
ಆಫರ್‌ಗಳನ್ನು ಕೊಡುವುದರಲ್ಲಿ ರಿಲಾಯನ್ಸ್ ಜಿಯೋ, ಏರ್‌ಟೆಲ್‌ಗಿಂತ ತಾನು ಕಡಿಮೆಯಿಲ್ಲ ಎಂದು ವೊಡಾಪೋನ್ ಇನ್ನೊಮ್ಮೆ ಸಾಬೀತುಪಡಿಸಿದೆ. ಈದೀಗ 2 ಹೊಸ ಪ್ಲಾನ್‌ಗಳನ್ನು ಬಿಡುಗಡೆ ಮಾಡಿರುವ ವೊಡಾಫೋನ್ ತನ್ನ ಗ್ರಾಹಕರ ಮೇಲೆ 'ಡೇಟಾ'ಧಾರೆ ಹರಿಸಲು ಮುಂದಾಗಿದೆ.
ವೊಡಾಫೋನ್ ಬಿಡುಗಡೆ ಮಾಡಿರುವ ಮೊದಲ ಪ್ಲಾನ್, ರೂ. 511ರದ್ದು. ಇದರಲ್ಲಿ ಗ್ರಾಹಕರು ಅನಿಯಮಿತ ಕಾಲ್ಸ್, 100 ಎಸ್ಸೆಮ್ಮೆಸ್, ಹಾಗೂ ಪ್ರತಿನಿತ್ಯ 2 ಜಿಬಿ ಡೇಟಾ, ಪಡೆಯಬಹುದು. ಆ ಮೂಲಕ 84 ದಿನಗಳ ಈ ಪ್ಲಾನ್‌ನಲ್ಲಿ 168 ಜಿಬಿ ಡೇಟಾ ಪಡೆಯಬಹುದು.
ಇನ್ನೊಂದು ಪ್ಲಾನ್ ರೂ.569ಕ್ಕೆ ಲಭ್ಯವಿದ್ದು, 84 ದಿನಗಳ ಅವಧಿಗೆ ಅನ್‌ಲಿಮಿಟೆಡ್ ಕಾಲ್, 100ಎಸ್ಸೆಮ್ಮೆಸ್ ಜೊತೆಗೆ ಪ್ರತಿದಿನ 3 ಜಿಬಿ ಡೇಟಾ, ಅಂದರೆ 252 ಜಿಬಿ ಡೇಟಾ ಪಡೆಯಬಹುದು.
BSNLನಿಂದ ಭರ್ಜರಿ ದಸರಾ ಆಫರ್; ಜಿಯೋ-ಏರ್‌ಟೆಲ್‌ಗೆ ಸೆಡ್ಡು!
ಆದರೆ ಈ ಹೊಸ ಪ್ಲಾನ್ ಗಳಲ್ಲಿ ವಾಯ್ಸ್ ಕಾಲ್ಸ್ ಅನ್‌ಲಿಮಿಟೆಡ್ ಆಗಿದ್ದರೂ ಪ್ರತಿದಿನ 250 ನಿಮಿಷ ಹಾಗೂ ವಾರಕ್ಕೆ 1000 ನಿಮಿಷದ ಮಿತಿಯನ್ನು ಹೇರಲಾಗಿದೆ.
ಈ ತಿಂಗಳಾರಂಭದಲ್ಲಿ ವೊಡಾಫೋನ್ ಪ್ರೀಪೇಯ್ಡ್ ಗ್ರಾಹಕರಿಗೆ, ರೂ.99 ಹಾಗೂ ರೂ. 109ರ 2 ಹೊಸ ಪ್ಲಾನ್‌ಗಳನ್ನು ಪರಿಚಯಿಸಿತ್ತು..
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.