ವಾಯೇಜರ್-2 ಸಾಧನೆ: ಅಂತರತಾರಾ ವಲಯದಿಂದ ಸಂದೇಶ ರವಾನೆ!

Published : Nov 05, 2019, 03:21 PM ISTUpdated : Nov 05, 2019, 03:28 PM IST
ವಾಯೇಜರ್-2 ಸಾಧನೆ: ಅಂತರತಾರಾ ವಲಯದಿಂದ ಸಂದೇಶ ರವಾನೆ!

ಸಾರಾಂಶ

ಇತಿಹಾಸ ಸೃಷ್ಟಿಸಿದ ನಾಸಾದ ವಾಯೇಜರ್-2 ನೌಕೆ/ ಸೌರಮಂಡಲ ದಾಟಿ ಹೊರ ನಡೆದ ವಾಯೇಜರ್-2/ ಹಿಲಿಯೋಸ್ಪಿಯರ್ ವಲಯ ದಾಟಿ ಮುನ್ನುಗ್ಗಿದ ವಾಯೇಜರ್-2/ ಅಂತರತಾರಾ ವಲಯ ಪ್ರವೇಶಿಸಿದ ಮಾನವ ನಿರ್ಮಿತ ಎರಡನೇ ನೌಕೆ/ ಈ ಹಿಂದೆಯೇ ಅಂತರತಾರಾ ವಲಯ ಪ್ರವೇಶಿಸಿದ್ದ ವಾಯೇಜರ್-1/ ಸೌರಮಂಡಲದಾಚೆಯಿಂದ ಭೂಮಿಗೆ ಮೊದಲ ಸಿಗ್ನಲ್ ರವಾನಿಸಿದ ವಾಯೇಜರ್-2/

ವಾಷಿಂಗ್ಟನ್(ನ.05): ಕನಸು ಕಾಣು, ಅದರ ಸಾಕರಾಕ್ಕೆ ಪರಿಶ್ರಮ ಪಡು, ಸಾಧನೆಯ ಫಲ ಉಣ್ಣು..ಇದಿಷ್ಟೇ ಅಲ್ಲವೇ ಪ್ರಪಂಚದ ತತ್ವಸಾರಗಳೆಲ್ಲವನ್ನೂ ಸೇರಿಸಿ ಕಲಿಸಿದಾಗ  ಸಿಗುವ ಹೂರಣ?

ಅದರಂತೆ 42 ವರ್ಷದ ಹಿಂದೆ ಸೌರಮಂಡಲದ ಅಧ್ಯಯನದ ಕನಸು ಕಂಡು ಉಡಾಯಿಸಲಾಗಿದ್ದ ನಾಸಾದ ವಾಯೇಜರ್-2 ನೌಕೆ, ಇದೀಗ ಸೌರಮಂಡಲವನ್ನೂ ದಾಟಿ ಹೊರನಡೆದಿದೆ.

ಕದ್ದುಮುಚ್ಚಿ ಸೌರಮಂಡಲ ದಾಟಲಿರುವ ವಾಯೇಜರ್-2: ಸೂರ್ಯ ಸುಮ್ನಿರ್ತಾನಾ?

ಸೌರಮಂಡಲದ ಗಡಿ ದಾಟಿ ಬ್ರಹ್ಮಾಂಡದ ಮತ್ತೊಂದು ಮಜಲನ್ನು ತಲುಪಿರುವ ವಾಯೇಜರ್-2 ನೌಕೆ, ಹೊರ ಜಗತ್ತಿನಿಂದ ತನ್ನ ಮೊಟ್ಟ ಮೊದಲ ಸಿಗ್ನಲ್ ರವಾನಿಸಿದೆ.

ಖಗೋಳ ಕ್ಷೇತ್ರದ ಇತಿಹಾಸದಲ್ಲೇ ಮಾನವ ನಿರ್ಮಿತ ನೌಕೆಯೊಂದು, ಸೌರಮಂಡಲದ ಹೊರಗಿನ ಪ್ರದೇಶದಿಂದ ಸಿಗ್ನಲ್ ಕಳುಹಿಸಿರುವುದು ಇದು ಎರಡನೇ ಬಾರಿ. ಈ ಮೊದಲು 2012ರಲ್ಲಿ ಹಿಲಿಯೋಸ್ಪಿಯರ್ ದಾಟಿದ್ದ ವಾಯೇಜರ್-1, ಅಂತರತಾರಾ ವಲಯದಿಂದ ಮೊಟ್ಟ ಮೊದಲ ಸಿಗ್ನಲ್ ರವಾನಿಸಿತ್ತು. 

ಸೌರಮಂಡಲದ ಅಂಚಿನಲ್ಲಿರುವ  ಹಿಲಿಯೋಸ್ಪಿರ್ ಗಡಿ ದಾಟಿ ಅಂತರತಾರಾ ವಲಯವನ್ನು ಪ್ರವೇಶಿಸಿರುವ ವಾಯೇಜರ್-2, ಭೂಮಿಯಿಂದ ಬರೋಬ್ಬರಿ 12 ಬಿಲಿಯನ್ ಮೈಲು ದೂರದಲ್ಲಿದೆ.

ನೌಕೆಯ ಪರಿಕರಗಳು ಸುಸ್ಥಿತಿಯಲ್ಲಿದ್ದು, ಸುಮಾರು 2025ರವರೆಗೂ ನೌಕೆಯಿಂದ ಭೂಮಿಗೆ ಸಂದೇಶ ರವಾನೆಯಾಗಲಿದೆ ಎಂದು ನಾಸಾ ತಿಳಿಸಿದೆ.

ವಾಯೇಜರ್ ಡಿಸ್ಕ್ ಏಲಿಯನ್ ಪಾಲಾದರೆ ಸರ್ವನಾಶ?

ಸೌರ ಮಾರುತದ ಕಣಗಳ ಪರಿಣಾಮವಾಗಿ ಅತ್ಯಂತ ಹೆಚ್ಚಿನ ಒತ್ತಡದ ಪ್ರದೇಶವಾಗಿರುವ ಹಿಲಿಯೋಸ್ಪಿಯರ್ ದಾಟುವುದು ವಾಯೇಜರ್-2 ನೌಕೆಗೆ ಸವಾಲಿನ ಕೆಲಸವಾಗಿತ್ತು ಎಂದು ನಾಸಾ ಹೇಳಿದೆ.

ವಾಯೇಜರ್-2 ನೌಕೆಯ ಅವಳಿ ವಾಯೇಜರ್-1 ಈ ಹಿಂದೆಯೇ ಅಂತರತಾರಾ ವಲಯ ಪ್ರವೇಶಿಸಿದ್ದು, ಇದೀಗ ಹಿಲಿಯೋಸ್ಪಿಯರ್ ದಾಟುವ ಮೂಲಕ ವಾಯೇಜರ್-2 ಕೂಡ ಹೊಸ ಇತಿಃಆಸ ರಚಿಸಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