ ಇತರ ಬಳಕೆದಾರರನ್ನು ಸಂಪರ್ಕಿಸುವ ಜನರ ಮೊಬೈಲ್‌ಗೂ ಈ ವೈರಸ್‌ ಹೋಗಲಿದೆ. ಈ ಸಾಫ್ಟ್‌ವೇರ್‌ ಮೊಬೈಲ್‌ ಬಳಕೆದಾರನಿಗೆ ಗೊತ್ತಿಲ್ಲದೇ, ಆತನ ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಆಗುತ್ತದೆ. ಬೇಕಾಬಿಟ್ಟಿ ಜಾಹೀರಾತುಗಳನ್ನು ಈ ವೈರಸ್‌ ಪ್ರದರ್ಶನ ಮಾಡುತ್ತದೆ. ನಕಲಿ ವಾಟ್ಸಾಪ್‌ ಅಪ್ಲಿಕೇಶನ್‌ ಇನ್‌ಸ್ಟಾಲ್‌ ಮಾಡುವ ಬಳಕೆದಾರರು ತಮ್ಮ ಮೊಬೈಲ್‌ನ ನಿಯಂತ್ರಣವನ್ನೇ ಕಳೆದುಕೊಳ್ಳುತ್ತಾರೆ. ಕೊನೆಗೆ ಅವರ ಮೊಬೈಲ್‌ ಸಂಪೂರ್ಣವಾಗಿ ಹ್ಯಾಕ್‌ ಆಗಲಿದೆ. ಅವರ ಪ್ರಮುಖ ವೈಯಕ್ತಿಕ ಡೇಟಾಗಳಾದ ಫೋಟೋ, ಒಟಿಪಿ, ಸಂಪರ್ಕ ಸಂಖ್ಯೆ ಸೇರಿದಂತೆ ಇನ್ನೂ ಕೆಲವು ಅಗತ್ಯ ದಾಖಲೆಗಳನ್ನು ವಂಚಕರು ಪಡೆದುಕೊಳ್ಳಲಿದ್ದಾರೆ.

ಈ ಬೆದರಿಕೆ ಎದುರಾಗಬಹುದು: ತಮ್ಮ ಮೊಬೈಲ್‌ನಲ್ಲಿರುವ ಸಂಪರ್ಕ ಸಂಖ್ಯೆಗಳು ಮತ್ತು ಫೋಟೋಗಳ ದುರುಪಯೋಗ, ಹಣದ ನಷ್ಟ, ಅವರ ವೈಯಕ್ತಿಕ ದಾಖಳೆಗಳ ದುರ್ಬಳಕೆ, ಸ್ಪ್ಯಾಮ್ ಮತ್ತು ಮೊಬೈಲ್ ಮೇಲಿನ ನಿಯಂತ್ರಣದ ನಷ್ಟವನ್ನು ಎದುರಿಸಬಹುದು.

ಪಿಂಕ್ ವಾಟ್ಸಾಪ್ ಬಳಸೋ ಮುನ್ನ ವಹಿಸಿ ಎಚ್ಚರ!

Latest Videos

undefined

ಮುಂಬೈ ಪೊಲೀಸರ ಎಚ್ಚರಿಕೆ: ಮುಂಬೈ ಪೊಲೀಸರು ನೀಡಿರುವ ಸಲಹೆಯಲ್ಲಿ "ನಿಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿದ ನಕಲಿ ಅಪ್ಲಿಕೇಶನ್‌ಗಳನ್ನು ತಕ್ಷಣ ಅನ್‌ಇನ್‌ಸ್ಟಾಲ್ ಮಾಡಿ, ಸರಿಯಾದ ಪರಿಶೀಲನೆ / ದೃಢೀಕರಣವಿಲ್ಲದೆ ಅಪರಿಚಿತ ಮೂಲಗಳಿಂದ ಪಡೆದ ಲಿಂಕ್‌ಗಳನ್ನು ಎಂದಿಗೂ ಕ್ಲಿಕ್ ಮಾಡಬೇಡಿ ಯಾವಾಗಲೂ ಗೂಗಲ್‌ ಪ್ಲೇಸ್ಟೋರ್‌ ಹಾಗೂ ಆಪಲ್‌ ಸ್ಟೋರ್‌ ಅನ್ನು ಬಳಸಿ ಅಥವಾ ಅಧಿಕೃತ ಆಪ್ ಸ್ಟೋರ್ ಮೂಲಕ ಮಾನ್ಯ ವೆಬ್‌ಸೈಟ್‌ನಿಂದ ಅಪ್ಲಿಕೇಶನ್ ಅನ್ನು ಇನ್ಸ್‌ಟಾಲ್‌ ಮಾಡಿಕೊಳ್ಳಿ.  ಯಾವುದೇ ಲಿಂಕ್‌ಗಳನ್ನು ಪರಿಶೀಲನೆ ಇಲ್ಲದೆ ಫಾರ್ವರ್ಡ್ ಮಾಡಬೇಡಿ. ಅಥವಾ ಇತರರಿಗೆ ಸಂದೇಶವನ್ನು ಎಂದಿಗೂ ನಿಮ್ಮ ವೈಯಕ್ತಿಕ ವಿವರಗಳನ್ನು ಅಥವಾ ಲಾಗಿನ್ ರುಜುವಾತುಗಳು/ಪಾಸ್‌ವರ್ಡ್‌ಗಳು/ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿಯಂತಹ ಹಣಕಾಸಿನ ಮಾಹಿತಿಯನ್ನು ಯಾರಿಗೂ ಹಂಚಿಕೊಳ್ಳಬೇಡಿ ಮತ್ತು ಅಂತಹ ಇತರ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಇತರರೊಂದಿಗೆ ಹಂಚಿಕೊಳ್ಳಬೇಡಿ, ಏಕೆಂದರೆ ಅದನ್ನು ದುರುಪಯೋಗಪಡಿಸಿಕೊಳ್ಳಬಹುದು ಮತ್ತು ಅಂತಹ ಪ್ರಯತ್ನಗಳ ಬಗ್ಗೆ ಎಚ್ಚರದಿಂದಿರಿ ಸೈಬರ್ ಅಪರಾಧಿಗಳು. ಸೈಬರ್ ವಂಚಕರ ಕುರಿತಾದ ಎಲ್ಲಾ ರೀತಿಯ ಸುದ್ದಿಗಳ ಬಗ್ಗೆ ಗಮನವಿರಲಿ ಎಂದು ತಿಳಿಸಿದೆ.

ಅಮೇರಿಕಾದಲ್ಲಿ Powassan ವೈರಸ್‌ಗೆ ಒಂದು ಬಲಿ, ಏನಿದು ಹೊಸ ವೈರಸ್?

click me!