ಹೊಸ ವರ್ಷಕ್ಕೆ ಬಂಪರ್, 6,999 ರೂ ಬೆಲೆಯಲ್ಲಿ ಲಾವಾ ಯುವ4 ಸ್ಮಾರ್ಟ್‌ಫೋನ್ ಬಿಡುಗಡೆ!

Published : Dec 06, 2024, 04:22 PM IST
ಹೊಸ ವರ್ಷಕ್ಕೆ ಬಂಪರ್, 6,999 ರೂ ಬೆಲೆಯಲ್ಲಿ ಲಾವಾ ಯುವ4 ಸ್ಮಾರ್ಟ್‌ಫೋನ್ ಬಿಡುಗಡೆ!

ಸಾರಾಂಶ

ಲಾವಾ ಮೊಬೈಲ್ಸ್ ಇದೀಗ ಹೊಚ್ಚ ಹೊಸ ಲಾವಾ ಯುವ4 ಮೊಬೈಲ್ ಬಿಡುಗಡೆ ಮಾಡಿದೆ. 6,999 ರೂಪಾಯಿ ಆರಂಭಿಕ ಬೆಲೆಯಲ್ಲಿ  ಫೋನ್ ಲಭ್ಯವಿದೆ. 50ಎಂಪಿ ಕ್ಯಾಮೆರಾ ಸೇರಿದಂತೆ ಹಲವು ಫೀಚರ್ಸ್ ಇದರಲ್ಲಿದೆ.

ಬೆಂಗಳೂರು(ಡಿ.6) ಭಾರತದ ಸ್ಮಾರ್ಟ್‌ಫೋನ್ ಕಂಪನಿ ಲಾವಾ ಮೊಬೈಲ್ಸ್ ಇದೀಗ ಹೊಚ್ಚ ಹೊಸ ಯುವ4 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಬಿಡುಗಡೆಯಲ್ಲೇ ಲಾವಾ ಗಮನಸೆಳೆದಿದೆ. ಕೇವಲ 6,999 ರೂಪಾಯಿ ಆರಂಭಿಕ ಬೆಲೆಯಲ್ಲಿ ಲಾವಾ ಯುವ4 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಈ ಫೋನ್ ಬಿಡುಗಡೆಯಾಗಿದೆ. ಆನ್‌ಲೈನ್ ಹಾಗೂ ರಿಟೇಲ್ ಮಳಿಗೆಯಲ್ಲೂ ಈ ಫೋನ್ ಲಭ್ಯವಿದೆ. ಯೂನಿಸೊಕ್ 1606 ಚಿಪ್ ಸೆಟ್ ಸೇರಿದಂತೆ ಗ್ಲಾಸಿ ವೈಟ್, ಗ್ಲಾಸಿ ಪರ್ಪಲ್ ಮತ್ತು ಗ್ಲಾಸಿ ಬ್ಲಾಕ್ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.

ಲಾವಾ ಯುವ4 ಸ್ಮಾರ್ಟ್‌ಫೋನ್ ಬೆಲೆ
4GB + 64GB: 6,999 ರೂಪಾಯಿ 
4GB + 128GB: 7,499 ರೂಾಪಾಯಿ

ಐಫೋನ್‌ ರೀತಿಯ ಆಕ್ಷನ್‌ ಕೀ, ಡ್ಯುಯೆಲ್‌ ಡಿಸ್‌ಪ್ಲೇ, ಲಾವಾ ಅಗ್ನಿ 5G ಸ್ಮಾರ್ಟ್‌ಫೋನ್‌ ರಿಲೀಸ್‌, ಬೆಲೆಯೆಷ್ಟು ಗೊತ್ತಾ?

ಯುವ 4, 16.55 ಸೆಂ.ಮೀ. (6.56”) ಎಚ್.ಡಿ.+ ಪಂಚ್ ಹೋಲ್ ಡಿಸ್ಪ್ಲೇಯನ್ನು 90 ಹರ್ಟ್ಸ್ ರಿಫ್ರೆಶ್ ರೇಟ್ ನೊಂದಿಗೆ ಸಂಯೋಜನೆಗೊಂಡಿದೆ. ಇದು ಲಾವಾ ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದೆ.  ಯೂನಿಸೊಕ್ 1606 ಚಿಪ್ ಸೆಟ್ ಹೊಂದಿರುವ ಈ ಡಿವೈಸ್ ಎಲ್ಲ ಅಪ್ಲಿಕೇಷನ್ ಉತ್ತಮ ಕಾರ್ಯಕ್ಷಮತೆ ನೀಡಲಿದೆ. ಈ ಚಿಪ್‌ಸೆಟ್‌ನಿಂದ ಯಾವುದೇ ಆ್ಯಪ್‌ಗಳಿಗೆ ಸಪೋರ್ಟ್ ಮಾಡಲಿದೆ.  ಇದರ 5000 ಎಂಎಎಚ್ ಬ್ಯಾಟರಿಯು ಹೊಂದಿದೆ. ಹೀಗಾಗಿ ದೀರ್ಘ ಕಾಲ ಬ್ಯಾಟರಿ ಚಾರ್ಜ್ ಉಳಿಯಲಿದೆ. ಇದರಿಂದ ಚಾರ್ಜ್ ಮುಗಿಯಿತು ಎಂದು ಪದೇ ಪದೇ ಚಾರ್ಜ್ ಮಾಡುವ ಅವಶ್ಯಕತೆ ಇಲ್ಲ.  ಈ ಸ್ಮಾರ್ಟ್ ಫೋನ್ 4 ಜಿಬಿ+ 4ಜಿಬಿ  ರ‍್ಯಾಮ್ ಮತ್ತು 64ಜಿಬಿ ಮತ್ತು 128ಜಿಬಿ ಸ್ಟೋರೇಜ್ ವೇರಿಯೆಂಟ್ ಗಳಲ್ಲಿ ಲಭ್ಯವಿದೆ.  ಹೊಚ್ಚಹೊಸ ಆಂಡ್ರಾಯಿಡ್ 14ರಲ್ಲಿ ನಡೆಯುವ ಯುವ 4 ಸ್ವಚ್ಛ ಮತ್ತು ಇಂಟ್ಯೂಟಿವ್ ಯೂಸರ್ ಇಂಟರ್ ಫೇಸ್ ನೀಡುತ್ತದೆ. 

