ಟೆಕ್ಕಿಗಳಿಗೆ ಮೋದಿ ಗುಡ್ ನ್ಯೂಸ್; ಇನ್ಮುಂದೆ ಮರುಗಬೇಕಾಗಿಲ್ಲ!

By Web DeskFirst Published Oct 17, 2018, 4:54 PM IST
Highlights
  • ಐಟಿ ಕಂಪನಿ ಉದ್ಯೋಗಿಗಳಿಗೆ ಸರ್ಕಾರದ ವತಿಯಿಂದ ಹೊಸ ಪ್ಲಾಟ್‌ಫಾರ್ಮ್
  • ಅ.24ರಂದು ನೂತನ ಆ್ಯಪ್ ಬಿಡುಗಡೆಮಾಡಲಿರುವ ಪ್ರಧಾನಿ ಮೋದಿ

ನವದೆಹಲಿ: ತಮ್ಮ ಉದ್ಯೋಗದ ಜೊತೆ ಸಮಾಜಕ್ಕಾಗಿ ಏನಾದರೂ ಮಾಡಬೇಕೆಂಬ ತುಡಿತ ಇರುವ ವೃತ್ತಿಪರರಿಗಾಗಿ ಮೋದಿ ಸರ್ಕಾರ ಯೊಸ ಯೋಜನೆಯನ್ನು ರೂಪಿಸಿದೆ. ವಿರಾಮ ಸಮಯದಲ್ಲಿ ಸಮುದಾಯ ಸೇವೆ ಮಾಡಲು ಸ್ವಯಂಸೇವಕರಾಗ ಬಯಸುವವರಿಗೆ ಹೊಸ  ಮೊಬೈಲ್  ಆ್ಯಪನ್ನು ಕೇಂದ್ರ ಸರ್ಕಾರ ವಿನ್ಯಾಸಗೊಳಿಸಿದ್ದು, ಇದೇ ಅ.24 ಕ್ಕೆ ಪ್ರಧಾನಿ ಮೋದಿ ಬಿಡುಗಡೆಗೊಳಿಸಲಿದ್ದಾರೆ.

MyGov ಅಭಿವೃದ್ಧಿಪಡಿಸಿರುವ #Self4Society ಎಂಬ ಆ್ಯಪ್ ಮೂಲಕ ಸರ್ಕಾರವೇ ಸ್ವಯಂಸೇವಕರಿಗೆ ವೇದಿಕೆಯನ್ನು ಕಲ್ಪಿಸಲಿದೆ. ಸಮಾಜಕ್ಕಾಗಿ ಏನಾದರೂ ಮಾಡಬೇಕು, ಆದರೆ ಸರಿಯಾದ ಮಾರ್ಗದರ್ಶನದ ಕೊರತೆ, ದಿಕ್ಸೂಚಿ ಇಲ್ಲದೇ ಮರುಗುವ ಕಾರ್ಪೊರೆಟ್/ ಐಟಿ ಕಂಪನಿಗಳ ಉದ್ಯೋಗಿಗಳನ್ನು ಮುಂದಿಟ್ಟುಕೊಂಡು ಈ ಆ್ಯಪನ್ನು ಅಭಿವೃದ್ಧಿಪಡಿಸಲಾಗಿದೆ. 

ಬಹಳಷ್ಟು ಕಂಪನಿಗಳು ಸಮಾಜಸೇವಾ ಕಾರ್ಯಗಳನ್ನು ಮಾಡುತ್ತಿವೆ. ಈ ಆ್ಯಪ್ ಮೂಲಕ, ಕೆಲಸದಲ್ಲಿ ಸಮನ್ವಯತೆಯನ್ನು ಸಾಧಿಸಬಹುದಲ್ಲದೇ, ಉತ್ತಮ ಫಲಿತಾಂಶಗಳನ್ನು  ಪಡೆಯುವಲ್ಲಿ ಸಹಕಾರಿಯಾಗಿದೆ. ಜೊತೆಗೆ ಈ ಆ್ಯಪ್‌ನಲ್ಲಿ ಇನ್ಸೆಂಟಿವ್, ಗೇಮ್ಸ್, ಅಂತರ್-ಕಂಪನಿ ಸ್ಪರ್ಧೆಗಳು, ಹಾಗೂ ಸೋಶಿಯಲ್ ನೆಟ್‌ವರ್ಕಿಂಗ್‌ಗೂ ಕೂಡಾ ಅವಕಾಶವಿದೆ. 

ಇಂತಹ ಪ್ರಯೋಗಗಳ ಮೂಲಕ,  ಮೋದಿ ಸರ್ಕಾರದ ಮಹಾತ್ವಾಕಾಂಕ್ಷೆ ಯೊಜನೆಯಾದ ಸ್ವಚ್ಛಭಾರತದಂತಹ ಅಭಿಯಾನಗಳನ್ನು ಪರಿಣಾಮಕಾರಿ ಅನುಷ್ಠಾನ ಮಾಡಬಹುದಾಗಿದೆ. 

ಅ. 24ರಂದು ದೆಹಲಿಯಲ್ಲಿ ಈ ಆ್ಯಪನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದು, ಸುಮಾರು 2000 ವೃತ್ತಿಪರರು ಭಾಗವಹಿಸಲಿದ್ದಾರೆ. ದೇಶದ್ಯಾಂತ ಇನ್ನೂ ಸಾವಿರಾರು ಮಂದಿ ವಿಡಿಯೋ ಲಿಂಕ್ ಮೂಲಕ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 
 

click me!