
ಮೊಟೊರೊಲಾ ಕಂಪನಿಯಿಂದ ಹೊಸ ಸ್ಮಾರ್ಟ್‌ಫೋನ್ ನಿಮ್ಮ ಬಜೆಟ್‌ನಲ್ಲಿ ಬರಲಿದೆ. ಸಾಮಾನ್ಯ ಮತ್ತು ಕೆಳ ಮಧ್ಯಮ ವರ್ಗದವರಿಗಾಗಿ ಈ 5G ಸ್ಮಾರ್ಟ್‌ಫೋನ್ ಸಿದ್ಧಪಡಿಸಲಾಗಿದ್ದು, ಡಿಸೆಂಬರ್ 10ರಂದು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಡಿವೈಸ್‌ನ್ನು ಗ್ರಾಹಕರು ಆನ್‌ಲೈನ್ ಶಾಪಿಂಗ್ ಫ್ಲಾಟ್‌ಫಾರಂ ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಬಹುದಾಗಿದೆ. ಲೆನೊವಾ ಮಾಲೀಕತ್ವದ ಈ ಕಂಪನಿ ಬಿಡುಗಡೆಗೂ ಮುನ್ನವೇ ಹೊಸ ಸ್ಮಾರ್ಟ್‌ಫೋನಿನ ಬೆಲೆ ಹಾಗೂ ವಿಶೇಷತೆಗಳನ್ನು ಬಿಡುಗಡೆ ಮಾಡಿದೆ. ವಿಶೇಷ ಏನಂದ್ರೆ ಈ ಸ್ಮಾರ್ಟ್‌ಫೋನ್ ಗ್ರಾಹಕರಿಗೆ 10 ಸಾವಿರ ರೂಪಾಯಿಯೊಳಗೆ ದೊರೆಯಲಿದ್ದು, ಇದನ್ನು ಬಜೆಟ್ ಫ್ರೆಂಡ್ಲಿ ಎಂದು ಕರೆಯಲಾಗುತ್ತಿದೆ.
ಮೊಟೊರೊಲಾ ಕಂಪನಿಯ Moto G35 5G ಸ್ಮಾರ್ಟ್‌ಫೋನ್ ಡಿಸೆಂಬರ್ 10ರಂದು ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಆಗಸ್ಟ್‌ನಲ್ಲಿಯೇ ಹಲವು ದೇಶಗಳಲ್ಲಿ Moto G35 5G ಲಾಂಚ್ ಆಗಿದ್ರೂ ಭಾರತದ ಮಾರುಕಟ್ಟೆಗೆ ಬಂದಿರಲಿಲ್ಲ. ಈ ಸ್ಮಾರ್ಟ್‌ಫೋನ್ Unisoc T760 ಪ್ರೊಸೆಸರ್ ಜೊತೆ 6.7 ಇಂಚಿನ ಹೈಕ್ವಾಲಿಟಿಯ ಡಿಸ್‌ಪ್ಲೇಯನ್ನು ಒಳಗೊಂಡಿದೆ. 50MPಯ ಪ್ರೈಮರಿ ಕ್ಯಾಮೆರಾವನ್ನು Moto G35 5G ಸ್ಮಾರ್ಟ್‌ಫೋನ್ ಒಳಗೊಂಡಿದೆ. ಮಲ್ಟಿಮಿಡಿಯಾ ಎಕ್ಸ್‌ಪಿರಿಯನ್ಸ್ ಮತ್ತು ಉತ್ತಮ ಫೋಟೋಗ್ರಾಫಿಯ ಅನುಭವವನ್ನು ಬಳಕೆದಾರರಿಗೆ ನೀಡಲಾಗಿದೆ.
