ಅಪರಿಚಿತ ಕಾಲ್ ಕಿರಿ ಕಿರಿ ತಪ್ಪಿಸಲು ವ್ಯಾಟ್ಸ್ಆ್ಯಪ್ ಹೊಸ ಫೀಚರ್ಸ್,ಈಡೇರಿತು ಬಳಕೆದಾರರ ಬೇಡಿಕೆ!

By Suvarna NewsFirst Published Jun 20, 2023, 3:36 PM IST
Highlights

ಇತ್ತೀಚೆಗೆ ಅನಗತ್ಯ ಕರೆಗಳು ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಹಲವು ಪ್ರಯತ್ನಗಳು ನಡೆಯುತ್ತಿದೆ. ಆದರೆ ಬಳಕೆದಾರರಿಗೆ ಒಂದಲ್ಲ ಒಂದು ಸಮಸ್ಯೆ ತಪ್ಪಿದ್ದಲ್ಲ. ಇದೀಗ ಅನ್ ನೋನ್ ಕಾಲ್ ತಪ್ಪಿಸಲು ವ್ಯಾಟ್ಸ್ಆ್ಯಪ್ ಹೊಸ ಫೀಚರ್ಸ್ ಪರಿಚಯಿಸಿದೆ.

ನವದೆಹಲಿ(ಜೂ.20): ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವ್ಯಾಟ್ಸ್ಆ್ಯಪ್ ಹಲವು ಫೀಚರ್ಸ್ ಪರಿಚಯಿಸಿದೆ. ಇದರ ಜೊತೆಗೆ ಬಳಕೆದಾರರ ಸುರಕ್ಷತೆಗಾಗಿ ಹೆಚ್ಚಿನ ಅನಕೂಲತೆಗಳನ್ನು ಮಾಡಿದೆ. ಇದೀಗ ವ್ಯಾಟ್ಸ್ಆ್ಯಪ್ ಬಳಕೆದಾರರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದೆ. ಇದೀಗ ವ್ಯಾಟ್ಸ್ಆ್ಯಪ್ ಬಳಕೆದಾರರಿಗೆ ಬರುವ ಅನತ್ಯ ಕಾಲ್ ಕಿರಿ ಕಿರಿ ತಪ್ಪಿಸಲು ಹೊಸ ಫೀಚರ್ ಪರಿಚಯಿಸಿದೆ. ಇದೀಗ ಅನ್‌ನೋನ್ ಕಾಲ ಮ್ಯೂಟ್ ಫೀಚರ್ ಪರಿಚಯಿಸಲಾಗಿದೆ. ಈ ಫೀಚರ್ ಮೂಲಕ ಬಳಕೆದಾರರು ತಮ್ಮ ಸಂಪರ್ಕದಲ್ಲಿರದ, ಕಂಪನಿಗಳ, ಅಪರಿಚಿತ ಕರೆಗಳನ್ನು ಸೈಲೆಂಟ್ ಮಾಡಲಿದೆ. ಈ ಮೂಲಕ ಬಳಕೆದಾರರಿಗೆ ವ್ಯಾಟ್ಸ್ಆ್ಯಪ್ ಮೇಲೆ ಸಂಪೂರ್ಣ ನಿಯಂತ್ರಣ ಹಾಗೂ ಸುರಕ್ಷತೆಯನ್ನು ನೀಡಲಿದೆ.

ಅನಗತ್ಯ ಕರೆಗಳ ಕಿರಿಕಿಯಿಂದ ಜನ ಹೈರಾಣಾಗುತ್ತಿದ್ದಾರೆ. ಇದರಿಂದ ವ್ಯಾಟ್ಸ್ಆ್ಯಪ್ ಹೊಸ ಫೀಚರ್ ಪರಿಚಯಿಸಿದೆ. ಅನ್‌ನೋನ್ ಕಾಲ್ ಸೈಲೆಂಟ್ ಫೀಚರ್ ಮೂಲಕ ಯಾವುದೇ ಅಪರಿಚಿತ ಕರೆಗಳು ಮ್ಯೂಟ್ ಆಗಲಿದೆ. ಇದರಿಂದ ಬಳಕೆದಾರರು ಕರೆ ಸ್ವೀಕರಿಸುವ , ಸಮಯ ವ್ಯರ್ಥ ಮಾಡುವ ಅವಶ್ಯಕತೆ ಇಲ್ಲ. ವ್ಯಾಟ್ಸ್ಆ್ಯಪ್ ನೂತನ ಫೀಚರ್ ಕುರಿತು ಬಳಕೆದಾರರು ಸಂತಸ ವ್ಯಕ್ತಪಡಿಸಿದ್ದಾರೆ. 

ವಾಯ್ಸ್ ಮೆಸೇಜ್ ರೀತಿ ವಿಡಿಯೋ ಸಂದೇಶ ಕಳುಹಿಸಿ, ವ್ಯಾಟ್ಸ್ಆ್ಯಪ್ ಹೊಸ ಫೀಚರ್ ಜಾರಿ!