50 ಎಂಪಿ ರಿಯರ್ ಕ್ಯಾಮರಾ ಮತ್ತು 8 ಎಂಪಿ ಫ್ರಂಟ್ ಕ್ಯಾಮರಾದಿಂದ ಹೊಂದಿದೆ. ಹೀಗಾಗಿ ಕ್ಯಾಮೆರಾ ಕ್ವಾಲಿಟಿ ಉತ್ತಮವಾಗಿದೆ. ಉತ್ತಮ ಫೋಟೋಗಳನ್ನು ಕ್ಲಿಕ್ ಮಾಡಲು ಸಾಧ್ಯವಾಗುತ್ತದೆ.  ಈ ಡಿವೈಸ್ ನ ಪ್ರೀಮಿಯಂ ಗ್ಲಾಸಿ ಬ್ಯಾಕ್ ಡಿಸೈನ್, ಸೈಡ್ ಫಿಂಗರ್ ಪ್ರಿಂಟ್ ಸೆನ್ಸರ್ ಮೂಲಕ ಸೊಗಸು ಮತ್ತು ಉನ್ನತೀಕರಿಸಿದ ಭದ್ರತೆಯ ಸ್ಪರ್ಶ ನೀಡುತ್ತದೆ.  ಯುವ 4 ಸ್ಮಾರ್ಟ್‌ಫೋನ್  1 ವರ್ಷ ವಾರೆಂಟಿ ನೀಡಲಿದೆ.  

 ಯುವ ಸರಣಿಯು ಸತತವಾಗಿ ಉನ್ನತ ಗುಣಮಟ್ಟದ, ಕೈಗೆಟುಕುವ, ಬಳಕೆದಾರರ ಅನುಭವ ಉನ್ನತೀಕರಿಸುವ ಸ್ಮಾರ್ಟ್ ಫೋನುಗಳನ್ನು ಪೂರೈಸುತ್ತಿದೆ. ಯುವ 4 ಮೂಲಕ ನಾವು ಪ್ರವೇಶ ಹಂತದ ಸ್ಮಾರ್ಟ್ ಫೋನ್ ವಲಯವನ್ನು ಮರು ವ್ಯಾಖ್ಯಾನಿಸುವಲ್ಲಿ ಪ್ರಮುಖ ಹೆಜ್ಜೆ ಇರಿಸುತ್ತಿದೆ ಎಂದು ಲಾವಾ ಇಂಟರ್ನ್ಯಾಷನಲ್ ಲಿಮಿಟೆಡ್ ಮುಖ್ಯಸ್ಥ ಸುಧಾಂಶು ಶರ್ಮಾ ಹೇಳಿದ್ದಾರೆ.  ಶಕ್ತಿಯುತ ಕಾರ್ಯಕ್ಷಮತೆ, ಅತ್ಯಾಧುನಿಕ ವಿನ್ಯಾಸ ಮತ್ತು ಅಸಾಧಾರಣ ಬೆಲೆಯಲ್ಲಿ ಹೊಚ್ಚಹೊಸ ವಿಶೇಷತೆಗಳನ್ನು ನೀಡುತ್ತಿದ್ದೇವೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಈ ವಿಶೇಷ ಬಿಡುಗಡೆಯು ನಮ್ಮ ರೀಟೇಲ್ ಪ್ರಥಮ ವಿಧಾನವನ್ನು ಎತ್ತಿ ತೋರಿಸುತ್ತಿದೆ. ದಕ್ಷಿಣ ಭಾರತವು ನಮಗೆ ಪ್ರಮುಖ ಪ್ರಗತಿಯ ವಲಯವಾಗಿದೆ.  ಯುವ 4 ಈ ಪ್ರದೇಶದ ತಂತ್ರಜ್ಞಾನ ಪ್ರಿಯರಿಗೆ ವಿನ್ಯಾಸಗೊಳಿಸಲಾಗಿದೆ. ಇದು ನಮ್ಮ ಗ್ರಾಹಕರಿಗೆ ಮೆಚ್ಚುಗೆಯಾಗುವ ಮೂಲಕ ಈ ಚಲನಶೀಲ ಮಾರುಕಟ್ಟೆಯಲ್ಲಿ ಟಾಪ್ ಬ್ರಾಂಡ್ ಆಗಿ ಹೊರಹೊಮ್ಮಲಿದೆ ಎಂದಿದ್ದಾರೆ.
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಸ್ಮಾರ್ಟ್‌ಫೋನ್‌ ಬೆಲೆ ಏರಿಸಿದ ವಿವೋ, ರಿಯಲ್‌ಮೀ, ಟ್ಯಾಬ್ಲೆಟ್‌ ಬೆಲೆ ಏರಿಸಿದ ಶಿಯೋಮಿ
'AI ನಿಮ್ಮ ಉದ್ಯೋಗ ಕಸಿದುಕೊಳ್ಳಲ್ಲ, ಆದರೆ..'; OPPO ತಜ್ಞರ ಆಘಾತಕಾರಿ ಹೇಳಿಕೆ ವೈರಲ್