ಮಂಗಳ ಗ್ರಹದಲ್ಲಿ ವಿಚಿತ್ರ ಹೊಗೆ: ಮಾನವ ಕಾಲಿಡುವ ಮುನ್ನ ಹೀಗಾದ್ರೆ ಹೇಗೆ?

By nikhil vk  |  First Published Nov 4, 2019, 6:38 PM IST

ಮಂಗಳ ಗ್ರಹದ ಮೇಲ್ಮೈಯಲ್ಲಿ ಕಂಡ ವಿಚಿತ್ರ ದಟ್ಟ ಹೊಗೆ| ನಾಸಾದ ಕ್ಯೂರಿಯಾಸಿಟಿ ರೋವರ್ ಕ್ಯಾಮರಾಗೆ ಸೆರೆಯಾದ ಹೊಗೆ| ಗ್ರಹದ ಮೇಲ್ಮೈಯಲ್ಲಿರುವ ಗಾಲೆ ಕುಳಿಯಲ್ಲಿ ಕಂಡ ಮೋಡಗಳ ಆಕಾರದ ರಚನೆ| ಸುತ್ತಲಿನ ಪ್ರದೇಶದಲ್ಲಿ ಮೋಡಗಳ ರೂಪದಲ್ಲಿ ದಟ್ಟ ಹೊಗೆ ಆವರಿಸುವ ಫೋಟೋ|


ವಾಷಿಂಗ್ಟನ್(ನ.04): ಮಂಗಳ ಗ್ರಹದ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ಕ್ಯೂರಿಯಾಸಿಟಿ ರೋವರ್, ವಿಚಿತ್ರ ಹೊಗೆ ಆವರಿಸಿರುವ ದೃಶ್ಯವೊಂದನ್ನು ಸೆರೆ ಹಿಡಿದಿದೆ.

ಅಂಗಾರಕನಲ್ಲಿ ಒಂದಲ್ಲ, ಎರಡು ಸೂರ್ಯಗ್ರಹಣ: ವಿಡಿಯೋ!

Tap to resize

Latest Videos

undefined

ಮಂಗಳ ಗ್ರಹದ ಮೇಲ್ಮೈಯಲ್ಲಿರುವ ಗಾಲೆ ಕುಳಿಯ ಮಧ್ಯಭಾಗದಲ್ಲಿ ಸಂಶೋಧನೆ ನಡೆಸುತ್ತಿರುವ ಕ್ಯೂರಿಯಾಸಿಟಿ ರೋವರ್, ಸುತ್ತಲಿನ ಪ್ರದೇಶದಲ್ಲಿ ಮೋಡಗಳ ರೂಪದಲ್ಲಿ ದಟ್ಟ ಹೊಗೆ ಆವರಿಸುವ ಫೋಟೋ ರವಾನಿಸಿದೆ.

ಮಂಗಳದ ಮೇಲೆ ನಿಮ್ಮ ಹೆಸರು ಬರೆಯಬೇಕೆ? NASAದಿಂದ ಸುವರ್ಣಾವಕಾಶ!

ಈ ಹೊಗೆಯ ರೂಪಗೊಳ್ಳುವಿಕೆಗೆ ಕಾರಣ ಪತ್ತೆ ಹಚ್ಚುವ ಪ್ರಯತ್ನದಲ್ಲಿರುವ ನಾಸಾ, ಮಂಗಳನ ಮೇಲ್ಮೈ ವಾತಾವರಣದಲ್ಲಿ ಹೊಗೆ ರೂಪುಗೊಳ್ಳುವ ಪ್ರಕ್ರಿಯೆ ನಿಜಕ್ಕೂ ಆಶ್ಚರ್ಯ ತಂದಿದೆ ಎಂದು ಹೇಳಿದೆ.

ಮಂಗಳನ ಅಂಗಳದಲ್ಲಿ ಜೀವಿಗಳಿವೆ: ನಾಸಾ ವಿಜ್ಞಾನಿಯ ಅಚ್ಚರಿಯ ಘೋಷಣೆ!

ಕ್ಯೂರಿಯಾಸಿಟಿ ರವಾನಿಸಿರುವ ಫೋಟೋದಲ್ಲಿ ಬೃಹತ್ ಮೋಡಗಳು ಚಲಿಸುತ್ತಿರುವಂತೆ ಕಾಣುತ್ತಿದ್ದು, ಗಾಲೆ ಕ್ರೇಟರ್ ಸುತ್ತಲೂ ಹೊಗೆ ಆವರಿಸಿರುವುದನ್ನು ಸ್ಪಷ್ಟವಾಗಿ ಕಾಣಬಹುದು.

ಮಂಗಳನಲ್ಲಿತ್ತು ಉಪ್ಪು ಸರೋವರ: ಅಂಗಾರಕ ಅದಿನ್ನೆಷ್ಟು ಕುತೂಹಲಗಳ ಆಗರ?

ಗಾಲೆ ಕ್ರೇಟರ್(ಕುಳಿ):

ಮಂಗಳ ಗ್ರಹದ ಮೇಲ್ಮೈಯಲ್ಲಿ ಕ್ಷುದ್ರಗ್ರಹಗಳ ಅಪ್ಪಳಿಸುವಿಕೆಯಿಂದಾಗಿ ಗಾಲೆ ಕುಳಿ ರಚಿತವಾಗಿದೆ. ಇದು ಸುಮಾರು 96 ಮೈಲಿ(154 ಕಿ.ಮೀ) ಸುತ್ತಳತೆ ಹೊಂದಿದೆ. ಮಧ್ಯದಲ್ಲಿ ಎತ್ತರದ ಪರ್ವತವಿದ್ದು, ಸುತಲ್ಲೂ ನೈಸರ್ಗಿಕ ಗೋಡೆಗಳ ರಚನೆಯನ್ನು ಕಾಣಬಹುದಾಗಿದೆ.

click me!