ಮಹಿಳೆಯರಿಗೆ ಪ್ರೈವೇಟ್ ಫೀಚರ್ಸ್ ಕುರಿತು ಜಾಗೃತಿ ಮೂಡಿಸಲು ವ್ಯಾಟ್ಸ್ಆ್ಯಪ್ ಮಹತ್ವದ ಹೆಜ್ಜೆ ಇಟ್ಟಿದೆ. ಮಹಿಳಾ ಸುರಕ್ಷತೆ ಜೊತೆ, ಆಪ್ತತೆ, ಗೌಪ್ಯ ಮಾಹಿತಿಗಳ ವಿನಿಮಯಕ್ಕೆ ವ್ಯಾಟ್ಸ್ಆ್ಯಪ್ ಇದೀಗ ನಟಿ ಅನುಷ್ಕಾ ಶರ್ಮಾ ಜೊತೆ ಮಹತ್ವದ ಪಾಲುದಾರಿಕೆ ಮಾಡಿಕೊಂಡಿದೆ.
ನವದೆಹಲಿ(ಜೂ.21) ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವ್ಯಾಟ್ಸ್ಆ್ಯಪ್ ಇತ್ತೀಚೆಗೆ ಹತ್ತು ಹಲವು ಫೀಚರ್ಸ್ ಪರಿಚಯಿಸಿದೆ. ಬಳಕೆದಾರರ ಬೇಡಿಕೆ, ಅನುಕೂಲತೆಗಳಿಗೆ ಅನುಗುಣವಾಗಿ ಹೊಸ ಹೊಸ ಫೀಚರ್ಸ್ ಪರಿಚಯಿಸಿದೆ. ಇದೀಗ ವ್ಯಾಟ್ಸ್ಆ್ಯಪ್ ಮಹಿಳೆಯರಿಗಾಗಿ ವಿಶೇಷ ಕೂಡುಗೆಯನ್ನು ನೀಡುತ್ತಿದೆ. ಮಹಿಳೆಯ ಗೌಪ್ಯತಾ ಫೀಚರ್ಸ್ ಕುರಿತು ಜಾಗೃತಿ ಮೂಡಿಸಲು ಮುಂದಾಗಿದೆ. ಇದಕ್ಕೆ ವಿಶೇಷ ಅಭಿಯಾನ ಆರಂಭಿಸಿದೆ. ಈ ಅಭಿಯಾನ ಮತ್ತಷ್ಚು ಪರಿಣಾಮಕಾರಿಯಾಗಿ ತಲುಪಿಸಲು ವ್ಯಾಟ್ಸ್ಆ್ಯಪ್ ಇದೀಗ ನಟಿ ಅನುಷ್ಕಾ ಶರ್ಮಾ ಜೊತೆ ಒಪ್ಪಂದ ಮಾಡಿಕೊಂಡಿದೆ.
ದೆಹಲಿಯ ಬಹುತೇಕ ಕಡೆಗಳಲ್ಲಿ ಮಾಲ್, ಖಾಸಗಿ ಸ್ಥಳ, ಶೌಚಾಲಯ, ವಿಶ್ರಾಂತಿ ಕೊಠಡಿ ಸೇರಿದಂತೆ ಹಲವೆಡೆ ಕನ್ನಡಿಯಲ್ಲಿ ಮಹಿಳಾ ಪ್ರೈವಸಿ ಸಂದೇಶ ಕಾಣಿಸಿಕೊಳ್ಳಲಿದೆ. ಇದರ ಜೊತೆಗೆ ಕ್ಯೂಆರ್ ಕೋಡ್ ಕೂಡ ನೀಡಲಾಗುತ್ತದೆ. ಈ ಕೋಡ್ ಸ್ಕಾನ್ ಮಾಡಿದರೆ ಮಹಿಳೆಯರ ಗೌಪ್ಯತಾ ಮಾಹಿತಿ ಕುರಿತು ವಿವರಗಳು ಲಭ್ಯವಾಗಲಿದೆ. 4ಕೆ ಎಲ್‌ಇಡಿ ಸ್ಕ್ರೀನ್ ಮೂಲಕವೂ ಈ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.
undefined
ಅಪರಿಚಿತ ಕಾಲ್ ಕಿರಿ ಕಿರಿ ತಪ್ಪಿಸಲು ವ್ಯಾಟ್ಸ್ಆ್ಯಪ್ ಹೊಸ ಫೀಚರ್ಸ್,ಈಡೇರಿತು ಬಳಕೆದಾರರ ಬೇಡಿಕೆ!
