ಭೌತಶಾಸ್ತ್ರದ ಕ್ರಾಂತಿಕಾರಕ ನಿಯಮ ಮಂಡಿಸಿದ್ದ ಐಸಾಕ್ ನ್ಯೂಟನ್| ಖಗೋಳ ಜ್ಞಾನ ವಿಸ್ತರಿಸಿದ ಐಸಾಕ್ ನ್ಯೂಟನ್ ಚಲನೆಯ ನಿಯಮ| ನ್ಯೂಟನ್ ಗುರುತ್ವಾಕರ್ಷಣೆ ನಿಯಮ ತಿರಸ್ಕರಿಸಿದ ಆಧುನಿಕ ಭೌತಶಾಸ್ತ್ರಜ್ಞರು| ಕಲ್ಲುರಂಧ್ರದ ಒಳಗಿನ ಗುರುತ್ವ ನಿಯಮಕ್ಕೆ ತದ್ವಿರುದ್ಧ ಹಿನ್ನೆಲೆ| ಅಲ್ಬರ್ಟ್ ಐನ್’ಸ್ಟೀನ್ ಸಾಪೇಕ್ಷತಾ ಸಿದ್ಧಾಂತದ ಮೇಲೂ ಭೌತಶಾಸ್ತ್ರಜ್ಞರ ಕಣ್ಣು|
ವಾಷಿಂಗ್ಟನ್(ಜು.31): ‘ಪ್ರತಿಯೊಂದು ಕ್ರಿಯೆಯೂ ಸಮನಾದ ಹಾಗೂ ಅಷ್ಟೇ ವಿರುದ್ಧವಾದ ಪ್ರತಿಕ್ರಿಯೆ ಹೊಂದಿರುತ್ತದೆ..’ ಶಾಲಾ ದಿನಗಳಲ್ಲಿ ಐಸಾಕ್ ನ್ಯೂಟನ್’ನ ಚಲನೆಯ ಮೂರನೇ ನಿಯಮವನ್ನು ಓದಿಕೊಂಡೇ ಬೆಳೆದವರು.
ನ್ಯೂಟನ್’ನ ಭೌತಶಾಸ್ತ್ರದ ಈ ನಿಯಮ ಮನುಷ್ಯನ ಖಗೋಳ ಜ್ಞಾನವನ್ನು ವಿಸ್ತರಿಸಿದ್ದು ಸುಳ್ಳಲ್ಲ. ಈ ನಿಯಮವನ್ನು ಆಧರಿಸಿಯೇ ಖಗೋಳ ವಿಜ್ಞಾನಿಗಳು ಹತ್ತು ಹಲವು ಯಶಸ್ವಿ ಖಗೋಳ ಅನ್ವೇಷಣೆ ಕೈಗೊಂಡರು.
undefined
ನ್ಯೂಟನ್’ನ ಚಲನೆಯ ಮೂರು ನಿಯಮಗಳಿಗೆ ಭರ್ತಿ ನೂರು ವರ್ಷಗಳು ತುಂಬಿವೆ. ಅಷ್ಟರಲ್ಲಾಗಲೇ ನ್ಯೂಟನ್ ನಿಯಮವನ್ನು ವಿಜ್ಞಾನಿಗಳು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಇದು ಆಶ್ಚರ್ಯವಾದರೂ ಸತ್ಯ. ನ್ಯೂಟನ್’ನ ಚಲನೆಯ ನಿಯಮವನ್ನು ಆಧುನಿಕ ಭೌತಶಾಸ್ತರ ವಿಜ್ಞಾನಿಗಳು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ.
ನ್ಯೂಟನ್’ನ ಗುರುತ್ವಾಕರ್ಷಣೆ ನಿಯಮ ಕಪ್ಪುರಂಧ್ರದ ಒಳಗಿನ ಗುರುತ್ವ ನಿಯಮಕ್ಕೆ ತದ್ವಿರುದ್ಧವಾಗಿದ್ದು, ಈ ಹಿನ್ನೆಲೆಯಲ್ಲಿ ನ್ಯೂಟನ್ ಗರುತ್ವಾಕರ್ಷಣೆ ನಿಯಮವನ್ನು ತಿರಸ್ಕರಿಸಬಹುದು ಎಂದು ಕ್ಯಾಲಿಫೋರ್ನಿಯಾ ವಿವಿಯ ಆ್ಯಂಡ್ರಿಯಾ ಗೇಜ್ ಅಭಿಪ್ರಾಯಪಟ್ಟಿದ್ದಾರೆ.
ಅದರಂತೆ ಮತ್ತೋರ್ವ ಭೌತಶಾಸ್ತ್ರಜ್ಞ ಅಲ್ಬರ್ಟ್ ಐನ್’ಸ್ಟೀನ್ ಅವರ ಸಾಪೇಕ್ಷತಾ ಸಿದ್ಧಾಂತದ ಕುರಿತೂ ಗಹನವಾದ ಚರ್ಚೆಗಳಾಗುತ್ತಿದ್ದು, ಒಂದು ದಿನ ವಿಜ್ಞಾನ ಜಗತ್ತು ಸಾಪೇಕ್ಷತಾ ಸಿದ್ಧಾಂತವನ್ನೂ ತಿರಸ್ಕರಿಸಿದರೆ ಅಚ್ಚರಿಪಡಬೇಕಿಲ್ಲ.
ನ್ಯೂಟನ್ ಮೂರನೇ ನಿಯಮವು ಪ್ರತಿ ಕ್ರಿಯೆಗೆ ಸಮಾನ ಹಾಗೂ ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ ಎಂದು ತಿಳಿಸುತ್ತದೆ. ಇದರ ಪ್ರಕಾರ ಯಾವುದೇ ವಸ್ತುವಿನ ಮೇಲೆ ಪ್ರಯೋಗಿಸಿದ ಬಲಕ್ಕೆ ಪ್ರತಿಯಾಗಿ ವಿರುದ್ಧ ದಿಕ್ಕಿನಲ್ಲಿ ಮೊದಲ ವಸ್ತುವಿನ ಪ್ರಮಾಣದ ವಿರುದ್ಧ ಬಲ ಪ್ರಯೋಗವಾಗಿರುತ್ತದೆ.