ಅಗ್ಗದ ಮೊಬೈಲ್‌ ಪ್ರಿಯರಿಗೆ ಮತ್ತೊಂದು ಪಾಕೆಟ್ ಫ್ರೆಂಡ್ಲಿ ಫೋನ್!

By Web Desk  |  First Published Aug 2, 2019, 6:55 PM IST
  • ‘ಪಾಕೆಟ್’ ಫ್ರೆಂಡ್ಲಿ, ಜೊತೆಗೆ  ಟ್ರೆಂಡಿ ಫೋನ್‌ಗಳಿಗೆ ಸೈ ಎನಿಸಿರುವ Vivo
  • Vivoಯಿಂದ ಮತ್ತೊಂದು ಅಗ್ಗದ ಮೊಬೈಲ್‌ ಗ್ರಾಹಕರ ಕೈಗೆ!
  • ಏನಿದೆ? ಹೇಗಿದೆ? ಬೆಲೆ ಎಷ್ಟಿದೆ? ವಿವರ ಇಲ್ಲಿದೆ

ಮಧ್ಯಮ ವರ್ಗದ ಮಂದಿಯನ್ನು ಸೆಳೆಯುತ್ತಿರುವ ಕಂಪನಿ ವಿವೋ ಕಡಿಮೆ ದುಡ್ಡಿಗೆ ಮೊಬೈಲ್‌ ಕೊಡುವ ಕಂಪನಿಗಳ ಸಾಲಿಗೆ ಸೇರಿಕೊಂಡಿದೆ. ಒಳ್ಳೆಯ ಫೀಚರ್‌ ಇರುವ ಅಗ್ಗದ ಮೊಬೈಲ್‌ ಗ್ರಾಹಕರ ಕೈಗೆ ನೀಡುವ ಅವರ ಯೋಜನೆಯ ಫಲವಾಗಿಯೇ ಹೊಸತೊಂದು ಮೊಬೈಲ್‌ ಬಿಡುಗಡೆಯಾಗಿದೆ. ಅದರ ಹೆಸರು Vivo Y90.

ಇದರ ಬೆಲೆ ರು.6990. ಇಂಟರೆಸ್ಟಿಂಗ್‌ ಅಂದ್ರೆ ಈ ಮೊಬೈಲ್‌ 4030 mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ಜಾಸ್ತಿ ಹೊತ್ತು ಬರಲ್ಲ ಅನ್ನುವ ಆರೋಪಕ್ಕೆ ಈ ಮೊಬೈಲ್‌ ಅಪವಾದದಂತಿದೆ. ಅದನ್ನು ಹೊರತು ಪಡಿಸಿದರೆ 6.22 ಇಂಚುಗಳ ಡಿಸ್‌ಪ್ಲೇ ಇದೆ. ಹೀಲಿಯೊ ಎ22 ಕ್ವಾಡ್‌ ಕೋರ್‌ ಪ್ರೊಸೆಸರ್‌ ಇದೆ. 2 GB ರಾರ‍ಯಮ್‌ ಹಾಗೂ 16 GB ಸ್ಟೋರೇಜ್‌ ಇರುವ Vivo Y90 ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ.

Tap to resize

Latest Videos

ಇದನ್ನೂ ಓದಿ | ಮೋಡಿ ಮಾಡೋ ಸೆಲ್ಫಿ ಕ್ಯಾಮೆರಾ! ವಿವೋದ Z1 ಪ್ರೊ ಸ್ಮಾರ್ಟ್ ಪೋನ್ ಮಾರುಕಟ್ಟೆಗೆ

ಕ್ಯಾಮೆರಾ ಸಾಮರ್ಥ್ಯ ಕೂಡ ಪರವಾಗಿಲ್ಲ. ರೇರ್‌ ಕ್ಯಾಮೆರಾ 8 ಮೆಗಾ ಪಿಕ್ಸೆಲ್‌ ಸಾಮರ್ಥ್ಯ ಹೊಂದಿದ್ದರೆ 5 ಮೆಗಾ ಪಿಕ್ಸೆಲ್‌ ಫ್ರಂಟ್‌ ಕ್ಯಾಮೆರಾ ಇದೆ. ಈ ಮೊಬೈಲನ್ನು ಲೋಕಾರ್ಪಣೆಗೊಳಿಸುವ ವೇಳೆಯಲ್ಲಿ ವಿವೋ ನಿರ್ದೇಶಕ ವಿಪುನ್‌ ಮಾರ್ಯ ಒಂದು ಮಾತು ಹೇಳಿದ್ದಾರೆ. ‘ಕಡಿಮೆ ಬೆಲೆಯಲ್ಲಿ ದೊಡ್ಡ ಬ್ಯಾಟರಿ ಮತ್ತು ದೊಡ್ಡ ಡಿಸ್‌ಪ್ಲೇ ಹೊಂದಿರುವ ಮೊಬೈಲ್‌ ಬಯಸುವವರಿಗಾಗಿಯೇ ಈ ಮೊಬೈಲ್‌’ ಅಂತ. ಆ ಮಾತು ಈ ಮೊಬೈಲ್‌ ನೋಡಿದರೆ ಸತ್ಯ ಅನ್ನಿಸುತ್ತದೆ. Vivo Y90 ಸ್ಮಾರ್ಟ್‌ಫೋನ್‌ ಬ್ಲಾಕ್‌ ಹಾಗೂ ಗೋಲ್ಡ್‌ ಬಣ್ಣಗಳಲ್ಲಿ ಸಿಗಲಿದೆ.

click me!