ಯುರೋಪಿಯನ್ ಮಾರುಕಟ್ಟೆಯಲ್ಲಿ ಮೊಟೊರೊಲಾ ಈ ಡಿವೈಸ್ 199 ಯುರೋ (ಅಂದಾಜು 19, 000 ರೂಪಾಯಿ) ಬೆಲೆಯಲ್ಲಿ ಲಾಂಚ್ ಮಾಡಲಾಗಿತ್ತು. ಇದೀಗ ಈ ಸ್ಮಾರ್ಟ್‌ಫೋನ್ ಬೆಲೆ 10,000 ರೂ.ಗಿಂತಲೂ ಕಡಿಮೆಯಾಗಿದೆ. ಇದಕ್ಕೂ ಮೊದಲು Moto G34 ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆಯಲ್ಲಿ ಕೇವಲ 10,999
ರೂಪಾಯಿಗೆ ಬಿಡುಗಡೆ ಮಾಡಲಾಗಿತ್ತು. ಇದೀಗ 5G ಸ್ಮಾರ್ಟ್‌ಫೋನ್‌ನ್ನು ಸಹ ಕಡಿಮೆ ದರದಲ್ಲಿ ಪರಿಚಯಿಸುತ್ತಿದೆ. ಡಿಸೆಂಬರ್ 10ರ ಮಧ್ಯಾಹ್ನ 12 ಗಂಟೆಗೆ Moto G35 5G ಸ್ಮಾರ್ಟ್‌ಫೋನ್ ಲಾಂಚ್ ಆಗಲಿದ್ದು, ಬ್ಲ್ಯಾಕ್, ಗ್ರೀನ್ ಮತ್ತು ರೆಡ್ ಬಣ್ಣಗಳಲ್ಲಿ ಸಿಗಲಿದೆ.
ಇದನ್ನೂ ಓದಿ: ನೋಕಿಯಾದಿಂದ 300MP ಕ್ಯಾಮೆರಾ ಜೊತೆ 7200mAh ಪವರ್‌ಫುಲ್ ಬ್ಯಾಟರಿಯ ವಾಟರ್‌ಪ್ರೂಫ್ ಸ್ಮಾರ್ಟ್‌ಫೋನ್
Moto G35 5G ಫೀಚರ್ಸ್
Moto G35 5G ಸ್ಮಾರ್ಟ್‌ಫೋನ್ 6.7 ಇಂಚಿನ ಡಿಸ್‌ಪ್ಲೇ ಜೊತೆ 120Hz ರಿಫ್ರೆಶ್ ರೇಟ್, 1000nits ಬ್ರೈಟ್‌ನೆಸ್ ಹೊಂದಿರಲಿದೆ. ಸುರಕ್ಷತೆಗಾಗಿ ಮೂರು ತರಹದ ಗೊರಿಲ್ಲಾ ಗ್ಲಾಸ್ ಬಳಸಲಾಗಿದೆ. Unisoc T760 ಪ್ರೊಸೆಸರ್, 8GB RAM ಮತ್ತು 128GB ಸ್ಟೋರೇಜ್ ಒಳಗೊಂಡಿದೆ. ಪ್ರೈಮರಿ ಕ್ಯಾಮೆರಾ 50MP,ಸೆಲ್ಫಿಗಾಗಿ 16MP ಕ್ಯಾಮೆರಾ ನೀಡಲಾಗಿದೆ. 5000mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿಯೊಂದಿಗೆ 18W ಚಾರ್ಜಿಂಗ್ ಸಪೋರ್ಟ್ ಸಿಗಲಿದೆ. ಇನ್ನುಈ ಸ್ಮಾರ್ಟ್‌ಫೋನಿನ ಸ್ಪೀಕರ್ Dolby Atmos ಸಪೋರ್ಟ್ ಮಾಡುತ್ತವೆ. ಬೆಲೆ 10 ಸಾವಿರ ಅಥವಾ ಅದಕ್ಕಿಂತಲೂ ಕಡಿಮೆ ಇರಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ರೆಡ್‌ಮಿಯ 200MP ಕ್ಯಾಮೆರಾ, 5000mAh ಬ್ಯಾಟರಿಯ 5G ಸ್ಮಾರ್ಟ್‌ಫೋನ್ ಬೆಲೆಯಲ್ಲಿ 8 ಸಾವಿರ ರೂಪಾಯಿ ಇಳಿಕೆ
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.