ವ್ಯಾಟ್ಸ್ಆ್ಯಪ್ ಅನ್‌ನೋನ್ ಕಾಲ ಸೈಲೆಂಟ್ ಫೀಚರ್ಸ್ ಬಳಸುವುದು ಹೇಗೆ?
ವ್ಯಾಟ್ಸ್ಆ್ಯಪ್ ಒಪನ್ ಮಾಡಿ
ವ್ಯಾಟ್ಸ್ಆ್ಯಪ್ ಬಲಭಾಗದ ಮೇಲೆ ಇರುವ ಮೆನು ಬಟನ್ ಕ್ಲಿಕ್ ಮಾಡಿ
ಸೆಟ್ಟಿಂಗ್ಸ್ ಆಯ್ಕೆ ಮಾಡಿಕೊಳ್ಳಿ
ಸೆಟ್ಟಿಂಗ್ಸ್ ಆಯ್ಕೆಯಲ್ಲಿ ಪ್ರೈವೈಸಿ ಕ್ಲಿಕ್ ಮಾಡಿ
ಕಾಲ್ಸ್ ಆಯ್ಕೆ ಮಾಡಿ
ಸೈಲೆನ್ಸ್ ಅನ್‌ನೋ್ ಕಾಲರ್ಸ್ ಎನೇಬಲ್ ಮಾಡಿ

ವ್ಯಾಟ್ಸ್ಆ್ಯಪ್ ಸೆಟ್ಟಿಂಗ್ಸ್ ಮೂಲಕ ಹೊಸ ಫೀಚರ್ ಸದುಪಯೋಗ ಪಡೆದುಕೊಳ್ಳಬಹುದು. ಈ ಆಯ್ಕೆ ಕ್ಲಿಕ್ ಮಾಡಿದ ಬಳಿಕ ಬಳಕೆದಾರರಿಗೆ ಬರವು ಅನಗತ್ಯ, ಅಪರಿಚಿತ ಕರೆಗಳ ಕಿರಿಕಿರಿ ತಪ್ಪಲಿದೆ. ಸದ್ಯ ಬೀಟಾ ವರ್ಶನ್‌ನಲ್ಲಿ ನೂತನ ಫೀಚರ್ಸ್ ಲಭ್ಯವಿದೆ. ಬಳಕೆದಾರರು ತಮ್ಮ ವ್ಯಾಟ್ಸ್ಆ್ಯಪ್ ಖಾತೆ ಅಪ್‌ಡೇಟ್ ಮಾಡಿಕೊಳ್ಳಬೇಕು.

Whatsapp ಬಳಕೆದಾರರಿಗೆ ಬಂಪರ್ ಫೀಚರ್, HD ಫೋಟೋ ಕಳುಹಿಸಲು ಅವಕಾಶ!

ವ್ಯಾಟ್ಸ್ಆ್ಯಪ್ ಇತ್ತೀಚೆಗೆ ಬಳಕೆದಾರರ ಅನುಕೂಲಕ್ಕಾಗಿ ಹತ್ತು ಹಲವು ಫೀಚರ್ಸ್ ಪರಿಚಯಿಸಿದೆ. ವ್ಯಾಟ್ಸ್ಆ್ಯಪ್ ಚಾಟ್ ಲಾಕ್ ಫೀಚರ್ಸ್ ಮೂಲಕ ಬಳಕೆಗಾರರು ತಮ್ಮ ಚಾಟ್ ಮೆಸೇಜ್‌ಗಳನ್ನು ಕಾಣದಂತೆ ಲಾಕ್ ಮಾಡಿಕೊಳ್ಳಬಹುದು. ವಾಟ್ಸಾಪ್‌ನಲ್ಲಿ ಕೂಡ ಫೇಸ್‌ಬುಕ್‌, ಟ್ವೀಟರ್‌ ರೀತಿ ‘ಎಡಿಟ್‌ ಮೆಸೇಜ್‌’ ಆಯ್ಕೆ ನೀಡಲಾಗಿದೆ. ಪ್ರಾಯೋಗಿಕವಾಗಿ ಜಾರಿಯಲ್ಲಿದ್ದ ಈ ಆಯ್ಕೆಯು ಇನ್ನು ಎಲ್ಲ ಬಳಕೆದಾರರಿಗೂ ಲಭ್ಯ ಆಗಲಿದೆ ಎಂದು ವಾಟ್ಸಾಪ್‌ ಮಾತೃಸಂಸ್ಥೆ ಕಂಪನಿ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಹಲವರ ಮೊಬೈಲ್‌ನಲ್ಲಿ ಈ ಆಯ್ಕೆ ಲಭ್ಯವಾಗಿದ್ದು, ಕೆಲವರಿಗೆ ಇನ್ನಷ್ಟೇ ಲಭ್ಯ ಆಗಬೇಕಿದೆ. ಸಂದೇಶ ಕಳಿಸಿ 15 ನಿಮಿಷದೊಳಗೆ ಸಂದೇಶವನ್ನು ಎಡಿಟ್‌ ಮಾಡಬಹುದಾಗಿದೆ. ಸಂದೇಶ ಕಳಿಸಿ ಇನ್ನೂ 15 ನಿಮಿಷ ಮೀರದ ವೇಳೆ ಸಂದೇಶದ ಮೇಲೆ ಬೆರಳನ್ನು ಒತ್ತಿ ಹಿಡಿಯಬೇಕು. ಆಗ ‘ಎಡಿಟ್‌ ಮೆಸೇಜ್‌’ ಆಯ್ಕೆಯು ತೆರೆದುಕೊಳ್ಳುತ್ತದೆ. ಆಗ ಸಂದೇಶವನ್ನು ಎಡಿಟ್‌ ಮಾಡಿ ಮತ್ತೆ ಕಳಿಸಬಹುದು ಎಂದು ವಾಟ್ಸಾಪ್‌ ಹೇಳಿದೆ. ಆದರೆ ಸಂದೇಶ ಸ್ವೀಕರಿಸಿದವರು ಅದನ್ನು ಓದಿದ್ದರೆ ಸಂದೇಶ ಎಡಿಟ್‌ ಆಗದು. ಈವರೆಗೆ ಸಂದೇಶ ಎಡಿಟ್‌ ಮಾಡಲು ಸೌಲಭ್ಯ ಇರಲಿಲ್ಲ. ‘ಡಿಲೀಟ್‌’ ಆಯ್ಕೆ ಇತ್ತು.
 

click me!