ಮಹಿಳೆಯರ ಆಪ್ತ ಸಮಾಲೋಚನೆ, ಗೌಪ್ಯ ವಿಚಾರಗಳು, ಸುರಕ್ಷತೆ ಸೇರಿದಂತೆ ಹಲವು ಮಾಹಿತಿಗಳ ಜಾಗೃತಿಯನ್ನು ವ್ಯಾಟ್ಸ್ಆ್ಯಪ್ ಮಾಡಲಿದೆ. ವ್ಯಾಟ್ಸ್ಆ್ಯಪ್ ಬಳಕೆದಾರರ ಗೌಪ್ಯ ಮಾಹಿತಿಗಳ ಮಿನಿಮಯಕ್ಕೆ ಅವಕಾಶ ನೀಡಲಿದೆ. ಮಹಿಳೆಯರ ಪ್ರೈವಸಿ ಕುರಿತು ಜಾಗೃತಿ ಮೂಡಿಸಲು ವಿಶೇಷ ಅಭಿಯಾನ ಆರಂಭಿಸಿದೆ. ಮಹಿಳೆಯರ ತಮ್ಮ ಗೌಪ್ಯ ವಿಚಾರಗಳ ವಿನಿಮಯ ಹಾಗೂ ಹಂಚಿಕೆಗೆ ವ್ಯಾಟ್ಸ್ಆ್ಯಪ್ ನೆರವಾಗಲಿದೆ ಎಂದು ವ್ಯಾಟ್ಸ್ಆ್ಯಪ್ ಭಾರತದ ಉಪಾಧ್ಯಕ್ಷ ಸಂಧ್ಯ ದೇವನಾಥನ್ ಹೇಳಿದ್ದಾರೆ.
ವ್ಯಾಟ್ಸ್ಆ್ಯಪ್ ಜೊತೆ ಪಾಲುದಾರಿಕೆ ಮಾಡಿದ್ದೇನೆ. ಮಹಿಳೆಯರಲ್ಲಿ ತಮ್ಮ ಗೌಪ್ಯ ವಿಚಾರಗಳ ಕುರಿತು ಜಾಗೃತಿ ಮೂಡಿಸಲು ಒಪ್ಪಂದ ಮಾಡಿಕೊಂಡಿದ್ದೇನೆ. ಮಹಿಳೆಯರ ಸುರಕ್ಷತೆ, ಅವರ ಯೋಗಕ್ಷೇಮ, ಮುಕ್ತವಾಗಿ ಮಾತನಾಡುವ ಅವಕಾಶ, ಖಾಸಗಿ ಸಂಭಾಷಣೆ, ಸ್ನೇಹಿತೆ, ಸಹದ್ಯೋಗಿ, ಪ್ರೀತಿಪಾತ್ರರ ಜೊತೆ ಮನಬಿಚ್ಚಿ ಮಾತನಾಡುವ ಅವಕಾಶವನ್ನು ವ್ಯಾಟ್ಸ್ಆ್ಯಪ್ ಒದಗಿಸಲಿದೆ ಎಂದು ನಟಿ ಅನುಷ್ಕಾ ಶರ್ಮಾ ಹೇಳಿದ್ದಾರೆ.
ವಾಯ್ಸ್ ಮೆಸೇಜ್ ರೀತಿ ವಿಡಿಯೋ ಸಂದೇಶ ಕಳುಹಿಸಿ, ವ್ಯಾಟ್ಸ್ಆ್ಯಪ್ ಹೊಸ ಫೀಚರ್ ಜಾರಿ!
ವ್ಯಾಟ್ಸ್ಆ್ಯಪ್ ಹತ್ತು ಹಲವು ಫೀಚರ್ಸ್ ಪರಿಚಯಿಸಿದೆ. ಇದರಲ್ಲಿ ಅನಗತ್ಯ ಕರೆಯನ್ನು ಸೈಲೆಂಟ್ ಮಾಡುವ ಫೀಚರ್ಸ್ ಕೂಡ ಪರಿಚಯಿಸಿದೆ. ಅಪರಿಚಿತ ಮತ್ತು ಸ್ಪಾಪ್ ಕರೆಗಳ ಕಿರಿಕಿರಿಯಿಂದ ಬಳಕೆದಾರರಿಗೆ ಮುಕ್ತಿ ನೀಡಲು ಫೋನ್‌ನಲ್ಲಿ ಸೇವ್ ಆಗಿಲ್ಲದ ನಂಬರ್‌ಗಳಿಂದ ಬರುವ ಫೋನ್ ಕರೆಗಳನ್ನು ಸ್ವಯಂಚಾಲಿತವಾಗಿ ಸೈಲೆಂಟ್ ಮಾಡುವ ಹೊಸ ಫೀಚರನ್ನು ವಾಟ್ಸಾಪ್ ಬಿಡುಗಡೆ ಮಾಡಿದೆ. ಇದಕ್ಕಾಗಿ ವಾಟ್ಸಾಪ್ ಸೆಟ್ಟಿಂಗ್‌ನಲ್ಲಿ ಸೈಲೆಂಟ್ ಅನ್‌ನೋನ್ ನಂಬರ್ಸ್ ಆಯ್ಕೆಯನ್ನು ಎನೇಬಲ್ ಮಾಡಿದರೆ ಸಾಕು. ಗೊತ್ತಿಲ್ಲದ ನಂಬರ್‌ಗಳಿಂದ ಬರುವ ಕರೆಗಳನ್ನು ವಾಟ್ಸಾಪ್ ಸೈಲೆಂಟ್ ಮಾಡಲಿದೆ. ಈ ಹೊಸ ಫೀಚರನ್ನು ಮಂಗಳವಾರ ಘೋಷಿಸಿದ ಮೆಟಾ ಸಿಇಒ ಮಾರ್ಕ್ ಜ್ಯೂಕರ್ ಬಗ್‌ರ್, ಈಗ ವಾಟ್ಸಾಪ್ ಅನ್‌ನೋನ್ ಕಾಲ್‌ಗಳನ್ನು ಸೈಲೆಂಟ್ ಮಾಡಲಿದೆ. ಆ್ಯಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರು ಈಗ ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.